IND vs WI 2022: ತನ್ನ ಆತ್ಮೀಯ ಗೆಳೆಯನಿಗೆ ದೊಡ್ಡ ವಿಲನ್ ಆದ ಸೂರ್ಯಕುಮಾರ್..!

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದ ನಂತರ ಅವರು ತಮ್ಮದೇ ಸ್ನೇಹಿತನಿಗೆ ಟೆನ್ಶನ್ ಹೆಚ್ಚಿಸಿದ್ದಾರೆ.

Written by - Puttaraj K Alur | Last Updated : Aug 3, 2022, 11:52 AM IST
  • ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್
  • ಸ್ಫೋಟಕ ಬ್ಯಾಟಿಂಗ್ ಮೂಲಕ ತನ್ನ ಸ್ನೇಹಿತ ಇಶಾನ್ ಕಿಶನ್‍ಗೆ ವಿಲನ್ ಆದ ಸೂರ್ಯಕುಮಾರ್
  • ಏಷ್ಯಾಕಪ್ ಟೂರ್ನಿಗೆ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆಯುವುದೇ ದೊಡ್ಡ ಸವಾಲಾಗಿದೆ
IND vs WI 2022: ತನ್ನ ಆತ್ಮೀಯ ಗೆಳೆಯನಿಗೆ ದೊಡ್ಡ ವಿಲನ್ ಆದ ಸೂರ್ಯಕುಮಾರ್..! title=
ಇಶಾನ್ ಕಿಶನ್‍ಗೆ ವಿಲನ್ ಆದ ಸೂರ್ಯಕುಮಾರ್

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ T20 ಸರಣಿಯ 3ನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಅಬ್ಬರಿಸಿದರು. ಈ ಪಂದ್ಯದಲ್ಲಿ ಓಪನರ್ ಆಗಿ ಆಡಿದ ಸೂರ್ಯಕುಮಾರ್ ಏಕಾಂಗಿಯಾಗಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು. ಈ ಅದ್ಭುತ ಇನ್ನಿಂಗ್ಸ್‌ನ ನಂತರ ಸೂರ್ಯಕುಮಾರ್ ತನ್ನ ಆತ್ಮೀಯ ಸ್ನೇಹಿತನಿಗೆ ದೊಡ್ಡ ವಿಲನ್ ಆಗಿದ್ದಾರೆ. ಏಕೆಂದರೆ ಅವರ ಸ್ಫೋಟಕ ಆಟದ ಪರಿಣಾಮ ಒಬ್ಬ ಉತ್ತಮ ಆಟಗಾರ ಈಗ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ಈ ಸರಣಿಯಲ್ಲಿ ಆಡಲು ಆ ಆಟಗಾರನಿಗೆ ಅವಕಾಶ ಸಿಕ್ಕಿಲ್ಲ.   

ಈ ಆಟಗಾರನಿಗೆ ವಿಲನ್ ಆದ ಸೂರ್ಯಕುಮಾರ್

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ ಯಾದವ್, ಮಂಗಳವಾರ(ಆಗಸ್ಟ್ 2)ದ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿ ಫಾರ್ಮ್‍ಗೆ ಮರಳಿದ್ದಾರೆ. ಈ ಸರಣಿಯಲ್ಲಿ ಆರಂಭಿಕರಾಗಿ ಆಡುವ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ತನ್ನ ಆತ್ಮೀಯ ಸ್ನೇಹಿತ ಇಶಾನ್ ಕಿಶನ್‌ಗೆ ಟೆನ್ಷನ್ ಹೆಚ್ಚಿಸಿದ್ದಾರೆ. ಇಶಾನ್ ಕಿಶನ್ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದು, ಈ ಸರಣಿಯಲ್ಲಿ ಇನ್ನಿಂಗ್ಸ್ ತೆರೆಯಲು ಅವರು ದೊಡ್ಡ ಸ್ಪರ್ಧಿಯಾಗಿದ್ದರು. ಆದರೆ ಸೂರ್ಯಕುಮಾರ್ ಅವರ ಈ ಇನ್ನಿಂಗ್ಸ್ ನಂತರ ಕಿಶನ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ.

