ಬಿಗ್‌ ಅಪ್ಡೇಟ್:‌ ಟೀಂ ಇಂಡಿಯಾಗೆ ಈತ ನೂತನ ಕ್ಯಾಪ್ಟನ್: ಬಟ್ಟೆ ಅಂಗಡಿಯಲ್ಲಿ ಕೆಲಸ ಕೊಡಿಸಿ ಎಂದು ಬೇಡಿಕೊಂಡವನಿಗೆ ಕೈಹಿಡಿದ ಅದೃಷ್ಟ

Mohammed Aman Background: ಮೊಹಮ್ಮದ್ ಅಮನ್ ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ. ಇದಕ್ಕೂ ಮುನ್ನ ಅಮನ್ 2023ರ ನವೆಂಬರ್‌ನಲ್ಲಿ ನಡೆದ ಏಷ್ಯಾಕಪ್‌''ನಲ್ಲಿ ಅಂಡರ್-19 ತಂಡದ ಭಾಗವಾಗಿದ್ದರು. ಮೊಹಮ್ಮದ್ ಅಮಾನ್ ಅತ್ಯುತ್ತಮ ಬ್ಯಾಟ್ಸ್‌ಮನ್. 18 ವರ್ಷದ ಅಮನ್ ವೇಗದ ಬೌಲರ್ ಕೂಡ ಹೌದು

Edited by - Bhavishya Shetty | Last Updated : Sep 1, 2024, 08:30 PM IST
    • ಮೊಹಮ್ಮದ್ ಅಮನ್ ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ
    • ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರೀಡೆ ಕ್ರಿಕೆಟ್
    • ಇಂಡಿಯನ್ ಎಕ್ಸ್‌ಪ್ರೆಸ್‌ʼನೊಂದಿಗೆ ಮಾತನಾಡಿದ ಮೊಹಮ್ಮದ್ ಅಮನ್
ಬಿಗ್‌ ಅಪ್ಡೇಟ್:‌ ಟೀಂ ಇಂಡಿಯಾಗೆ ಈತ ನೂತನ ಕ್ಯಾಪ್ಟನ್: ಬಟ್ಟೆ ಅಂಗಡಿಯಲ್ಲಿ ಕೆಲಸ ಕೊಡಿಸಿ ಎಂದು ಬೇಡಿಕೊಂಡವನಿಗೆ ಕೈಹಿಡಿದ ಅದೃಷ್ಟ title=
File Photo

Who is Mohammed Aman: ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರೀಡೆ ಕ್ರಿಕೆಟ್. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ತಲುಪಲು ಆಟಗಾರರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿಯವರೆಗೆ ನಾವು ಅನೇಕ ಸ್ಟಾರ್ ಕ್ರಿಕೆಟಿಗರ ಹೋರಾಟದ ಕಥೆಗಳನ್ನು ಕೇಳಿದ್ದೇವೆ. ಆದರೆ ಇತ್ತೀಚೆಗಷ್ಟೇ ಭಾರತದ ಅಂಡರ್-19 ತಂಡದ ನಾಯಕನಾದ ಮೊಹಮ್ಮದ್ ಅಮನ್ ಕಥೆ ಎಲ್ಲರನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 10 ವಿಕೆಟ್‌ ಕಿತ್ತು ಕಮಾಲ್: ಮಾಂತ್ರಿಕ ಆಟಕ್ಕೆ ಬೆಚ್ಚಿತು ಕ್ರಿಕೆಟ್‌ ಲೋಕ

