ICC Test Team Rankings : ಐಸಿಸಿ ಟೆಸ್ಟ್ ತಂಡದ ಶ್ರೇಯಾಂಕ: ಆರಂಭಿಕ ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ದೆಹಲಿ ತಲುಪಿದೆ. ಫೆಬ್ರವರಿ 17 ರಿಂದ ದೆಹಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ತಂಡ ಆಡಬೇಕಿದೆ. ಈ ಪಂದ್ಯಕ್ಕೂ ಟೀಂ ಇಂಡಿಯಾಗೆ ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೈವಾಡವಿದೆಯಾ? ಎಂಬ ಸಂಶಯ ಮೂಡುತ್ತಿದೆ. ವಾಸ್ತವವಾಗಿ, ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ಬಿಡುಗಡೆ ಮಾಡಿದೆ, ಇದರಲ್ಲಿ ಟೀಂ ಇಂಡಿಯಾಗೆ ಮಹಾ ಮೋಸವಾಗಿದೆ.
ಕೆಲವೇ ಗಂಟೆಗಳಲ್ಲಿ 2ನೇ ಸ್ಥಾನಕ್ಕೆ ಕುಸಿದಿದ ಭಾರತ ತಂಡ
ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಮತ್ತೆ ನಂಬರ್-2 ಗೆ ಕುಸಿದಿದೆ. ಇಂದು (ಫೆ.15) ಮಧ್ಯಾಹ್ನ 1.30ಕ್ಕೆ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾ ಸಂಜೆ ವೇಳೆಗೆ 2ನೇ ಸ್ಥಾನಕ್ಕೆ ಕುಸಿದಿದೆ. ಐಸಿಸಿ ಸಂಜೆ 7 ಗಂಟೆಗೆ ರ್‍ಯಾಂಕಿಂಗ್‌ನಲ್ಲಿ ಅನ್ನು ಅಪ್ಡೇಟ್ ಮಾಡಿದೆ, ಇಲ್ಲಿ ಭಾರತ ತಂಡವು 2 ನೇ ಸ್ಥಾನದಲ್ಲಿದೆ. ಇದರಿಂದ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಭಾರಿ ಆಘಾತವಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಕೋಪದಿಂದ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Team India : ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ತಂಡ ಟೀಂ ಇಂಡಿಯಾ!
ಆಸ್ಟ್ರೇಲಿಯಾಗೆ ಮತ್ತೆ ನಂಬರ್-1 ಪಟ್ಟ
ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ತಂಡ ಇದೀಗ ಮತ್ತೊಮ್ಮೆ ನಂಬರ್-1 ಸ್ಥಾನಕ್ಕೆ ಬಂದಿದೆ. ಬುಧವಾರ ಮಧ್ಯಾಹ್ನ ಐಸಿಸಿ ವೆಬ್‌ಸೈಟ್‌ನಲ್ಲಿ ರ್‍ಯಾಂಕಿಂಗ್ ಅಪ್ಡೇಟ್ ಮಾಡಿದ್ದೂ, ಅದರಲ್ಲಿ ಟೀಂ ಇಂಡಿಯಾಗೆ 115 ರೇಟಿಂಗ್ ಪಾಯಿಂಟ್ ತೋರಿಸುತ್ತಿದೆ, ಆಸ್ಟ್ರೇಲಿಯಾ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2 ನೇ ಸ್ಥಾನದಲ್ಲಿದೆ. ಸಂಜೆಯ ಹೊತ್ತಿಗೆ ರ್‍ಯಾಂಕಿಂಗ್ ಅಂಕಿಅಂಶ ಸಂಪೂರ್ಣವಾಗಿ ಬದಲಾಗಿದೆ.
ಈಗಿದೆ ಈ ಪರಿಸ್ಥಿತಿ
ಆಸ್ಟ್ರೇಲಿಯಾ ಈಗ 126 ರೇಟಿಂಗ್ ಅಂಕಗಳನ್ನು ಹೊಂದಿದೆ. ಹಾಗೆ, ಭಾರತ ತಂಡವು 115 ರೇಟಿಂಗ್ ಅಂಕಗಳನ್ನು ಹೊಂದಿದೆ. ಇಂಗ್ಲೆಂಡ್ 107 ರೇಟಿಂಗ್ ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 102 ರೇಟಿಂಗ್ ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಕೇವಲ 99 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದೆ.
ಟೀಂ ಇಂಡಿಯಾ ಮೂರು ಬಾರಿ ಟೆಸ್ಟ್‌ನಲ್ಲಿ ನಂಬರ್-1 ಪಟ್ಟ
ಇದೀಗ ಭಾರತ ತಂಡ ಮತ್ತೊಮ್ಮೆ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂಬರ್-1 ಸ್ಥಾನಕ್ಕಾಗಿ ಕಾಯಬೇಕಾಗಿದೆ. ಈ ಮೊದಲು ಭಾರತ ಕ್ರಿಕೆಟ್ ತಂಡ ಮೂರು ಬಾರಿ ಟೆಸ್ಟ್ ಟಾಪರ್ ಆಗಿ ಹೊರಹೊಮ್ಮಿದೆ. 1973 ರಲ್ಲಿ ಮೊದಲ ಬಾರಿಗೆ, ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂಬರ್-1 ತಲುಪಿತು. ಇದರ ನಂತರ, ಭಾರತ ಈ ಸ್ಥಾನವನ್ನು ಗಳಿಸಲು ಹಲವು ವರ್ಷಗಳನ್ನು ತೆಗೆದುಕೊಂಡಿತು. 2009 ರಲ್ಲಿ, ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ, ಟೀಂ ಇಂಡಿಯಾ ಟೆಸ್ಟ್‌ನಲ್ಲಿ ಅಗ್ರ ಸ್ಥಾನಮಾಕ್ಕೆ ಏರಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2016ರಲ್ಲಿ ಅಗ್ರಸ್ಥಾನಕ್ಕೇರಿ ನಾಲ್ಕು ವರ್ಷಗಳ ಕಾಲ ಇದೇ ಸ್ಥಾನದಲ್ಲಿತ್ತು.
ಇದನ್ನೂ ಓದಿ : Virat Kohli : ʼಕಿಂಗ್ ಕೊಹ್ಲಿ ನಾಯಕತ್ವʼ ಕಳೆದುಕೊಳ್ಳಲು ದಾದಾ ʼಗಂಗೂಲಿʼ ಕಾರಣ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.