ಟೀಂ ಇಂಡಿಯಾ ಗೇಲಿ ಮಾಡಿದ್ದ ಇಂಗ್ಲೆಂಡ್ ಆಟಗಾರನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ Hardik Pandya

Hardik Pandya vs Michael Vaughan: ಟೀಂ ಇಂಡಿಯಾವನ್ನು ತೆಗಳುವ ಸಂದರ್ಭದಲ್ಲಿ, “ನಾನು ಭಾರತೀಯ ಕ್ರಿಕೆಟ್ ಅನ್ನು ನಡೆಸುತ್ತಿದ್ದರೆ, ನನ್ನ ಹೆಮ್ಮೆಯನ್ನು ಬಿಟ್ಟು ಇಂಗ್ಲೆಂಡ್ ತಂಡದಿಂದ ಕಲಿಯಲು ಪ್ರಯತ್ನಿಸುತ್ತೇನೆ” ಎಂದು ಮೈಕೆಲ್ ವಾನ್ ಹೇಳಿದ್ದರು. “ಹೆಮ್ಮೆ ಬಿಟ್ಟು ಐಸಿಸಿ ಟೂರ್ನಿಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ಇಂಗ್ಲೆಂಡ್‌ನಿಂದ ಬಿಸಿಸಿಐ ಕಲಿಯಬೇಕು” ಎಂದು ಮೈಕಲ್ ವಾನ್ ಹೇಳಿದ್ದರು. ಇದೀಗ ಮೈಕಲ್ ವಾನ್ ಅವರ ಈ ಕಾಮೆಂಟ್ ಗೆ ಹಾರ್ದಿಕ್ ಪಾಂಡ್ಯ ತಕ್ಕ ಉತ್ತರ ನೀಡಿದ್ದಾರೆ.

Written by - Bhavishya Shetty | Last Updated : Nov 16, 2022, 04:59 PM IST
    • ಟೀಂ ಇಂಡಿಯಾದ ಈ ವೈಫಲ್ಯವನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಲೇವಡಿ ಮಾಡಿದ್ದಾರೆ
    • ಗಾಯದ ಮೇಲೆ ಉಪ್ಪು ಎರಚುವ ಭರದಲ್ಲಿ ಮೈಕಲ್ ವಾನ್ ಇಂತಹ ಕಾಮೆಂಟ್ ಮಾಡಿದ್ದರು
    • ಮೈಕಲ್ ವಾನ್ ಕಾಮೆಂಟ್ ಗೆ ಹಾರ್ದಿಕ್ ಪಾಂಡ್ಯ ತಕ್ಕ ಉತ್ತರ ನೀಡಿದ್ದಾರೆ
ಟೀಂ ಇಂಡಿಯಾ ಗೇಲಿ ಮಾಡಿದ್ದ ಇಂಗ್ಲೆಂಡ್ ಆಟಗಾರನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ Hardik Pandya title=
Hardik Pandya

Hardik Pandya vs Michael Vaughan: 2022 ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೋಲಿನ ನಂತರ, ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಟೀಂ ಇಂಡಿಯಾದ ಈ ವೈಫಲ್ಯವನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಲೇವಡಿ ಮಾಡಿದ್ದಾರೆ. ಟೀಂ ಇಂಡಿಯಾದ ಗಾಯದ ಮೇಲೆ ಉಪ್ಪು ಎರಚುವ ಭರದಲ್ಲಿ ಮೈಕಲ್ ವಾನ್ ಇಂತಹ ಕಾಮೆಂಟ್ ಮಾಡಿದ್ದು, ಯಾವ ಭಾರತೀಯನಿಗೂ ಅದು ಇಷ್ಟವಾಗುವುದಿಲ್ಲ.

ಇದನ್ನೂ ಓದಿ: IPL 2023ರಲ್ಲಿ ಕೋಟಿ ಕೋಟಿ ಹಣ ಗಳಿಸಲಿದ್ದಾರೆ ಈ ಆಟಗಾರರು: ಭಾರತೀಯರಿಗಿಲ್ಲ ಸ್ಥಾನ!

ಟೀಂ ಇಂಡಿಯಾವನ್ನು ತೆಗಳುವ ಸಂದರ್ಭದಲ್ಲಿ, “ನಾನು ಭಾರತೀಯ ಕ್ರಿಕೆಟ್ ಅನ್ನು ನಡೆಸುತ್ತಿದ್ದರೆ, ನನ್ನ ಹೆಮ್ಮೆಯನ್ನು ಬಿಟ್ಟು ಇಂಗ್ಲೆಂಡ್ ತಂಡದಿಂದ ಕಲಿಯಲು ಪ್ರಯತ್ನಿಸುತ್ತೇನೆ” ಎಂದು ಮೈಕೆಲ್ ವಾನ್ ಹೇಳಿದ್ದರು. “ಹೆಮ್ಮೆ ಬಿಟ್ಟು ಐಸಿಸಿ ಟೂರ್ನಿಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ಇಂಗ್ಲೆಂಡ್‌ನಿಂದ ಬಿಸಿಸಿಐ ಕಲಿಯಬೇಕು” ಎಂದು ಮೈಕಲ್ ವಾನ್ ಹೇಳಿದ್ದರು. ಇದೀಗ ಮೈಕಲ್ ವಾನ್ ಅವರ ಈ ಕಾಮೆಂಟ್ ಗೆ ಹಾರ್ದಿಕ್ ಪಾಂಡ್ಯ ತಕ್ಕ ಉತ್ತರ ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕರಾಗಿ ನೇಮಕಗೊಂಡಿದ್ದಾರೆ. ಟೀಂ ಇಂಡಿಯಾ ನವೆಂಬರ್ 18 ರಿಂದ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಪ್ರಾರಂಭಿಸಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ಮೈಕಲ್ ವಾನ್ ಅವರಿಗೆ ಒಂದು ಉತ್ತರ ನೀಡುವುದರ ಮೂಲಕ ಮಾತನಾಡುವುದನ್ನು ನಿಲ್ಲಿಸಿದರು.

ಹಾರ್ದಿಕ್ ಪಾಂಡ್ಯ, “ನಾವು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಜನರು ಕೆಟ್ಟದಾಗಿ ಆಡುವಾಗ ಇದೇ ರೀತಿಯ ಮಾತುಗಳನ್ನು ಹೇಳುತ್ತಾರೆ, ಅದನ್ನು ನಾವು ಗೌರವಿಸುತ್ತೇವೆ. ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾರೆ. ನಾವು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ” ಎಂದು ಕಟುವಾಗಿ ಉತ್ತರಿಸಿದ್ದಾರೆ.

ಇದನ್ನೂ ಓದಿ: FIFA World Cupನಲ್ಲಿ ಮೈತೋರಿಸುವಂತೆ ಬಟ್ಟೆ ಧರಿಸುವಂತಿಲ್ಲ: ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ ಖಂಡಿತ

ಭಾರತದ ಸೆಮಿಫೈನಲ್ ಸೋಲಿನ ನಂತರ, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್, 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತ ಏನನ್ನೂ ಸಾಧಿಸಿಲ್ಲ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಯಾವಾಗಲೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ ಎಂದು ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News