IND vs SL: ರೋಹಿತ್‌ ಪಡೆಯಲ್ಲಿ ಕೊಹ್ಲಿಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್

IND vs SL: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡದ ಮತ್ತೊಂದು ದೊಡ್ಡ ಸಮಸ್ಯೆ ಬಗೆಹರಿದಿದೆ. ವಾಸ್ತವವಾಗಿ, ಭಾರತ ಈಗ ಮಧ್ಯಮ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿಗಿಂತ ಬಲಿಷ್ಠ ಬ್ಯಾಟ್ಸ್‌ಮನ್‌ನನ್ನು ಪಡೆದಿದೆ.

Written by - Yashaswini V | Last Updated : Feb 28, 2022, 07:22 AM IST
  • ಬಗೆಹರಿಯಿತು ಟೀಂ ಇಂಡಿಯಾದ ಬಿಗ್ ಟೆನ್ಶನ್
  • ಮಧ್ಯಮ ಕ್ರಮಾಂಕಕ್ಕೆ ಮಾರಕ ಆಟಗಾರ
  • ಶ್ರೀಲಂಕಾ ವಿರುದ್ಧ ಶಕ್ತಿ ಪ್ರದರ್ಶನ
IND vs SL: ರೋಹಿತ್‌ ಪಡೆಯಲ್ಲಿ ಕೊಹ್ಲಿಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್ title=
Team India Rohit Sharma

IND vs SL: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಭಾರತ ತಂಡ ಶ್ರೀಲಂಕಾವನ್ನು ಏಕಪಕ್ಷೀಯವಾಗಿ 3-0 ಅಂತರದಿಂದ ಸೋಲಿಸಿತು. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲು ನ್ಯೂಜಿಲೆಂಡ್ ನಂತರ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾವನ್ನು ಸೋಲಿಸಿತು. ರೋಹಿತ್ ನಾಯಕತ್ವದಲ್ಲಿ ಭಾರತ ತಂಡದ ಮತ್ತೊಂದು ದೊಡ್ಡ ಸಮಸ್ಯೆ ಬಗೆಹರಿದಿದೆ. ವಾಸ್ತವವಾಗಿ, ಟೀಂ ಇಂಡಿಯಾ ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೊರತೆಯನ್ನು ಎದುರಿಸುತ್ತಿತ್ತು. ಇದು ಶ್ರೀಲಂಕಾ ಸರಣಿಯ ನಂತರ ಕೊನೆಗೊಂಡಿದೆ. ರೋಹಿತ್‌ಗೆ ವಿರಾಟ್‌ಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್ ಸಿಕ್ಕಿದ್ದಾರೆ. 

ಟೀಂ ಇಂಡಿಯಾಗೆ ಮಾರಕ ಬ್ಯಾಟ್ಸ್‌ಮನ್ ಸಿಕ್ಕಿದ್ದಾರೆ:
ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಒತ್ತಡ ನಿಧಾನವಾಗಿ ದೂರವಾಗುತ್ತಿದೆ. ಹೌದು, ಭಾರತಕ್ಕೆ ತಂಡದ ಭವಿಷ್ಯವಾಗಿರುವ ಮತ್ತೊಬ್ಬ ಮಾರಕ ಬ್ಯಾಟ್ಸ್‌ಮನ್‌ ಸಿಕ್ಕಿದ್ದಾರೆ. ಈ ಬ್ಯಾಟ್ಸ್‌ಮನ್‌ನ ಹೆಸರು ಶ್ರೇಯಸ್ ಅಯ್ಯರ್ (Shreyas Iyer). ಅಯ್ಯರ್ ಶ್ರೀಲಂಕಾ ಸರಣಿಯ ಹೀರೋ ಆಗಿದ್ದಾರೆ. ಶ್ರೇಯಸ್ ಅಯ್ಯರ್ ಮೂರು ಪಂದ್ಯಗಳಲ್ಲಿ 204 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಅಚ್ಚರಿಯೆಂದರೆ ಇಡೀ ಸರಣಿಯಲ್ಲಿ ಈ ಬ್ಯಾಟ್ಸ್‌ಮನ್ ಒಮ್ಮೆಯೂ ಔಟಾಗಲಿಲ್ಲ. ಅಯ್ಯರ್ ಕೊನೆಯ ಟಿ20ಯಲ್ಲಿ ಕೂಡ ಅಜೇಯ 73 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದರು. ಈ ಬ್ಯಾಟ್ಸ್‌ಮನ್ ಭಾರತದ ವಿಶ್ವಕಪ್ ಭರವಸೆಯನ್ನು ಈಡೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಇದನ್ನೂ ಓದಿ- India vs Sri Lanka, 3rd T20I: ಅಬ್ಬರಿಸಿದ ಶ್ರೇಯಸ್ ಅಯ್ಯರ್, ಭಾರತಕ್ಕೆ ಆರು ವಿಕೆಟ್ ಗಳ ಜಯ

