Hockey World Cup 2023: ಮತ್ತೆ ಕಮರಿದ ಭಾರತದ ಕನಸು: ಟೀಂ ಇಂಡಿಯಾ ಹಾಕಿ ವಿಶ್ವಕಪ್ ಪಯಣ ಅಂತ್ಯ

Hockey World Cup 2023: ಪೆನಾಲ್ಟಿ ಶೂಟೌಟ್ ತನಕ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು. ಈ ಸೋಲಿನೊಂದಿಗೆ ಭಾರತ ಟೂರ್ನಿಯಿಂದ ಹೊರಬಿದ್ದಿದೆ. ನಿಗದಿತ ಸಮಯದವರೆಗೆ ಉಭಯ ತಂಡಗಳು 3-3 ಗೋಲುಗಳಿಂದ ಸಮಬಲದಲ್ಲಿದ್ದವು, ನಂತರ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ತಲುಪಿತು. ನಂತರ ನ್ಯೂಜಿಲೆಂಡ್ 5–4ರಲ್ಲಿ ಜಯ ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ, ಜನವರಿ 24 ರಂದು ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಎದುರಿಸಲಿದೆ.

Written by - Bhavishya Shetty | Last Updated : Jan 22, 2023, 11:46 PM IST
    • ಟೀಂ ಇಂಡಿಯಾದ ಬಹುದೊಡ್ಡ ಕನಸು ಮತ್ತೆ ಭಗ್ನಗೊಂಡಿದೆ
    • ಹಾಕಿ ವಿಶ್ವಕಪ್ನ ಕ್ರಾಸ್ಓವರ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ
    • ಪೆನಾಲ್ಟಿ ಶೂಟೌಟ್ ತನಕ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು
Hockey World Cup 2023: ಮತ್ತೆ ಕಮರಿದ ಭಾರತದ ಕನಸು: ಟೀಂ ಇಂಡಿಯಾ ಹಾಕಿ ವಿಶ್ವಕಪ್ ಪಯಣ ಅಂತ್ಯ title=
Hockey

Hockey World Cup 2023: ಭಾರತದ ಕೋಟ್ಯಂತರ ಅಭಿಮಾನಿಗಳಿಗೆ ಭಾನುವಾರ ದೊಡ್ಡ ಶಾಕ್ ಸಿಕ್ಕಿದೆ. ಟೀಂ ಇಂಡಿಯಾದ ಬಹುದೊಡ್ಡ ಕನಸು ಮತ್ತೆ ಭಗ್ನಗೊಂಡಿದೆ. ಭಾನುವಾರ ಭುವನೇಶ್ವರದಲ್ಲಿ ನಡೆದ ಹಾಕಿ ವಿಶ್ವಕಪ್‌ನ ಕ್ರಾಸ್‌ಓವರ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ಸಾಗಿದ್ದು, ಅಲ್ಲಿ ಆತಿಥೇಯರು ಸೋಲು ಕಂಡಿದ್ದಾರೆ.

ಇದನ್ನೂ ಓದಿ: Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರನ್ನು ಕಾಡುತ್ತಿದೆ ಈ ವಿಚಿತ್ರ ಕಾಯಿಲೆ!

ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು:

ಪೆನಾಲ್ಟಿ ಶೂಟೌಟ್ ತನಕ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು. ಈ ಸೋಲಿನೊಂದಿಗೆ ಭಾರತ ಟೂರ್ನಿಯಿಂದ ಹೊರಬಿದ್ದಿದೆ. ನಿಗದಿತ ಸಮಯದವರೆಗೆ ಉಭಯ ತಂಡಗಳು 3-3 ಗೋಲುಗಳಿಂದ ಸಮಬಲದಲ್ಲಿದ್ದವು, ನಂತರ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ತಲುಪಿತು. ನಂತರ ನ್ಯೂಜಿಲೆಂಡ್ 5–4ರಲ್ಲಿ ಜಯ ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ, ಜನವರಿ 24 ರಂದು ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಎದುರಿಸಲಿದೆ.

ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದ ಸೋಲಿನೊಂದಿಗೆ 1975ರ ನಂತರ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿದೆ. ನಿಗದಿತ 60 ನಿಮಿಷಗಳ ಕಾಲ ಪಂದ್ಯವು 3-3 ಗೋಲುಗಳಿಂದ ಸಮಬಲಗೊಂಡಿತು. ನಂತರ ನ್ಯೂಜಿಲೆಂಡ್ ಪೆನಾಲ್ಟಿ ಶೂಟೌಟ್ ಅನ್ನು 5-4 ರಿಂದ ಗೆದ್ದುಕೊಂಡಿತು. ಟೀಂ ಇಂಡಿಯಾದ ಗೋಲ್ ಕೀಪರ್ ಹಾಗೂ ಅನುಭವಿ ಆಟಗಾರರಾದ ಪಿಆರ್ ಶ್ರೀಜೇಶ್ ಮತ್ತು ಕೃಷ್ಣ ಪಾಠಕ್ ಪೆನಾಲ್ಟಿ ಶೂಟೌಟ್ ನಲ್ಲಿ ಒಟ್ಟು ನಾಲ್ಕು ಸೇವ್ ಗಳನ್ನು ಮಾಡಿದರು. ಹೀಗಿದ್ದರೂ ಭಾರತಕ್ಕೆ ಗೆಲುವು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Rohit Sharma Retirement: ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ನಿವೃತ್ತಿ!? ವಿಶ್ವಕಪ್ ಬಳಿಕ ಇವರೇ ಟೀಂ ಇಂಡಿಯಾ ಕ್ಯಾಪ್ಟನ್!

ಎಫ್ ಐಎಚ್ ವಿಶ್ವ ರ್ಯಾಂಕಿಂಗ್ ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತ ತಂಡ ತನ್ನ ಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಒಂದು ಹಂತದಲ್ಲಿ 2-0 ಮುನ್ನಡೆ ಸಾಧಿಸಿದ ನಂತರ ಆತಿಥೇಯರು ನ್ಯೂಜಿಲೆಂಡ್‌ಗೆ ಪುನರಾಗಮನದ ಅವಕಾಶವನ್ನು ನೀಡಿದರು. ನಿಗದಿತ ಸಮಯದವರೆಗೆ ಭಾರತದ ಪರ ಲಲಿತ್ ಉಪಾಧ್ಯಾಯ (17ನೇ ನಿಮಿಷ), ಸುಖಜಿತ್ ಸಿಂಗ್ (24ನೇ) ಮತ್ತು ವರುಣ್ ಕುಮಾರ್ (40ನೇ ನಿ) ಗೋಲು ಗಳಿಸಿದರು. ನ್ಯೂಜಿಲೆಂಡ್ ಪರ ಸ್ಯಾಮ್ ಲೇನ್ (28ನೇ ನಿ.) ಫೀಲ್ಡ್ ಗೋಲು ಗಳಿಸಿದರೆ, ಕೆನ್ ರಸೆಲ್ (43ನೇ) ಮತ್ತು ಸೀನ್ ಫಿಂಡ್ಲೇ (49ನೇ) ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News