ನಿರ್ಣಾಯಕ ಪಂದ್ಯದಲ್ಲಿ ಕೊನೆಗೂ ಗೆದ್ದ ಭಾರತ: ಸೆಮೀಸ್ ಹಾದಿ ಎಷ್ಟು ಕಠಿಣ!?

ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Written by - Zee Kannada News Desk | Last Updated : Mar 22, 2022, 08:11 PM IST
  • ಯಸ್ತಿಕಾ ಭಾಟಿಯಾ ಮತ್ತು ಶಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ
  • ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತೀಯ ವನಿತೆಯರು
  • ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ
ನಿರ್ಣಾಯಕ ಪಂದ್ಯದಲ್ಲಿ ಕೊನೆಗೂ ಗೆದ್ದ ಭಾರತ: ಸೆಮೀಸ್ ಹಾದಿ ಎಷ್ಟು ಕಠಿಣ!? title=
ಟೀಂ ಇಂಡಿಯಾದ ಸೆಮಿಫೈನಲ್ ಆಸೆ ಜೀವಂತ!

ನವದೆಹಲಿ: ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿ ಬಾಂಗ್ಲಾದೇಶ(INDW vs BANW)ದ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್(Seddon Park Hamilton) ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು(ಮಾ.22) ನಡೆದ ಪಂದ್ಯದಲ್ಲಿ ಕೇವಲ 119 ರನ್‌ಗಳಿಗೆ ಬಾಂಗ್ಲಾ ಆಲೌಟ್‌ ಆಗುವ ಮೂಲಕ ಭಾರತದ ಸೆಮೀಸ್‌ ಕನಸನ್ನು ಜೀವಂತವಾಗಿರಿಸಿತು. ತಾನಾಡಿದ 6 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿರುವ ಭಾರತ ಅಂಕಪಟ್ಟಿಯಲ್ಲಿ ಕೊಂಚ ಚೇತರಿಕೆ ಕಂಡಿದೆ.  

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಮಿಥಾಲಿ ರಾಜ್‌ ಪಡೆ ಉತ್ತಮ ಆರಂಭ ಕಂಡಿತ್ತು. ಮೊದಲ ವಿಕೆಟ್‍ಗೆ ಸ್ಮೃತಿ ಮಂದಾನ(Smriti Mandhana) ಮತ್ತು ಶಫಾಲಿ ವರ್ಮಾ 74 ರನ್‌ ಜೊತೆಯಾಟವಾಡಿದರು. 15ನೇ ಓವರ್ ನ ಕೊನೆ ಎಸೆತದಲ್ಲಿ 30 ರನ್ ಗಳಿಸಿದ್ದ ಸ್ಮೃತಿ ವಿಕೆಟ್ ಒಪ್ಪಿಸಿದರು. ಬಳಿಕ 2 ವಿಕೆಟ್ ಗಳು ಬಹುಬೇಗ ಉರುಳಿದ ಪರಿಣಾಮ ಟೀಂ ಇಂಡಿಯಾಗೆ ಆಘಾತವುಂಟಾಯಿತು. ಶಫಾಲಿ ವರ್ಮಾ 42 ರನ್ ಗಳಿಸಿ ಔಟಾದರೆ, ಯಸ್ತಿಕಾ ಭಾಟಿಯಾ (50 ರನ್) ಭರ್ಜರಿ ಅರ್ಧಶತಕ ಭಾರಿಸಿ ಮಿಂಚಿದರು.

ಇದನ್ನೂ ಓದಿ: IPL 2022: ಐಪಿಎಲ್‌ನಲ್ಲಿ ಮತ್ತೆ ಪ್ರಸಿದ್ಧ ಮಹಿಳಾ ಆ್ಯಂಕರ್‌ ಎಂಟ್ರಿ

ನಾಯಕಿ ಮಿಥಾಲಿ ರಾಜ್(Mithali Raj) ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ರಿಚಾ ಘೋಷ್(26), ಪೂಜಾ ವಸ್ತ್ರಾಕರ್(30) ಹಾಗೂ ಸ್ನೇಹ ರಾಣಾ(27) ಮಿಂಚುವ ಮೂಲಕ ತಂಡವನ್ನು 200 ಗಡಿ ದಾಟಿಸಿದರು. 230 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾ 40.3 ಓವರ್‌ಗಳಲ್ಲಿ ಕೇವಲ 119 ರನ್‍ಗಳಿಗೆ ಆಲೌಟ್‌ ಆಯಿತು.

