ಏಷ್ಯನ್ ಗೇಮ್ಸ್’ನ ಒಂದೇ ಗುಂಪಿನಲ್ಲಿ ಭಾರತ-ಪಾಕಿಸ್ತಾನ! ಹೈವೋಲ್ಟೇಜ್ ಪಂದ್ಯಕ್ಕೆ ಡೇಟ್ ಫಿಕ್ಸ್

India-Pakistan Hockey: ಭಾರತ ಮತ್ತು ಪಾಕಿಸ್ತಾನವು ಜಪಾನ್, ಬಾಂಗ್ಲಾದೇಶ, ಸಿಂಗಾಪುರ್ ಮತ್ತು ಉಜ್ಬೇಕಿಸ್ತಾನ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಉಜ್ಬೇಕಿಸ್ತಾನ್ ವಿರುದ್ಧ ಆಡಲಿದೆ.

Written by - Bhavishya Shetty | Last Updated : Aug 9, 2023, 10:16 AM IST
    • ಚೀನಾದ ಹ್ಯಾಂಗ್‌’ಝೌ’ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌
    • ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡ
    • ಈ ಎರಡೂ ತಂಡಗಳು ಸೆಪ್ಟೆಂಬರ್ 30 ರಂದು ಮುಖಾಮುಖಿಯಾಗಲಿವೆ.
ಏಷ್ಯನ್ ಗೇಮ್ಸ್’ನ ಒಂದೇ ಗುಂಪಿನಲ್ಲಿ ಭಾರತ-ಪಾಕಿಸ್ತಾನ! ಹೈವೋಲ್ಟೇಜ್ ಪಂದ್ಯಕ್ಕೆ ಡೇಟ್ ಫಿಕ್ಸ್ title=
India-Pakistan Hockey

India-Pakistan Hockey in Asian Games: ಚೀನಾದ ಹ್ಯಾಂಗ್‌’ಝೌ’ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌’ಗಾಗಿ ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದ್ದು, ಈ ಎರಡೂ ತಂಡಗಳು ಸೆಪ್ಟೆಂಬರ್ 30 ರಂದು ಮುಖಾಮುಖಿಯಾಗಲಿವೆ.

ಇದನ್ನೂ ಓದಿ: ಕೊಹ್ಲಿ, ಗವಾಸ್ಕರ್, ಧೋನಿಯಿಂದಲೂ ಸಾಧ್ಯವಾಗದ ಜಗತ್ತಿನಲ್ಲೇ ಶ್ರೇಷ್ಠವಾದ ವಿಶ್ವದಾಖಲೆ ಬರೆದರು ಸೂರ್ಯಕುಮಾರ್!

ಭಾರತ ಮತ್ತು ಪಾಕಿಸ್ತಾನವು ಜಪಾನ್, ಬಾಂಗ್ಲಾದೇಶ, ಸಿಂಗಾಪುರ್ ಮತ್ತು ಉಜ್ಬೇಕಿಸ್ತಾನ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಉಜ್ಬೇಕಿಸ್ತಾನ್ ವಿರುದ್ಧ ಆಡಲಿದೆ. ಅದರ ನಂತರ ಸಿಂಗಾಪುರ (ಸೆಪ್ಟೆಂಬರ್ 26), ಜಪಾನ್ (ಸೆಪ್ಟೆಂಬರ್ 28), ಪಾಕಿಸ್ತಾನ (ಸೆಪ್ಟೆಂಬರ್ 30) ಮತ್ತು ಬಾಂಗ್ಲಾದೇಶ (ಅಕ್ಟೋಬರ್ 2) ವಿರುದ್ಧ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ಏಕದಿನ ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ! ಧೋನಿ ಗರಡಿಯಲ್ಲಿ ಪಳಗಿದ 5 ಆಟಗಾರರಿಗೆ ಅವಕಾಶ ಕೊಟ್ಟ ಸಮಿತಿ

ಭಾರತ ಮಹಿಳಾ ಹಾಕಿ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಹಾಂಕಾಂಗ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳನ್ನು ಎದುರಿಸಲಿದೆ. ಭಾರತ ಮಹಿಳಾ ತಂಡ ಸೆಪ್ಟೆಂಬರ್ 27 ರಂದು ಸಿಂಗಾಪುರ ವಿರುದ್ಧ ಅಭಿಯಾನ ಆರಂಭಿಸಲಿದೆ. ಪುರುಷರ ಫೈನಲ್ ಪಂದ್ಯ ಅಕ್ಟೋಬರ್ 6 ರಂದು ನಡೆಯಲಿದ್ದು, ಮಹಿಳೆಯರ ತಂಡ ಪ್ರಶಸ್ತಿ ಸುತ್ತಿನ ಪಂದ್ಯ ಅಕ್ಟೋಬರ್ 7 ರಂದು ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News