ನವದೆಹಲಿ: ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 265 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಆರಂಭದಲ್ಲಿಯೇ ಆಘಾತಕ್ಕೆ ಸಿಲುಕಿತು, ರೋಹಿತ್ ಶರ್ಮಾ,ಶಿಖರ್ ಧವನ್, ವಿರಾಟ್ ಕೊಹ್ಲಿ ಅವರ ವಿಕೆಟ್ ಗಳನ್ನು 42 ರನ್ ಗಳಾಗುವಷ್ಟರಲ್ಲಿ ಕಳೆದುಕೊಂಡಾಗ ನಂತರ ಬಂದಂತಹ ಶ್ರೇಯಸ್ ಅಯ್ಯರ್ ಹಾಗೂ ರಿಶಬ್ ಅಯ್ಯರ್ ಅವರ ಉತ್ತಮ ಜೊತೆಯಾಟದಿಂದ ಭಾರತ ಸುಸ್ಥಿತಿಗೆ ತಲುಪಿತು.
ಇದನ್ನೂ ಓದಿ- Love Mocktail-2 : ಮತ್ತೆ ಕಳೆಗಟ್ಟಿದ ಕನ್ನಡ ಚಿತ್ರರಂಗ : ಇದು ಸ್ಯಾಂಡಲ್‌ವುಡ್ ಸಂಭ್ರಮ!
ಶ್ರೇಯಸ್ ಅಯ್ಯರ್ ಅವರು 111 ಎಸೆತಗಳನ್ನು ಎದುರಿಸಿ 80 ರನ್ ಗಳಿಸಿದರೆ, ರಿಶಬ್ ಪಂತ್ 56 ರನ್ ಗಳನ್ನು ಗಳಿಸಿದರು. ಆ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದಾದ ನಂತರ ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಕುಲದೀಪ್ ಯಾದವ್ ಅವರು ಕ್ರಮವಾಗಿ 33 ಹಾಗೂ 38 ರನ್ ಗಳನ್ನು ಗಳಿಸುವ ಮೂಲಕ ತಂಡವು 265 ಗಳಿಸುವುದಕ್ಕೆ ನೆರವಾದರು.
Innings Break!#TeamIndia post 265 on the board in the third & final @Paytm #INDvWI ODI!
8⃣0⃣ for @ShreyasIyer15
5⃣6⃣ for @RishabhPant17
3⃣8⃣ for @deepak_chahar9
3⃣3⃣ for @Sundarwashi5Over to our bowlers now. 👍 👍
Scorecard ▶️ https://t.co/9pGAfWtQZV pic.twitter.com/5DygXyCboX
— BCCI (@BCCI) February 11, 2022
ಇದನ್ನೂ ಓದಿ- 'ಬೈಟ್ ಟು ಲವ್' ಇದು ಚಂದನವನದ ಕ್ಯೂಟ್ ಲವ್ ಸ್ಟೋರಿ..!
ವೆಸ್ಟ್ ಇಂಡೀಸ್ ಪರವಾಗಿ ಜೇಸನ್ ಹೋಲ್ಡರ್ ನಾಲ್ಕು ಹಾಗೂ ಅಲ್ಜಾರಿ ಜೋಸೆಫ್ ಎರಡು ಹಾಗೂ ಹೇಡನ್ ವಾಲ್ಸ್ ಎರಡು ವಿಕೆಟ್ ಗಳನ್ನು ಪಡೆಯುವುದರ ಮೂಲಕ ಭಾರತ ರನ್ ಗತಿಗೆ ಕಡಿವಾಣ ಹಾಕಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.