Sydney Barnes World Records: ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ ತಮ್ಮ ಬೌಲಿಂಗ್ʼನಿಂದಲೇ ಮೋಡಿ ಮಾಡಿ, ಅದೆಷ್ಟೋ ಶ್ರೇಷ್ಠ ಬ್ಯಾಟ್ಸ್ʼಮನ್ʼಗಳಿಗೆ ಪೆವಿಲಿಯನ್ ಹಾದಿಯನ್ನು ತೋರಿಸಿದ ಬೌಲರ್ʼಗಳಿದ್ದಾರೆ. ಮುತ್ತಯ್ಯ ಮುರಳೀಧರನ್ (1347 ವಿಕೆಟ್) ಮತ್ತು ಶೇನ್ ವಾರ್ನ್ (1001 ವಿಕೆಟ್) ಅವರ ಹೆಸರುಗಳು ಅಭಿಮಾನಿಗಳ ಬಾಯಲ್ಲಿ ಆಗಾಗ ಕೇಳಿಬರುತ್ತವೆ. ಏಕೆಂದರೆ ಅವರಿಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು.
ಇದನ್ನೂ ಓದಿ: ಕಪ್ಪು ಹಾಲು ನೀಡುವ ವಿಶ್ವದ ಏಕೈಕ ಪ್ರಾಣಿ ಯಾವುದೆಂದು ನಿಮಗೆ ತಿಳಿದಿದೆಯೇ?
ಆದರೆ ನಾವಿಂದು ಓರ್ವ ಬೌಲರ್ʼನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರ ವೃತ್ತಿಜೀವನವು ಚಿಕ್ಕದಾಗಿರಬಹುದು. ಆದರೆ ಒಂದು ಕಾಲದಲ್ಲಿ ಈ ದಂತಕಥೆಯು ತನ್ನ ಬೌಲಿಂಗ್ʼನಿಂದಲೇ ಬ್ಯಾಟ್ಸ್‌ಮನ್ʼಗಳಲ್ಲಿ ಭಯವನ್ನು ಹುಟ್ಟುಹಾಕಿದ್ದರು.
ನಾವು ಇಲ್ಲಿ ಉಲ್ಲೇಖಿಸುತ್ತಿರುವ ಭಯಾನಕ ಬೌಲರ್ʼನ ಹೆಸರು ಸಿಡ್ನಿ ಬಾರ್ನ್ಸ್. ಇಂಗ್ಲೆಂಡ್ʼನ ಈ ಬಲಗೈ ವೇಗದ ಮಧ್ಯಮ ಬೌಲರ್ʼನ ಅಂತರರಾಷ್ಟ್ರೀಯ ವೃತ್ತಿಜೀವನವು 27 ಟೆಸ್ಟ್ ಪಂದ್ಯಗಳಿಗೆ ಸೀಮಿತವಾಗಿದ್ದರೂ ಸಹ, ಅಂಕಿಅಂಶಗಳು ಅವರು ಎಂತಹ ಬೌಲರ್ ಎಂದು ನಮಗೆ ಹೇಳುತ್ತವೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ ಒಂದು ಪಂದ್ಯದಲ್ಲಿ 17 ವಿಕೆಟ್ʼಗಳನ್ನು ಪಡೆದಿರುವುದು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಅವರು 2.36 ರ ಅತ್ಯುತ್ತಮ ಎಕಾನಮಿಯೊಂದಿಗೆ ಬೌಲಿಂಗ್ ಮಾಡಿದರು. 24 ಬಾರಿ 5 ವಿಕೆಟ್ ಮತ್ತು 7 ಬಾರಿ 10 ವಿಕೆಟ್ ಪಡೆದ ಸಿಡ್ನಿ ಬಾರ್ನ್ಸ್ ಅನೇಕ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನದಂತೆ ಕಾಡಿದ್ದು ಸುಳ್ಳಲ್ಲ.
1901 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಸಿಡ್ನಿ ಬಾರ್ನ್ಸ್, ತಮ್ಮ ಕೊನೆಯ ಟೆಸ್ಟ್ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದರು. 1913-14ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ನಡೆದ 4 ಟೆಸ್ಟ್‌ಗಳ ಸರಣಿಯಲ್ಲಿ ಸಿಡ್ನಿ ಬಾರ್ನ್ಸ್ 49 ವಿಕೆಟ್‌ಗಳನ್ನು ಪಡೆದರು. ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದು ಈ ಮೂಲಕ ಹೆಸರುವಾಸಿಯಾದರು. ಈ ದಾಖಲೆಯನ್ನು ಇನ್ನೂ ಯಾರೂ ಬ್ರೇಕ್ ಮಾಡಿಲ್ಲ. ಈ ನಾಲ್ಕು ಪಂದ್ಯಗಳ 8 ಇನ್ನಿಂಗ್ಸ್ʼಗಳಲ್ಲಿ ಕ್ರಮವಾಗಿ 5, 5, 8, 9, 3, 5, 7, 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇದನ್ನೂ ಓದಿ: ನಮಾಜ್ ಮಾಡುವಾಗ ಸಿಗುವ ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ: ಸ್ಟಾರ್ ಆಟಗಾರನ ಹೇಳಿಕೆ
ಸಿಡ್ನಿ ಬಾರ್ನ್ಸ್ ಟೆಸ್ಟ್ ಕ್ರಿಕೆಟ್ʼನಲ್ಲಿ 150 ವಿಕೆಟ್‌ಗಳನ್ನು ಕಬಳಿಸಿದ ವೇಗದ ಬೌಲರ್. 1913 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 150 ನೇ ವಿಕೆಟ್ ಪಡೆಯುವ ಮೂಲಕ ಈ ದೊಡ್ಡ ಸಾಧನೆ ಮಾಡಿದರು. ಇನ್ನು 40 ನೇ ವಯಸ್ಸಿನಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಸಿಡ್ನಿ ಬಾರ್ನ್ಸ್, ಈ ಸ್ವರೂಪದಲ್ಲಿ 10 ವಿಕೆಟ್ ಪಡೆದ ನಾಲ್ಕನೇ ಹಿರಿಯ ಕ್ರಿಕೆಟಿಗರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