ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತೀಯ ತಂಡಕ್ಕೆ ಸಮಸ್ಯೆಗಳು ಹೆಚ್ಚಾಗಿದ್ದು, ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಂತರ ನಾಯಕ ವಿರಾಟ್ ಕೊಹ್ಲಿ ಸ್ವದೇಶಕ್ಕೆ ಮರಳಲಿದ್ದಾರೆ ಜೊತೆಗೆ ಶಮಿ ಗಾಯಗೊಂಡಿರುವುದು ಈಗ ತಂಡವನ್ನು ಚಿಂತೆಗೀಡು ಮಾಡಿದೆ. ಜೊತೆಗೆ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಕುಸಿದ ನಂತರ ಭಾರತ ತಂಡದಲ್ಲಿ ಏಕಾಏಕಿ ಎಲ್ಲವೂ ಬದಲಾಗುತ್ತಿದೆ.
ಆಸ್ಟ್ರೇಲಿಯಾ ಪ್ರವಾಸ: ರೋಹಿತ್ ಶರ್ಮಾಗಿಲ್ಲ ಸ್ಥಾನ ! ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು
ಇದೇ ಮೊದಲ ಬಾರಿಗೆ 1974 ರಲ್ಲಿ ಭಾರತ ಕೊನೆಯ ಬಾರಿಗೆ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 50 ಕ್ಕಿಂತಲೂ ಕಡಿಮೆ ಮೊತ್ತಕ್ಕೆ ಕುಸಿಯಿತು,ಈ ಹಿಂದೆ ಇಂಗ್ಲೆಂಡ್ ವಿರುದ್ಧ 43 ರನ್‌ಗಳಿಗೆ ಆಲೌಟ್ ಆಗಿತ್ತು.ಈಗ 36 ರನ್ ಗಳಿಗೆ ತಂಡದ ಇನಿಂಗ್ಸ್ ಕುಸಿಯುವ ಮೂಲಕ ಹೀನಾಯ ಸೋಲನ್ನು ಅನುಭವಿಸಿದೆ. ಆ ಮೂಲಕಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿತು, ಮತ್ತು ಈಗ ಭಾರತವು ಸರಣಿಯನ್ನು ಗೆಲ್ಲಲು ಉಳಿದ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಸ್ಥಿತಿಗೆ ಬಂದಿದೆ.
ಜನಪ್ರಿಯತೆಯಲ್ಲಿ ಧೋನಿ ಸಚಿನ್ ಮತ್ತು ಕೊಹ್ಲಿಯನ್ನು ಮೀರಿಸಿದ್ದಾರೆ-ಸುನಿಲ್ ಗವಾಸ್ಕರ್
ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯಗೊಂಡಿದ್ದಾರೆ, ಸುದ್ದಿ ಸಂಸ್ಥೆ ಎಎನ್‌ಐ ನೀಡಿದ ವರದಿಯ ಪ್ರಕಾರ, ಶಮಿಯನ್ನು ಟೆಸ್ಟ್ ಸರಣಿಯಿಂದ ಹೊರಗುಳಿಸಲಾಗಿದೆ, ಆದರೂ ಬಿಸಿಸಿಐನಿಂದ ಅಧಿಕೃತ ಸ್ಪಷ್ಟನೆ ಬರಬೇಕಾಗಿದೆ.ಶಮಿ ಅವರ ಗಾಯವು ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಭಾರತದ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸಾರ್ವಕಾಲಿಕ ನಂ 1 ಆಟಗಾರ ಇವರೇ ಎಂದ ಸುನಿಲ್ ಗವಾಸ್ಕರ್...? ಯಾರವರು ?
'ಇದು ಒಂದು ದೊಡ್ಡ ಸಮಸ್ಯೆ, ಅವರು ವಿಕೆಟ್ ತೆಗೆದುಕೊಳ್ಳುವ ಜಾಣ್ಮೆ ಹೊಂದಿದ್ದಾರೆ,ಅವರು ತಮ್ಮ ಬೌನ್ಸರ್ ಮತ್ತು ಯಾರ್ಕರ್ಗಳೊಂದಿಗೆ ಎದುರಾಳಿ ತಂಡಕ್ಕೆ ಭೀತಿ ಹುಟ್ಟಿಸಬಹುದು.ಅವರು ಆಡದಿದ್ದರೆ, ಅದು ಭಾರತಕ್ಕೆ ತೊಂದರೆಯಾಗಲಿದೆ'ಎಂದು ಗವಾಸ್ಕರ್ ಸ್ಪೋರ್ಟ್ಸ್ ತಕ್‌ಗೆ ತಿಳಿಸಿದರು.ಇಶಾಂತ್ ಶರ್ಮಾ ಫಿಟ್ ಆಗಿದ್ದರೆ, ಅವರನ್ನು ಈಗ ಆಸ್ಟ್ರೇಲಿಯಾಕ್ಕೆ ಕಳುಹಿಸಲು ಸೂಚಿಸುತ್ತಿದ್ದೇನೆ.ಅವರು ದಿನದಲ್ಲಿ 20 ಓವರ್‌ಗಳನ್ನು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರೆ,ಮ್ಯಾನೇಜ್‌ಮೆಂಟ್ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕು, ಇದರಿಂದ ಅವರು ಸಿಡ್ನಿ ಟೆಸ್ಟ್‌ಗೆ ಸಿದ್ಧರಾಗಬಹುದು' ಎಂದು ಅವರು ಹೇಳಿದರು.