ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡವು ಐದು ವಿಕೆಟ್ ಗಳ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ತಲುಪಿದೆ.
ಇದನ್ನೂ ಓದಿ- Gautam Gambhir: ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಭಾರತಕ್ಕೆ ಐಸಿಸಿ ಪ್ರಶಸ್ತಿ ಗೆಲ್ಲುತ್ತಾರೆ- ಗೌತಮ್ ಗಂಭೀರ್
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ಆಸೀಸ್ ತಂಡವು ಪಾಕ್ ತಂಡವನ್ನು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ 176 ರನ್ ಗಳಿಗೆ ನಿಯಂತ್ರಿಸಿತು.ಪಾಕಿಸ್ತಾನದ ಪರವಾಗಿ ರಿಜವಾನ್( 67) ಬಾಬರ್ ಅಜಂ(39) ಫಖಾರ್ ಜಮಾನ್ (55) ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತ 170 ರ ಗಡಿದಾಟುವಲ್ಲಿ ಯಶಸ್ವಿಯಾದರು.
The Finishers #T20WorldCup pic.twitter.com/Ll91Ur5pQY
— cricket.com.au (@cricketcomau) November 11, 2021
ಇದನ್ನೂ ಓದಿ-ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್
ಈ 177 ರನ್ ಗಳ ಗುರಿಯನ್ನು ಬೆನ್ನತ್ತಿದ ಆಸೀಸ್ ತಂಡವು 19 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 177 ರನ್ ಗಳನ್ನು ಗಳಿಸಿತು. ಆಸೀಸ್ ಪರವಾಗಿ ಡೇವಿಡ್ ವಾರ್ನರ್ 49, ಮಾರಕಸ್ ಸ್ಟೋನಿಸ್ 40, ಮ್ಯಾಥೂ ವಡೆ 41,ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ರೋಚಕ ಗೆಲುವನ್ನು ಸಾಧಿಸಿತು.ಅದರಲ್ಲೂ 19 ನೇ ಓವರ್ ನಲ್ಲಿ ಶಾಹಿನ್ ಆಫ್ರಿದಿ ಓವರ್ ನಲ್ಲಿ ವಡೆ ಸಿಡಿಸಿದ ಮೂರು ಸಿಕ್ಸರ್ ಗಳಿಂದಾಗಿ ಪಂದ್ಯವು ಸುಲಭವಾಗಿ ಆಸೀಸ್ ನಂತೆ ವಾಲುವಂತೆ ಮಾಡಿತು.ಈಗ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ತಂಡವನ್ನು ಫೈನಲ್ ನಲ್ಲಿ ಎದುರಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.