IND vs ENG: ಟೀಂ ಇಂಡಿಯಾ ಸೋಲಿಗೆ ಕೊಹ್ಲಿ-ದ್ರಾವಿಡ್ ಕಾರಣವೆಂದು ಫ್ಯಾನ್ಸ್ ಆಕ್ರೋಶ

ಟೀಂ ಇಂಡಿಯಾ ನೀಡಿದ್ದ 378 ರನ್‍ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

Written by - Puttaraj K Alur | Last Updated : Jul 5, 2022, 07:56 PM IST
  • ಅಂತಿಮ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾ
  • ಬೃಹತ್ ಮೊತ್ತವನ್ನೇ ಚೇಸ್ ಮಾಡಿ ಸರಣಿ ಸೋಲಿನಿಂದ ಪಾರಾದ ಇಂಗ್ಲೆಂಡ್
  • ಟೀಂ ಇಂಡಿಯಾ ಸೋಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಕಾರಣರೆಂದು ಫ್ಯಾನ್ಸ್ ಆಕ್ರೋಶ
IND vs ENG: ಟೀಂ ಇಂಡಿಯಾ ಸೋಲಿಗೆ ಕೊಹ್ಲಿ-ದ್ರಾವಿಡ್ ಕಾರಣವೆಂದು ಫ್ಯಾನ್ಸ್ ಆಕ್ರೋಶ title=
ಭಾರತಕ್ಕೆ ಹೀನಾಯ ಸೋಲು

ನವದೆಹಲಿ: ಬರ್ಮಿಂಗ್‌ಹ್ಯಾಮ್‍ನ ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ವಿರುದ್ಧ ಬೃಹತ್ ರನ್‍ ಚೇಸ್‍ ಮಾಡಿ ಗೆಲ್ಲುವಲ್ಲಿ ಆಂಗ್ಲರು ಯಶಸ್ವಿಯಾದರು. ಪರಿಣಾಮ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಭಾರತ ಹೀನಾಯ ಸೋಲು ಕಾಣಬೇಕಾಯಿತು. ಇದರಿಂದ 2-2ರಿಂದ ಸರಣಿ ಸಮಬಲವಾದಂತಾಯಿತು.  

ಟೀಂ ಇಂಡಿಯಾ ನೀಡಿದ್ದ 378 ರನ್‍ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ಪರ ಜೋ ರೂಟ್(ಅಜೇಯ 142) ಮತ್ತು ಜಾನಿ ಬೈರ್ಸ್ಟೋವ್(ಅಜೇಯ 114) ಭರ್ಜರಿ ಶತಕ ಭಾರಿಸಿ ಭಾರತಕ್ಕೆ ವಿಲನ್ ಆದರು. ಮೊದಲ ಇನ್ನಿಂಗ್ಸ್‍ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಆಂಗ್ಲರು 2ನೇ ಇನ್ನಿಂಗ್ಸ್ ನಲ್ಲಿ ಭಾರತೀಯ ಬೌಲರ್‍ಗಳನ್ನು ಕಾಡಿದರು. ಇಂಗ್ಲೆಂಡ್ ದಾಂಡಿಗರ ಆಟಕ್ಕೆ ಟೀಂ ಇಂಡಿಯಾ ಬೌಲರ್‍ಗಳು ಸುಸ್ತಾಗಿ ಹೋದರು.

ಇದನ್ನೂ ಓದಿ: ಭಾರತ-ಇಂಗ್ಲೆಂಡ್‌ ಸಂಬಂಧಿಸಿ ಮೀಮ್‌ ಶೇರ್‌ ಮಾಡಿದ ಕ್ರಿಕೆಟ್‌ ದಿಗ್ಗಜ: ಇದರ ಅರ್ಥವೇನು!

ಟೀಂ ಇಂಡಿಯಾ ಸೋಲಿಗೆ ಕೊಹ್ಲಿ-ದ್ರಾವಿಡ್ ಕಾರಣ!

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಇಂಗ್ಲೆಂಡ್ ಗೆಲ್ಲುವಲ್ಲಿ ಯಶಸ್ವಿಯಾಯಿತು. ಗೆಲ್ಲುವ ಪಂದ್ಯದಲ್ಲಿ ಕೈಚೆಲ್ಲಿದ ಟೀಂ ಇಂಡಿಯಾ ಇದೀಗ ಕ್ರಿಕೆಟ್ ಪ್ರೇಮಿಗಳಿಂದ ಟೀಕೆಗೆ ಗುರಿಯಾಗಿದೆ. ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನ ಬಳಿಕ ಫ್ಯಾನ್ಸ್ ವಿರಾಟ್ ಕೊಹ್ಲಿ ಮತ್ತು ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ಸೋಲಿಗೆ ಕೊಹ್ಲಿ ಮತ್ತು ದ್ರಾವಿಡ್ ನೇರ ಕಾರಣವೆಂದು ಫ್ಯಾನ್ಸ್ ಕಿಡಿಕಾರಿದ್ದಾರೆ. ವಿವಿಧ ರೀತಿಯಲ್ಲಿ ಫನ್ನಿ ಫನ್ನಿ ಮೀಮ್ಸ್‍ಗಳನ್ನು ಹರಿಬಿಡುವ ಮೂಲಕ ಟೀಂ ಇಂಡಿಯಾ ಆಟಗಾರರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕೋಚ್ ಆಗಿ ರಾಹುಲ್ ದ್ರಾವಿಡ್ ಸಮರ್ಥ ತಂಡವನ್ನು ಸಂಘಟಿಸಲು ವಿಫಲರಾದರೆ, ಕೊಹ್ಲಿ ಅಹಂಕಾರದಿಂದ ಉತ್ತಮ ಪ್ರದರ್ಶನ ನೀಡದೆ ತಂಡದ ಸೋಲಿಗೆ ಕಾರಣರಾದರು ಎಂದು ಅಭಿಮಾನಿಗಳು ಟೀಕಾಪ್ರಹಾರ ನಡೆಸಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದ ಇಂಗ್ಲೆಂಡ್ ಸರಣಿ ಸೋಲಿನಿಂದ ಪಾರಾಗಿದೆ. ಆದರೆ ಸೋಲು ಕಂಡ ಟೀಂ ಇಂಡಿಯಾ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿದೆ.

ಇದನ್ನೂ ಓದಿ: Ind vs Eng: ಟೀಂ ಇಂಡಿಯಾ ಸೋಲಿನ ಸುಳಿಗೆ ಸೇರಲು ಕಾರಣ ಇವರೇ!

 ಸ್ಕೋರ್ ವಿವರ:-

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 84.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 416 ರನ್ ಗಳಿಸಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 61.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 284 ರನ್ ಗಳಿಸಿ ತೀವ್ರ ಹಿನ್ನೆಡೆ ಅನುಭವಿಸಿತ್ತು. 132 ರನ್ ಗಳ ಮುನ್ನಡೆ ಕಾಯ್ದುಕೊಂಡಿದ್ದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ 81.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು.  378 ರನ್‍ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ 76.4 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 7 ವಿಕೆಟ್ ಗಳ ಗೆಲುವು ಸಾಧಿಸಿತು. ಜಾನಿ ಬೈರ್ಸ್ಟೋವ್ ಪಂದ್ಯಶ್ರೇಷ್ಠ ಗೌರವಕ್ಕೆ ಬಾಜನರಾದರೆ, ಜೋ ರೂಟ್ ಮತ್ತು ಜಸ್ಪ್ರೀತ್ ಬುಮ್ರಾ ಜಂಟಿಯಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಡೆದುಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News