ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್-ವಿಜೇತರ ಪ್ರೇಮ್ ಕಹಾನಿ

ಟೀಮ್ ಇಂಡಿಯಾದ 'ದಿ ವಾಲ್' ಎಂದೇ ಯಶಸ್ವಿಯಾದ ರಾಹುಲ್ ದ್ರಾವಿಡ್ ಮೈದಾನದಲ್ಲಿ ಮಾತ್ರವಲ್ಲ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಯಶಸ್ವಿಯಾಗಿದ್ದಾರೆ.

Last Updated : Apr 25, 2020, 02:32 PM IST
ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್-ವಿಜೇತರ ಪ್ರೇಮ್ ಕಹಾನಿ title=

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid), 'ದಿ ವಾಲ್' ಹೆಸರಿನಿಂದಲೂ ಹೆಸರುವಾಸಿಯಾಗಿದ್ದಾರೆ, ಅವರು ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಕ್ರೀಡಾಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದರು. ಭಾರತೀಯ ತಂಡದ ಭರವಸೆಯ ನಾಯಕ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾಕ್ಕೆ ಅನೇಕ ಅದ್ಭುತ ವಿಜಯಗಳನ್ನು ನೀಡಿದ್ದಾರೆ. ಅವರ ನಿವೃತ್ತಿಯ ನಂತರ ಅಭಿಮಾನಿಗಳು ಇಂದಿಗೂ ಸಹ ಮೈದಾನದಲ್ಲಿ ಅವರನ್ನು ಬಹಳ ಮಿಸ್ ಮಾಡ್ಕೊತಾರೆ. ಆದರೆ ಇಂದು ನಾವು ರಾಹುಲ್ ದ್ರಾವಿಡ್ ಅವರ ಆಟದ ಬಗ್ಗೆ ಮಾತನಾಡುವುದಿಲ್ಲ ಆದರೆ ಅವರ ವೈಯಕ್ತಿಕ ಜೀವನ, ಅವರ ಪ್ರೇಮಕಥೆ ಬಗ್ಗೆ ಮಾತನಾದಲಿದ್ದೇವೆ. ಏಕೆಂದರೆ ಪ್ರತಿಯೊಬ್ಬರೂ ವೈದ್ಯರಾದ ವಿಜೇತ ಪಂಧರ್ಕರ್ ಮತ್ತು ರಾಹುಲ್ ದ್ರಾವಿಡ್ ನಡುವೆ ಪ್ರೇಮ ಹೇಗೆ ಮತ್ತು ಯಾವಾಗ ಪ್ರಾರಂಭವಾಯಿತು ಎಂಬ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದಾರೆ.

ವಿಜೇತ ಅವರ ತಂದೆ ಭಾರತೀಯ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದರು, ಈ ಕಾರಣದಿಂದಾಗಿ ತಂದೆಗೆ ಸ್ಥಳಾಂತರಗೊಂಡಂತೆ ವಿಜೇತ ತನ್ನ ಬಾಲ್ಯವನ್ನು ಅನೇಕ ನಗರಗಳಲ್ಲಿ ಕಳೆದರು. ಅವರ ತಂದೆಯ ನಿವೃತ್ತಿಯ ನಂತರ ಅವರ ಕುಟುಂಬವು ನಾಗ್ಪುರಕ್ಕೆ ಸ್ಥಳಾಂತರಗೊಂಡಿತು. ವಿಜೇತ ಅವರು 2002ರಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿವಿಧ ನಗರಗಳಲ್ಲಿ ಪೋಸ್ಟ್ ಮಾಡಲಾಗುತ್ತಿದ್ದ ಕಾರಣ ವಿಜೇತರ ತಂದೆ 1968-1971ರವರೆಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಿಜೇತರ ಕುಟುಂಬ ರಾಹುಲ್ ದ್ರಾವಿಡ್ ಅವರ ಕುಟುಂಬದೊಂದಿಗೆ ಸಂಪರ್ಕಕ್ಕೆ ಬಂದಿತು. ಆ ವರ್ಷಗಳಲ್ಲಿ ರಾಹುಲ್ ದ್ರಾವಿಡ್ ಮತ್ತು ವಿಜೇತರ ತಂದೆ ಉತ್ತಮ ಸ್ನೇಹಿತರಾಗಿದ್ದರು. ಇದರೊಂದಿಗೆ ಇಬ್ಬರ ಕುಟುಂಬವೂ ಪರಸ್ಪರ ಹತ್ತಿರವಾಯಿತು.