ಬಾಂಗ್ಲಾದೇಶ(Bangladesh)ದ ಪರ 32 ರನ್‌ ಗಳಿಸಿದ ಸಲ್ಮಾ ಖತುನ್‌ ಅವರದ್ದೇ ಅತ್ಯಧಿಕ ಸ್ಕೋರ್‌. ಭಾರತದ ಪರ ಸ್ನೇಹ ರಾಣಾ 4 ವಿಕೆಟ್‌ ಪಡೆದರೆ, ಪೂಜಾ ವಸ್ತ್ರಾಕರ್‌, ಜೂಲನ್‌ ಗೋಸ್ವಾಮಿ ತಲಾ 2 ವಿಕೆಟ್‌ ಕಿತ್ತು ಮಿಂಚಿದರು. ಬಾಂಗ್ಲಾ ತಾನಾಡಿರುವ 5 ಪಂದ್ಯಗಳ ಪೈಕಿ 4ನೇ ಸೋಲು ಇದಾಗಿದ್ದು, ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಈ ಮೂಲಕ ಭಾರತ ತಂಡವು ಅಂಕಪಟ್ಟಿಯಲ್ಲಿ 1 ಸ್ಥಾನ ಜಿಗಿತ ಕಂಡು 3ನೇ ಸ್ಥಾನಕ್ಕೇರಿದೆ.

ಇದನ್ನೂ ಓದಿ: Virat Kohli : ಇನ್ನೂ 3 ದಿನಗಳ ನಂತರ RCB ಕ್ಯಾಂಪ್ ಗೆ ವಿರಾಟ್ ಕೊಹ್ಲಿ ಎಂಟ್ರಿ!

ಭಾರತದ ಸೆಮಿಫೈನಲ್‌ ಹಾದಿ ಹೇಗೆ?

ಈಗಾಗಲೇ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಪ್ರವೇಶಿಸಿದ್ದು, ಇನ್ನುಳಿದ 3 ತಂಡಗಳ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಭಾರತ +0.768 ನೆಟ್‌ ರನ್‌ ರೇಟ್‌ ಹೊಂದಿದ್ದು, ತನ್ನ ಕೊನೆಯ ಲೀಗ್‌ ಪಂದ್ಯವನ್ನು 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ದ ಮಾರ್ಚ್‌ 27ರಂದು ಆಡಲಿದೆ. ಈ ಪಂದ್ಯದ ಫಲಿತಾಂಶ ಸೆಮಿಫೈನಲ್‌(Semi-Final) ತಲುಪಲಿರುವ ತಂಡಗಳ ಭವಿಷ್ಯವನ್ನು ನಿರ್ಧರಿಸಲಿದೆ.   

ಈ ಪಂದ್ಯಕ್ಕೂ ಮುನ್ನಮಾರ್ಚ್‌ 24ರಂದು ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ(ICC Womens World Cup 2022) ನಡುವೆ ನಡೆಯಲಿರುವ ಪಂದ್ಯವೂ ಅತ್ಯಂತ ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌(West Indies) ಗೆದ್ದರೆ ಭಾರತದ ಸೆಮೀಸ್‌ ಆಸೆ ಮತ್ತಷ್ಟು ಹತ್ತಿರವಾಗಲಿದೆ. ವಿಂಡೀಸ್‌ ಈಗಾಗಲೆ 4ನೇ ಸ್ಥಾನದಲ್ಲಿದ್ದು, ನೆಟ್‌ ರನ್‌ ರೇಟ್‌ ಕಡಿಮೆ ಹೊಂದಿರುವುದರಿಂದ ಭಾರತಕ್ಕೆ ಇದು ಹೆಚ್ಚಿನ ಲಾಭವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News