ಮೊದಲೆರಡು ಪಂದ್ಯಗಳಲ್ಲೂ ಅಮೋಘ ಪ್ರದರ್ಶನ:
ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಶ್ರೇಯಸ್ ಅಯ್ಯರ್‌ಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದ್ದಾರೆ ಮತ್ತು ಅವರು ಶ್ರೀಲಂಕಾ ವಿರುದ್ಧದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಟಿ20ಯಲ್ಲಿ ಈ ಬ್ಯಾಟ್ಸ್‌ಮನ್ ಕೇವಲ 44 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರು. ಈ ವೇಳೆ ಅಯ್ಯರ್ ಬ್ಯಾಟ್‌ನಿಂದ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸಿಡಿದವು. ಅದೇ ಸಮಯದಲ್ಲಿ, ಸರಣಿಯ ಮೊದಲ ಪಂದ್ಯದಲ್ಲೂ ಅವರು ಇನ್ನಿಂಗ್ಸ್‌ನಲ್ಲಿ ಔಟಾಗದೆ 57 ರನ್ ಗಳಿಸಿದರು. ಈಗ ಈ ಆಟಗಾರ ಭಾರತದ ಮಧ್ಯಮ ಕ್ರಮಾಂಕದ ಶಕ್ತಿಯಾಗಿ ಮಾರ್ಪಟ್ಟಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡ ಅದ್ಭುತಗಳನ್ನು ಮಾಡಬಹುದು ಎಂಬ ನಿರೀಕ್ಷೆಯನ್ನೂ ಹೆಚ್ಚಿಸಿದ್ದಾರೆ.

 ಟೆಸ್ಟ್ ತಂಡಕ್ಕೂ ಪದಾರ್ಪಣೆ:
ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್‌ಗೆ ಅವಕಾಶ ನೀಡಲಾಗಿತ್ತು. ಈ ಸರಣಿಯಲ್ಲಿ ಮೊದಲ ಬಾರಿಗೆ ರಾಹುಲ್ ದ್ರಾವಿಡ್ ಭಾರತ ತಂಡದ ಖಾಯಂ ಕೋಚ್ ಆಗಿದ್ದರು. ಅಯ್ಯರ್ ಈ ಅವಕಾಶವನ್ನು ಬಿಡಲಿಲ್ಲ ಮತ್ತು ಚೊಚ್ಚಲ ಪಂದ್ಯದಲ್ಲೇ ಅಮೋಘ ಶತಕ ಬಾರಿಸಿದರು. ಕೋಚ್ ದ್ರಾವಿಡ್ ಈ ಆಟಗಾರನ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ ಮತ್ತು ಈ ಆಟಗಾರ ಮುಂಬರುವ ಮೂರು ಮಾದರಿಗಳಲ್ಲಿ ಆಡುವುದನ್ನು ಕಾಣಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ- Ishan Kishan:ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲು.. ಏನಾಯ್ತು? ಇಲ್ಲಿದೆ ಮಾಹಿತಿ

ಟೀಂ ಇಂಡಿಯಾ ಸರಣಿ ಗೆದ್ದಿದೆ:
ಕೊನೆಯ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು.ಇದರೊಂದಿಗೆ ಭಾರತ ತಂಡ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಮೂರನೇ ಟಿ20ಯಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪಂದ್ಯದಲ್ಲಿ ಶ್ರೀಲಂಕಾ ಕಳಪೆ ಆರಂಭವನ್ನು ಹೊಂದಿತ್ತು ಮತ್ತು ಭಾರತೀಯ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಶ್ರೀಲಂಕಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಭಾರತ 4 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗೆಲುವು ಸಾಧಿಸಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News