ಕುಟುಂಬದ ನಡುವಿನ ಸ್ನೇಹದಿಂದಾಗಿ ಸ್ನೇಹಿತರಾಗಿ ಪರಿಚರಿಯವಾದ ರಾಹುಲ್ ದ್ರಾವಿಡ್ ಹಾಗೂ ವಿಜೇತರ ನಡುವಿನ ಸ್ನೇಹ ಕ್ರಮೇಣ ಬೆಳೆದು ನಂತರದ ದಿನಗಳಲ್ಲಿ ಪ್ರೇಮಾಂಕುರವಾಗಿ ಬದಲಾಯಿತು. ರಾಹುಲ್ ಮತ್ತು ವಿಜೇತ ಇಬ್ಬರೂ ಮರಾಠಿ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ಇಬ್ಬರ ಪ್ರೀತಿಗೆ ಕುಟುಂಬದಿಂದ ಯಾವುದೇ ಅಡೆ-ತಡೆ ಇರಲಿಲ್ಲ.  ಆದರೆ ವಿಜೇತರ ಸ್ನಾತಕೋತ್ತರ ಪದವಿ ಮುಗಿದಿರಲಿಲ್ಲ. ಜೊತೆಗೆ 2003ರಲ್ಲಿ ರಾಹುಲ್ ವಿಶ್ವಕಪ್ ಪ್ರವಾಸಕ್ಕೆ ಹೋಗಬೇಕಾಗಿತ್ತು, ಇದಕ್ಕಾಗಿ ಅವರು ಸಾಕಷ್ಟು ಸಿದ್ಧತೆಗಳನ್ನು ನಡೆಸುವ ಅವಶ್ಯಕತೆ ಇತ್ತು. ಅಂತಹ ಪರಿಸ್ಥಿತಿಯಲ್ಲಿ ಅವರಿಬ್ಬರ ಕುಟುಂಬಗಳು ಮದುವೆಗಾಗಿ ಕಾಯುವುದು ಸೂಕ್ತವೆಂದು ಪರಿಗಣಿಸಿದರು, ಇದರಿಂದಾಗಿ ರಾಹುಲ್ ಅವರ ಆಟದ ಬಗ್ಗೆ ಸಂಪೂರ್ಣ ಗಮನ ಹರಿಸಬಹುದು ಎಂದು ಅವರು ತೀರ್ಮಾನಿಸಿದರು. ಆದರೆ ವಿಶ್ವಕಪ್‌ಗೆ ಮೊದಲು ರಾಹುಲ್ ಮತ್ತು ವಿಜೇತ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ನಿಶ್ಚಿತಾರ್ಥದ ನಂತರ ವಿಜೇತ  ರಾಹುಲ್ ಅವರನ್ನು ವಿಶ್ವಕಪ್‌ನಲ್ಲಿ ಹುರಿದುಂಬಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು.

'ದಿ ವಾಲ್' ರಾಹುಲ್ ದ್ರಾವಿಡ್ ಕ್ರಿಕೆಟ್ ಜರ್ನಿಯ ಒಂದು ಝಲಕ್

ವಿಶ್ವಕಪ್ (World Cup) ಪ್ರವಾಸದಿಂದ ಹಿಂದಿರುಗಿದ ಬಳಿಕ 2003ರ ಮೇ 4 ರಂದು ಬೆಂಗಳೂರಿನಲ್ಲಿ ಇಬ್ಬರೂ ಸಾಂಪ್ರದಾಯಿಕ ಪದ್ಧತಿಗಳೊಂದಿಗೆ ವಿವಾಹದ ಪವಿತ್ರ ಬಂಧದಲ್ಲಿ ಬಂಧಿಸಲ್ಪಟ್ಟರು. ಒಂದು ರೀತಿಯಲ್ಲಿ, ರಾಹುಲ್ ಮತ್ತು ವಿಜೇತರ ವಿವಾಹವು ಪ್ರೀತಿ ಮತ್ತು ಕುಟುಂಬದ ಒಪ್ಪಿಗೆಯ ವಿವಾಹವಾಗಿದೆ. ನಂತರ 2005ರಲ್ಲಿ ವಿಜೇತರು ರಾಹುಲ್ ಅವರ ಮೊದಲ ಮಗ ಸಮಿತ್ಗೆ ಜನ್ಮ ನೀಡಿದರು, ನಂತರ 2009ರಲ್ಲಿ ಎರಡನೇ ಮಗ ಅನ್ವೇಗೆ ಜನ್ಮ ನೀಡಿದರು. ಇಂದು ಇಬ್ಬರೂ ಸಂತೋಷದ ವೈವಾಹಿಕ ಜೀವನ ನಡೆಸುತ್ತಿದ್ದು ಇತರರಿಗೂ ಮಾದರಿಯಾಗಿದ್ದಾರೆ.
 

Trending News