ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಭಾರತದ ಇಲೆವೆನ್ ತಂಡ ಪ್ರಕಟ, ಕನ್ನಡಿಗ ಕೆ.ಎಲ್.ರಾಹುಲ್ ಗಿಲ್ಲ ಸ್ಥಾನ

ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಮೊದಲ ಗುಲಾಬಿ-ಚೆಂಡು ಟೆಸ್ಟ್ ಪಂದ್ಯಕ್ಕಾಗಿ ಭಾರತ ಇಲೆವೆನ್ ತಂಡವನ್ನು ಪ್ರಕಟಿಸಿದೆ. ಬಿಸಿಸಿಐ ಬುಧವಾರ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ಘೋಷಣೆ ಮಾಡಿದೆ.

Last Updated : Dec 16, 2020, 04:15 PM IST
ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಭಾರತದ ಇಲೆವೆನ್ ತಂಡ ಪ್ರಕಟ, ಕನ್ನಡಿಗ ಕೆ.ಎಲ್.ರಾಹುಲ್ ಗಿಲ್ಲ ಸ್ಥಾನ  title=
file photo

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಮೊದಲ ಗುಲಾಬಿ-ಚೆಂಡು ಟೆಸ್ಟ್ ಪಂದ್ಯಕ್ಕಾಗಿ ಭಾರತ ಇಲೆವೆನ್ ತಂಡವನ್ನು ಪ್ರಕಟಿಸಿದೆ. ಬಿಸಿಸಿಐ ಬುಧವಾರ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ಘೋಷಣೆ ಮಾಡಿದೆ.

ಈ ದಶಕದ ಅತ್ಯಂತ ಪ್ರಭಾವಶಾಲಿ ಭಾರತೀಯ ಆಟಗಾರನ್ಯಾರು ಗೊತ್ತೇ?

ಭಾರತದ ಆರಂಭಿಕ ಆಟಗಾರರು, ವಿಕೆಟ್ ಕೀಪರ್ ಮತ್ತು ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುನ್ನಡೆಸುವ ಮೂರನೇ ಸೀಮರ್ ಬಗ್ಗೆ ಸಾಕಷ್ಟು ಚರ್ಚಿಸಲಾಯಿತು.ಇನ್ನೊಂದೆಡೆಗೆ ಪೃಥ್ವಿ ಶಾ ಅವರನ್ನು ಮಾಯಾಂಕ್ ಅಗರ್ವಾಲ್ ಅವರ ಆರಂಭಿಕ ಪಾಲುದಾರ ಎಂದು ಹೆಸರಿಸಿದ್ದರಿಂದ ಭಾರತೀಯ ತಂಡದ ಆಡಳಿತವು ಆಯ್ಕೆ ಸಂದಿಗ್ಧತೆಯನ್ನು ನಿವಾರಿಸಿತು. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ 73 ಎಸೆತಗಳ ಶತಕ ಬಾರಿಸಿದ ರಿಷಭ್ ಪಂತ್ ಬದಲಾಗಿ ವೃದ್ಧಿಮಾನ್ ಸಹಾ ಅವರಿಗೆ ಆಯ್ಕೆ ಸಮಿತಿ ಮಣೆಹಾಕಿದೆ.

Flashback 2020: Cricket Controversies 2020 ಗಾವಸ್ಕರ್ ನಿಂದ ಹಿಡಿದು ರೈನಾವರೆಗೆ ಕ್ರಿಕೆಟ್ ಲೋಕದ ವಿವಾದಗಳು ಇಲ್ಲಿವೆ

ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಬುನಾದಿ ಹಾಕಲಿದ್ದಾರೆ.ಗುಲಾಬಿ-ಬಾಲ್ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಶತಕವನ್ನು ಗಳಿಸಿದ ಹನುಮಾ ವಯಾಹರಿ ನಂ.6 ಸ್ಥಾನವನ್ನು ಪಡೆದುಕೊಂಡಿದ್ದಾರೆ.ಬೌಲಿಂಗ್ ತಂಡವು ಮೂರು ವೇಗಿಗಳು ಮತ್ತು ಸ್ಪಿನ್ನರ್ ಅನ್ನು ಒಳಗೊಂಡಿದೆ. ಈ ಬಾರಿ ಆಯ್ಕೆ ಸಮಿತಿಯು ಅನುಭವಿ ಆಟಗಾರರಿಗಿಂತ ಯುವಕರಿಗೆ ಹೆಚ್ಚಿನ ಮಾನ್ಯತೆಯನ್ನು ನೀಡಿದೆ, ಆರ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬುಮ್ರಾ ಅವರನ್ನು ಹನ್ನೊಂದರಲ್ಲಿ ಹೆಸರಿಸಿದೆ.

ಫೆಬ್ರುವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ

ಆಸ್ಟ್ರೇಲಿಯಾ ವಿರುದ್ಧದ 1 ನೇ ಟೆಸ್ಟ್ ಪಂದ್ಯ ಆಡುವ ಭಾರತದ ತಂಡ

ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್ ), ಆರ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

Trending News