ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಈ ಮೂವರು ನಾಯಕರು ಮಾತ್ರ ಟೆಸ್ಟ್ ಪಂದ್ಯ ಗೆದ್ದಿರೋದು…

India vs South Africa Test: ಏಕದಿನ ಸರಣಿ ಬಳಿಕ, ಭಾರತೀಯ ಕ್ರಿಕೆಟ್ ತಂಡವು ಇದೀಗ ಪ್ರೋಟೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಈ ಪಂದ್ಯ ನಾಳೆಯಿಂದ ಅಂದರೆ, ಡಿಸೆಂಬರ್ 26 ರಂದು ಆರಂಭವಾಗುತ್ತಿದೆ.

Written by - Bhavishya Shetty | Last Updated : Dec 25, 2023, 10:09 PM IST
    • ಪ್ರೋಟೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ
    • ದಕ್ಷಿಣ ಆಫ್ರಿಕಾವು ಭಾರತದ ವಿರುದ್ಧ ಉತ್ತಮವಾದ ದಾಖಲೆಯನ್ನು ಹೊಂದಿದೆ
    • ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್ ದಾಖಲೆ ತೀರಾ ಕಳಪೆಯಾಗಿದೆ
ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಈ ಮೂವರು ನಾಯಕರು ಮಾತ್ರ ಟೆಸ್ಟ್ ಪಂದ್ಯ ಗೆದ್ದಿರೋದು…  title=
India vs South Africa

India vs South Africa Test: T20 ಪಂದ್ಯದಲ್ಲಿ ಡ್ರಾ ಆದ ಬಳಿಕ, ಕೆಎಲ್ ರಾಹುಲ್ ನಾಯಕತ್ವದ ಮೆನ್ ಇನ್ ಬ್ಲೂ, ಡಿಸೆಂಬರ್ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಗಮನಾರ್ಹ 2-1 ಸರಣಿ ವಿಜಯವನ್ನು ಸಾಧಿಸಿತು. ಈ ಮೂಲಕ ರಾಹುಲ್, ದಕ್ಷಿಣ ಆಫ್ರಿಕಾದಲ್ಲಿ ODI ಸರಣಿ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: ಅಮೃತಕ್ಕೆ ಸಮ ಕಲ್ಲಂಗಡಿ ಜ್ಯೂಸ್: ವಾರಕ್ಕೊಂದು ಗ್ಲಾಸ್ ಕುಡಿದರೆ ಈ 5 ಕಾಯಿಲೆಗಳನ್ನು ಶಾಶ್ವತವಾಗಿ ದೂರ ಮಾಡುತ್ತೆ

ಏಕದಿನ ಸರಣಿ ಬಳಿಕ, ಭಾರತೀಯ ಕ್ರಿಕೆಟ್ ತಂಡವು ಇದೀಗ ಪ್ರೋಟೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಈ ಪಂದ್ಯ ನಾಳೆಯಿಂದ ಅಂದರೆ, ಡಿಸೆಂಬರ್ 26 ರಂದು ಆರಂಭವಾಗುತ್ತಿದೆ.

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಈ ಎರಡು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲಲು ಉತ್ಸುಕರಾಗಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಸಾಂಪ್ರದಾಯಿಕವಾಗಿ ತವರಿನಲ್ಲಿ ಪ್ರಾಬಲ್ಯ ಹೊಂದಿದೆ. ಆದರೆ ಈ ಬಾರಿ ಟೀಂ ಇಂಡಿಯಾ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ಇನ್ನು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್ ದಾಖಲೆ ತೀರಾ ಕಳಪೆಯಾಗಿದೆ. ಇದುವರೆಗೆ ಕೇವಲ ಮೂವರು ಭಾರತೀಯ ನಾಯಕರು ಮಾತ್ರ ಈ ನೆಲದಲ್ಲಿ ಗೆಲುವು ದಾಖಲಿಸಲು ಸಾಧ್ಯವಾಗಿದೆ. ಅವರು ಯಾರೆಂದರೆ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ.

ಇದನ್ನೂ ಓದಿ: ಜಿರಳೆಗೂ ‘ಬಂಗಾರದ ಬೆಲೆ’... ಈ ಮಾರ್ಕೆಟ್’ನಲ್ಲಿ ಜಿರಳೆ ಮಾರಿದ್ರೆ ಸಿಗುತ್ತೆ ಲಕ್ಷ ಲಕ್ಷ ದುಡ್ಡು!

ಭಾರತ ತಂಡವು ದಕ್ಷಿಣ ಆಫ್ರಿಕಾ ನೆಲದಲ್ಲಿ 23 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದರಲ್ಲಿ ಕೇವಲ ನಾಲ್ಕರಲ್ಲಿ ಮಾತ್ರ ಗೆದ್ದಿರುವ ಭಾರತ, 12 ಪಂದ್ಯಗಳಲ್ಲಿ ತಂಡ ಸೋಲು ಕಂಡಿದ್ದು, 7 ಪಂದ್ಯಗಳು ಡ್ರಾ ಆಗಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News