IND vs NZ : ಭಾರತ - ನ್ಯೂಜಿಲೆಂಡ್ 3ನೇ ODI ಪಂದ್ಯದ ಸ್ಥಳ ಬದಲಾವಣೆ.!? ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ND vs NZ 3rd ODI Match: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಜನವರಿ 21 ರಂದು ನಡೆಯಲಿದ್ದು, ಮೂರನೇ ಪಂದ್ಯ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯಲಿದೆ. ಈ ಹಿಂದೆ ಪಂದ್ಯದ ಟಿಕೆಟ್ ಮಾರಾಟದಲ್ಲಿ ಬ್ಲಾಕ್ ಮಾರ್ಕೆಟಿಂಗ್ ಬಗ್ಗೆ ವಿವಾದ ಎದ್ದಿತ್ತು.

Written by - Chetana Devarmani | Last Updated : Jan 20, 2023, 01:53 PM IST
  • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ
  • ಭಾರತ - ನ್ಯೂಜಿಲೆಂಡ್ 3ನೇ ODI ಪಂದ್ಯದ ಸ್ಥಳ ಬದಲಾವಣೆ.!?
  • ಹೈಕೋರ್ಟ್‌ನಿಂದ ಮಹತ್ವದ ತೀರ್ಪು
IND vs NZ : ಭಾರತ - ನ್ಯೂಜಿಲೆಂಡ್ 3ನೇ ODI ಪಂದ್ಯದ ಸ್ಥಳ ಬದಲಾವಣೆ.!? ಹೈಕೋರ್ಟ್‌ನಿಂದ ಮಹತ್ವದ ತೀರ್ಪು  title=
IND Vs NZ

IND vs NZ 3rd ODI Match: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಜನವರಿ 21 ರಂದು ನಡೆಯಲಿದ್ದು, ಮೂರನೇ ಪಂದ್ಯ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯಲಿದೆ. ಈ ಹಿಂದೆ ಪಂದ್ಯದ ಟಿಕೆಟ್ ಮಾರಾಟದಲ್ಲಿ ಬ್ಲಾಕ್ ಮಾರ್ಕೆಟಿಂಗ್ ಬಗ್ಗೆ ವಿವಾದ ಎದ್ದಿತ್ತು. ಹೀಗಿರುವಾಗ ಈ ಕುರಿತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ವಿಚಾರಣೆಯೂ ನಡೆದಿದೆ. ಈ ಇಡೀ ವಿಷಯವನ್ನು ನೋಡಿದರೆ ಈ ಪಂದ್ಯ ನಡೆಯುವ ಸ್ಥಳ ಬದಲಾವಣೆ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಸಂಪೂರ್ಣ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಇದೀಗ ತನ್ನ ತೀರ್ಪು ನೀಡಿದೆ.

ಇಂದೋರ್‌ನಲ್ಲಿ ಜನವರಿ 24 ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯದ ಟಿಕೆಟ್‌ಗಳ ಆನ್‌ಲೈನ್ ಮಾರಾಟದಲ್ಲಿನ ಅಕ್ರಮಗಳ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್‌ನ ಇಂದೋರ್ ಪೀಠವು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 25,000 ರೂಪಾಯಿ ದಂಡವನ್ನೂ ವಿಧಿಸಿದೆ. ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜನಪ್ರಿಯತೆ ಗಳಿಸಲು ಈ ವ್ಯಕ್ತಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ : ಭಾರತ - ಪಾಕ್‌ ಕ್ರಿಕೆಟ್ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಈ ದೇಶದಲ್ಲಿ ನಡೆಯಲಿದೆ IND vs PAK T20 ಪಂದ್ಯ!

ಕಾಂಗ್ರೆಸ್ ನಾಯಕ ರಾಕೇಶ್ ಸಿಂಗ್ ಯಾದವ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​(ಎಂಪಿಸಿಎ) ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದ ಟಿಕೆಟ್‌ಗಳ ದುರುಪಯೋಗ ಮತ್ತು ಬ್ಲಾಕ್ ಮಾರ್ಕೆಟಿಂಗ್ ಆರೋಪಿಸಿದ್ದಾರೆ.  

ಉಭಯ ಪಕ್ಷಗಳ ವಾದವನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ಜನವರಿ 18 ರಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ. ನ್ಯಾಯಾಲಯ ತನ್ನ ತೀರ್ಪಿನಲ್ಲಿ, "ಅರ್ಜಿದಾರರು ಪ್ರತಿವಾದಿಗಳ ವಿರುದ್ಧ ಹೊರಿಸಲಾದ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದ್ದಾರೆ. ಅವರ ಆರೋಪಕ್ಕೆ ಪೂರಕವಾದ ಯಾವುದೇ ದಾಖಲೆಗಳನ್ನು ಸಹ ಅವರು ಪ್ರಸ್ತುತಪಡಿಸಿಲ್ಲ. ಕೇವಲ ಜನಪ್ರಿಯತೆ ಗಳಿಸುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ : IND Vs NZ 2nd ODI: ಭಾರತ - ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯ ರದ್ದು.!? ಕ್ರಿಕೆಟ್‌ ಫ್ಯಾನ್ಸ್ ಆತಂಕಕ್ಕೆ ಇದೇ ಕಾರಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News