ಮೊಹಾಲಿ: ರೋಹಿತ್ ಶರ್ಮಾಗೆ ತಮ್ಮ ದಶಕಗಳ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 2017 `ಉತ್ತಮ ವರ್ಷ' ವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಭಾರತ-ಶ್ರೀಲಂಕಾ ನಡುವೆ ನಡೆದ ಪಂದ್ಯದಲ್ಲಿ ರೋಹಿತ್ ಅವರ ಅಜೇಯ 208 ರನ್ ನೆರವಿನಿಂದ ಭಾರತವು ನಾಲ್ಕು ವಿಕೆಟಿಗೆ 392 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಈ ಮೊತ್ತ ನೋಡಿ ಆಘಾತಕ್ಕೆ ಒಳಗಾದ ಶ್ರೀಲಂಕಾ ತಂಡವು ಭಾರತೀಯ ಬೌಲರ್‌ಗಳ ನಿಖರ ದಾಳಿಯನ್ನು ಎದುರಿಸಲಾಗದೆ 8 ವಿಕೆಟಿಗೆ 251 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಅಲ್ಲದೆ, ರೋಹಿತ್ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಈ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಮೂರನೇ ದ್ವಿಶತಕ ಬಾರಿಸುವ ಮೂಲಕ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು. ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಜತೆಗೂಡಿ ಅಮೋಘ ಜತೆಯಾಟದಲ್ಲಿ ಪಾಲ್ಗೊಂಡ ರೋಹಿತ್ ನಾಯಕನ ಆಟವಾಡಿ ತಂಡಕ್ಕೆ ಅರ್ಹ ಗೆಲುವು ದೊರಕಿಸಿಕೊಟ್ಟರಲ್ಲದೇ ಮೊದಲ ಪಂದ್ಯದ ಸೋಲಿನ ಕಹಿಯನ್ನು ಮರೆಯುವಂತೆ ಮಾಡಿದರು.
ಪೂರ್ಣ ಸರಣಿಯಲ್ಲಿ ಮೊದಲ ಬಾರಿ ತಂಡದ ನೇತೃತ್ವ ವಹಿಸಿದ್ದ ರೋಹಿತ್ ಏಕಾಂಗಿಯಾಗಿ ಹೋರಾಡಿ ಭಾರತದ ಭರ್ಜರಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.
ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮೂರನೇ ದ್ವಿಶತಕ ಬಾರಿಸಿದ ರೋಹಿತ್ ಇ ವರ್ಷದ ಏಳು ಶತಕಗಳನ್ನು ಬಾರಿಸುವ ಮೂಲಕ ಕಳೆದ ನವೆಂಬರ್ನಲ್ಲಿ ತೊಡೆಯ ಶಸ್ತ್ರ ಚಿಕಿತ್ಸೆಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದರು.
"ಒಬ್ಬ ಕ್ರಿಕೆಟಿಗನಾಗಿ ಈ ವರ್ಷ ನನಗೆ ಉತ್ತಮ ವರ್ಷವಾಗಿದೆ. ಒಳ್ಳೆಯ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದೇನೆ" ಎಂದು ಶ್ರೀಲಂಕಾ ವಿರುದ್ಧ ಭಾರತದ ಸರಣಿ-ಜಯಗಳಿಸಿದ ರೋಹಿತ್ ಹೇಳಿದರು.
ಸೀಮಿತ-ಓವರುಗಳಿದ್ದಾಗ ತಂಡದ ಪ್ರಾರಂಭಿಕ ಆಟಗಾರನು ಒಂದು ಪ್ರಮುಖ ಭಾಗವಾಗುತ್ತಾನೆ. ಆದರೆ 11ನೇ ಟೆಸ್ಟ್ನಲ್ಲಿ ರೋಹಿತ್ ಉತ್ತಮ ಆರಂಭಿಕ ಆಟಗಾರ ಎಂಬುದು ಖಚಿತವಾಗಿರಲಿಲ್ಲ. ಆದರೆ ಆತನು ಪ್ರತಿ ಪಂದ್ಯವನ್ನು ಆಡುವ ಮನಸ್ಥಿತಿ ಹೊಂದ್ದಿದ್ದರಿಂದ ಅತಿಹೆಚ್ಚು ರನ್ಗಳನ್ನು ಗಳಿಸಲು ಕಾರಣವಾಯಿತು.
"ಯಾವುದೇ ಸಂದರ್ಭ ಎದುರಾದರೂ ಅದನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಈ ಹಿಂದೆ ಆಗಿದ್ದರ ಬಗ್ಗೆ ನನಗೆ ವಿಷಾದವಿಲ್ಲ, ಆದರೆ ಭವಿಷ್ಯ ಉಜ್ವಲವಾಗಿದೆ. ಕಳೆದ ಐದಾರು ತಿಂಗಳಿಂದ ಇದೇ ಮನಸ್ಥಿತಿ ಇಟ್ಟುಕೊಂಡಿದ್ದೇನೆ'' ಎಂದು ರೋಹಿತ್ ಹೇಳಿದರು.
"ನಾನು ಟೆಸ್ಟ್ ಪಂದ್ಯಗಳಿಗೆ ಸಿದ್ಧವಾಗಬೇಕೆಂದು ಬಯಸಿದ್ದೆ. ನಮ್ಮ ಆಟಗಾರರ ಸಂಯೋಜನೆಬಗ್ಗೆ ನಾನು ತಿಳಿದಿದ್ದೆ. ಕೆಲವೊಮ್ಮೆ 5 ಬೌಲರ್ಗಳಿದ್ದರೆ ಮತ್ತೆ ಕೆಲವೊಮ್ಮೆ ನಾಲ್ವರಿರುತ್ತಿದ್ದರು, ಹಾಗಾಗಿ ನಾನು ಕೆಲವೊಮ್ಮೆ ಆಡುತ್ತಿದ್ದೆ, ಕೆಲವೊಮ್ಮೆ ಇಲ್ಲ. ಹಾಗಾಗಿ ನಾನು ಆಡುವ ಪ್ರತಿ ಪಂದ್ಯವನ್ನು ಚೆನ್ನಾಗಿ ಆಡಬೇಕೆಂಡು ತಯಾರಾಗುವುದಾಗಿ ರೋಹಿತ್ ಹೇಳಿದರು.