ನನಗೆ ನಿಮ್ಮ ಯಾವುದೇ ಟ್ಯಾಗ್ ಅಥವಾ ಹೆಡ್ ಲೈನ್ ಗಳು ಬೇಕಾಗಿಲ್ಲ- ವಿರಾಟ್ ಕೊಹ್ಲಿ

     

Last Updated : Feb 17, 2018, 12:37 PM IST
ನನಗೆ ನಿಮ್ಮ ಯಾವುದೇ ಟ್ಯಾಗ್ ಅಥವಾ ಹೆಡ್ ಲೈನ್ ಗಳು ಬೇಕಾಗಿಲ್ಲ- ವಿರಾಟ್ ಕೊಹ್ಲಿ  title=

ನವದೆಹಲಿ:  ದಕ್ಷಿಣ ಆಫ್ರಿಕಾದ ವಿರುದ್ದ 5-1 ರಲ್ಲಿ ಏಕದಿನ ಸರಣಿ ಜಯ ಸಾಧಿಸಿದ ನಂತರ ಪತ್ರಿಕಾಗೋಷ್ಟಿಗೆ ಮಾತನಾಡಿದ ವಿರಾಟ್ ಕೊಹ್ಲಿ " ನನಗೆ ನಿಮ್ಮ ಯಾವುದೇ ಟ್ಯಾಗ್ ಅಥವಾ ಹೆಡ್ ಲೈನ್ ಗಳು ಬೇಕಾಗಿಲ್ಲ" ಎಂದು  ಈ ಹಿಂದೆ ಪಂದ್ಯಗಳಲ್ಲಿ ವಿಫಲವಾದಾಗ ಬಂದ ಟೀಕೆಗಳಿಗೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.  

ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರು ಶತಕಗಳನ್ನು ಗಳಿಸಿ ಭಾರತ ತಂಡದ ಏಕದಿನ ಸರಣಿ ಗೆಲುವಿಗೆ ಕಾರಣರಾದ  ಕೊಹ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ " ನನಗೆ ಯಾವುದೇ ಟ್ಯಾಗ್ ಅಥವಾ ಹೆಡ್ ಲೈನ್ ಗಳು ಬೇಕಾಗಿಲ್ಲ, ನಾನು ನನ್ನ ಕರ್ತ್ಯವನ್ನು ಮಾತ್ರ ನಿರ್ವಹಿಸುತ್ತಿದ್ದೇನೆ, ಇಷ್ಟ ಬಂದಂತೆ ಬರೆದುಕೊಳ್ಳುವುದು ತಮಗೆ ಬಿಟ್ಟದ್ದು, ನಾನು ಯಾವುದೇ ಹೆಸರಿನಿಂದರಿಂದಲೂ ಕರೆದುಕೊಳ್ಳಲು ಇಚ್ಚಿಸುವುದಿಲ್ಲ. ಅದು ನನ್ನ ಕೆಲಸ ಎಂದು ಪ್ರತಿಕ್ರಯಿಸಿದರು. ಇನ್ನು ಮುಂದುವರೆದು ಮಾತನಾಡಿದ ಕೊಹ್ಲಿ "ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಹೊರತು ಯಾರನ್ನು ಮೆಚ್ಚಿಸಲು ಅಲ್ಲ ಎಂದು ಖಾರವಾಗಿ ಮಾಧ್ಯಮಗಳನ್ನು ತರಾಟೆಗೆ ತಗೆದುಕೊಂಡರು.

Trending News