ಇದನ್ನೂ ಓದಿ: Commonwealth Games 2022: ಟೇಬಲ್ ಟೆನ್ನಿಸ್‍ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತ ತಂಡ

ವೆಸ್ಟ್ ಇಂಡೀಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್  

ಸೂರ್ಯಕುಮಾರ್ ಯಾದವ್ ಮೊದಲು ಆರಂಭಿಕರಾಗಿ ಆಡಲಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಅವರು ಒಟ್ಟು 35 ರನ್ ಗಳಿಸಿದ್ದರು. ನಂತರ ಅವರ ಬ್ಯಾಟಿಂಗ್‌ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಆದರೆ 3ನೇ ಟಿ-20 ಪಂದ್ಯದಲ್ಲಿ ಅವರು 44 ಎಸೆತಗಳಲ್ಲಿ 172.72 ಸ್ಟ್ರೈಕ್ ರೇಟ್‌ನಲ್ಲಿ 76 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಕ್ಕ ಉತ್ತರ ನೀಡಿದರು. ವಿಂಡೀಸ್ ಬೌಲರ್‍ಗಳ ಬೆವರಿಳಿಸಿದ ಅವರು 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದರು. ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್ ಐಪಿಎಲ್‌ನಲ್ಲಿ ಒಂದೇ ತಂಡದಲ್ಲಿ ಆಡುತ್ತಾರೆ ಮತ್ತು ಉತ್ತಮ ಸ್ನೇಹಿತರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ಇದೀಗ ಕಿಶನ್‍ಗೆ ಸೂರ್ಯಕುಮಾರ್ ದೊಡ್ಡ ಹೊಡೆತ ನೀಡಿದ್ದಾರೆ.  

ರೋಹಿತ್ ಜೊತೆ ಆರಂಭಿಕರಾಗಿ ಆಡಿದ್ದ ಕಿಶನ್

ಇಶಾನ್ ಕಿಶನ್ ಹಲವು ಸಂದರ್ಭಗಳಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಆಡಿದ್ದಾರೆ. ನಾಯಕ ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದೇ ರೀತಿ 2022ರ ಐಪಿಎಲ್ ನಂತರ ಆರಂಭಿಕ ಆಟಗಾರರಾಗಿ ಅನೇಕ ಪಂದ್ಯಗಳನ್ನು ಆಡಿದ್ದರು. ಈ ವೇಳೆ ಅವರು ಉತ್ತಮ ಪ್ರದರ್ಶನ ನೀಡಿದರು. ಭಾರತ ತಂಡ ಇದೇ ತಿಂಗಳು ಏಷ್ಯಾಕಪ್ ಆಡಬೇಕಿರುವುದರಿಂದ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆಯುವುದು ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: Commonwealth Games 2022: ವೇಟ್‌ಲಿಫ್ಟಿಂಗ್‌ನಲ್ಲಿ ವಿಕಾಸ್ ಠಾಕೂರ್ ಗೆ ಬೆಳ್ಳಿ

ಇಶಾನ್ ಕಿಶನ್ ಟೀಂ ಇಂಡಿಯಾ ಪರ ಇದುವರೆಗೆ 18 ಟಿ-20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 31.29 ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಇದರಲ್ಲಿ 4 ಭರ್ಜರಿ ಅರ್ಧಶತಕಗಳು ಸೇರಿವೆ. ಅದೇ ರೀತಿ ಕಿಶನ್ ಭಾರತದ ಪರ 3 ಏಕದಿನ ಪಂದ್ಯಗಳನ್ನು ಆಡಿದ್ದು, 29.33 ಸರಾಸರಿಯಲ್ಲಿ 88 ರನ್ ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News