ನವ ದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇಂದು ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಎರಡನೇ ಏಕದಿನ ಅಂತರಾಷ್ಟ್ರೀಯ ಪಂದ್ಯ ಆಡಲಿವೆ. ಈ ಪಂದ್ಯದಲ್ಲೂ ಜಯ ಸಾಧಿಸುವ ವಿಶ್ವಾಸವನ್ನು ಟೀಂ ಇಂಡಿಯಾ ಹೊಂದಿದೆ. 2003ರಲ್ಲಿ ಉಭಯ ತಂಡಗಳು ಟಿವಿಎಸ್ ಕಪ್ ಟೂರ್ನಿಯಲ್ಲಿ ಇದೇ ಮೈದಾನದಲ್ಲಿ ಸೆಣಸಿದ್ದವು.
ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಮೋಘ ಬ್ಯಾಟಿಂಗ್ ನೊಂದಿಗೆ ಜಯ ಸಾಧಿಸಿದ್ದ ಟೀಂ ಇಂಡಿಯಾ, ಮಳೆಯ ಆತಂಕದ ನಡುವೆಯೂ ಕೋಲ್ಕತ್ತಾದಲ್ಲಿ ನಡೆಯಲಿರುವ ಎರಡನೇ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲೂ ಜಯ ಸಾಧಿಸುವ ನಿರೀಕ್ಷೆಯಲ್ಲಿದೆ. ಭಾರತ ಪ್ರಸ್ತುತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತ ತಂಡ -
ವಿರಾಟ್ ಕೊಹ್ಲಿಯ ನಾಯಕತ್ವ ಹೊಂದಿರುವ ಭಾರತ ತಂಡದ ಯಶಸ್ಸಿನಲ್ಲಿ ಬೌಲರ್ಗಳ ಪಾತ್ರ ಬಹಳ ಮುಖ್ಯವಾಗಿದೆ. ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ 5-0 ಗೆಲುವಿನ ಗುರಿ ಸಾಧಿಸಿದ್ದ ತಂಡ, ಚೆನ್ನೈ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 281 ರನ್ ಗಳಿಸಿತ್ತು. ಆ ಪಂದ್ಯದಲ್ಲಿ ಆಸ್ಟೇಲಿಯಾ ತಂಡವನ್ನು ಸೋಲಿನ ಸುಲಿಯಲ್ಲಿ ಬೀಳಿಸಿತ್ತು.
ಹೊಸ ಸ್ಪಿನ್ನರ್ ಗಳಾದ ಕುಲ್ದೀಪ್ ಯಾದವ್ ಮತ್ತು ಯಜುರ್ವೇದ ಚಾಹಲ್ ಅವರು ಮೊದಲ ಪಂದ್ಯದಲ್ಲಿ ಬಹಳ ಗಮನ ಸೆಳೆದಿದ್ದರು. ಈಡನ್ ಗಾರ್ಡನ್ನಲ್ಲಿಯೂ ಈ ತಂಡ ಮತ್ತೊಮ್ಮೆ ಗಮನ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಭಾರತ ತಂಡವು ಎಲ್ಲಾ ಆಯಾಮಗಳಲ್ಲೂ ಉತ್ತಮ ಬೇಸ್ ಹೊಂದಿದ್ದು ಇಂದಿನ ಪಂದ್ಯ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ.
ಆಸ್ಟ್ರೇಲಿಯಾ ತಂಡ -
ಎಂತಹ ಕಠಿಣ ಪರಿಸ್ಥಿತಿಯನ್ನೂ ಶಾಂತವಾಗಿ ನಿಭಾಯಿಸುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಗೆ ಇದು ಸವಾಲಿನ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದ ಸ್ಮಿತ್ ಈ ಪಂದ್ಯದಲ್ಲಿ ತಂಡವನ್ನು ಎಚ್ಚರಿಕೆಯಿಂದ ಮುನ್ನೆಡೆಸುವ ವಿಶ್ವಾಸ ಹೊಂದಿದ್ದಾರೆ. ಅಲ್ಲದೆ ಅವರಿಗೆ ಇದು 100ನೇ ಅಂತರಾಷ್ಟ್ರೀಯ ಏಕದಿನ ಪಂದ್ಯವಾದಿದೆ.
ಹವಾಮಾನ-
ನೆನ್ನೆ ಮಳೆಯಿಂದಾಗಿ ಅಭ್ಯಾಸವನ್ನು ಕಳೆದುಕೊಂಡಿರುವ ಉಭಯ ತಂಡಗಳಿಗೆ ಇಂದೂ ಕೂಡ ಮಳೆ ಕಾಡುವ ಸಾಧ್ಯತೆ ಇದೇ.
ತಂಡಗಳು-
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ಮನೀಶ್ ಪಾಂಡೆ, ಕೇದರ್ ಜಾಧವ್, ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್ ಧೋನಿ (ವಿಕೆ), ಹಾರ್ಡಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯದುರ್ವೇದ್ ಚಾಹಲ್, ಜಾಸ್ಪ್ರಿತ್ ಬುಮರಾ, ಭುವನೇಶ್ವರ ಕುಮಾರ್, ಉಮೇಶ್ ಯಾದವ್ , ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಆಷ್ಟನ್ ಅಗರ್, ಹಿಲ್ಟನ್ ಕಾರ್ಟ್ರೈಟ್, ನಾಥನ್ ಕೌಲ್ಟರ್-ನೈಲ್, ಪ್ಯಾಟ್ರಿಕ್ ಕುಮಿನ್ಸ್, ಜೇಮ್ಸ್ ಫಾಲ್ಕ್ನರ್, ಆರನ್ ಫಿಂಚ್, ಜೋಶ್ ಹ್ಯಾಝ್ವುಡ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆ), ಆಡಮ್ ಝಂಪಾ.