ಮೊಹಮ್ಮದ್ ಅಮಾನ್ ಯಾರು?
ಮೊಹಮ್ಮದ್ ಅಮನ್ ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ. ಇದಕ್ಕೂ ಮುನ್ನ ಅಮನ್ 2023ರ ನವೆಂಬರ್‌ನಲ್ಲಿ ನಡೆದ ಏಷ್ಯಾಕಪ್‌''ನಲ್ಲಿ ಅಂಡರ್-19 ತಂಡದ ಭಾಗವಾಗಿದ್ದರು. ಮೊಹಮ್ಮದ್ ಅಮಾನ್ ಅತ್ಯುತ್ತಮ ಬ್ಯಾಟ್ಸ್‌ಮನ್. 18 ವರ್ಷದ ಅಮನ್ ವೇಗದ ಬೌಲರ್ ಕೂಡ ಹೌದು. ತಾಯಿ ಸಾಯಿಬಾ ಅವರು 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಜಗತ್ತಿಗೆ ವಿದಾಯ ಹೇಳಿದ್ದರು. ಅವರ ತಂದೆ ಮೆಹ್ತಾಬ್ ಟ್ರಕ್ ಚಾಲಕರಾಗಿದ್ದರು. ದುರಂತ ಎಂಬಂತೆ ಅವರೂ ಕೂಡ 2022 ರಲ್ಲಿ ನಿಧನರಾದರು. ಆ ಬಳಿಕ ಅಮನ್ 16ನೇ ವಯಸ್ಸಿನಲ್ಲಿ ಅನಾಥನಾದರು. ಇದರ ನಂತರ ತಮ್ಮ ಮೂವರು ಕಿರಿಯ ಸಹೋದರರ ಜವಾಬ್ದಾರಿಯನ್ನು ವಹಿಸಿಕೊಂಡ ಅಮನ್‌, ಕ್ರೀಡೆಯತ್ತ ಗಮನ ಹರಿಸಿದರು. ಈಗ ಅವರ ಈ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ʼನೊಂದಿಗೆ ಮಾತನಾಡಿದ ಮೊಹಮ್ಮದ್ ಅಮನ್, "ನಾನು ನನ್ನ ತಂದೆಯನ್ನು ಕಳೆದುಕೊಂಡ ದಿನ, ನನ್ನ ಹೆಗಲ ಮೇಲೆ ಜವಾಬ್ದಾರಿ ಬಿತ್ತು ಎಂದು ಭಾವಿಸಿದೆ. ನನ್ನ ತಂಗಿ ಮತ್ತು ಇಬ್ಬರು ಸಹೋದರರನ್ನು ನಾನು ನೋಡಿಕೊಳ್ಳಬೇಕಾಗಿತ್ತು, ನನ್ನ ತಂದೆ ಹೋದ ನಂತರ ನಾನು ಕುಟುಂಬದ ಮುಖ್ಯಸ್ಥನಾಗಿದ್ದೆ. ಈ ಘಟನೆಯ ನಂತರ ನಾನು ಕ್ರಿಕೆಟ್ ಬಿಡಬೇಕು ಎಂದುಕೊಂದೆ. ಅಲ್ಲದೆ ಕುಟುಂಬ ನಿರ್ವಹಣೆಗಾಗಿ ಸಹರಾನ್‌ಪುರದಲ್ಲಿ ಕೆಲಸ ಹುಡುಕಿದರೂ ಕೆಲಸ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನನ್ನ ಆಟ ಮುಂದುವರಿಸಲು ಕೆಲವರು ಸಹಾಯ ಮಾಡಲು ಮುಂದೆ ಬಂದರು" ಎಂದಿದ್ದಾರೆ.

ಖಾಲಿ ಹೊಟ್ಟೆಯಲ್ಲಿ ಮಲಗಿದ ದಿನಗಳ ಬಗ್ಗೆ ಮಾತನಾಡಿದ ಅಮನ್, "ಹಸಿವಿಗಿಂತ ದೊಡ್ಡದು ಯಾವುದೂ ಇಲ್ಲ. ನಾನು ಈಗ ನನ್ನ ಆಹಾರವನ್ನು ಎಂದಿಗೂ ವ್ಯರ್ಥ ಮಾಡುವುದಿಲ್ಲ. ಏಕೆಂದರೆ ಅದನ್ನು ಗಳಿಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಕಾನ್ಪುರದಲ್ಲಿ ಯುಪಿಸಿಎ ವಯೋಮಿತಿ ಟ್ರಯಲ್ಸ್ ನಡೆದಾಗ ನಾನು ರೈಲಿನ ಸಾಮಾನ್ಯ ಕಂಪಾರ್ಟ್‌ಮೆಂಟ್‌ನಲ್ಲಿ ಶೌಚಾಲಯದ ಬಳಿ ಕುಳಿತು ಪ್ರಯಾಣಿಸುತ್ತಿದ್ದೆ. ಈಗ, ನಾನು ವಿಮಾನದಲ್ಲಿ ಪ್ರಯಾಣಿಸಿದಾಗ ಮತ್ತು ಒಳ್ಳೆಯ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದೇನೆ. ಅದಕ್ಕೆ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ: ಮನೆ ಮುಖ್ಯದ್ವಾರದಲ್ಲಿಈ ಹೂವಿನ ಗಿಡ ನೆಟ್ಟರೆ ಅದೃಷ್ಟವೇ ಬದಲಾಗುವುದು: ಸಂಪತ್ತು- ಸಮೃದ್ಧಿ ಜೊತೆ ನೆಮ್ಮದಿಯ ನಂದಗೋಕುಲವಾಗುತ್ತೆ ಆ ಮನೆ

ಅಮನ್ ಕಳೆದ ಋತುವಿನಲ್ಲಿ, ವಿನೂ ಮಂಕಡ್ ಟ್ರೋಫಿಯಲ್ಲಿ ಯುಪಿ ಅಂಡರ್-19 ತಂಡಕ್ಕಾಗಿ ಎಂಟು ಇನ್ನಿಂಗ್ಸ್‌ಗಳಲ್ಲಿ 363 ರನ್ ಗಳಿಸಿದರು, ಇದರಲ್ಲಿ ನಾಲ್ಕು ಅರ್ಧ ಶತಕಗಳು ಸೇರಿದ್ದವು. 98ರ ಸರಾಸರಿಯಲ್ಲಿ 294 ರನ್ ಗಳಿಸುವ ಮೂಲಕ ಅಂಡರ್-19 ಚಾಲೆಂಜರ್ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಲ್ಲದೆ, 2023 ರಲ್ಲಿ ಅವರನ್ನು ಉತ್ತರ ಪ್ರದೇಶ 19 ವರ್ಷದೊಳಗಿನವರ ತಂಡದ ನಾಯಕರನ್ನಾಗಿ ಮಾಡಲಾಯಿತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News