INDvsBAN: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತಕ್ಕೆ 7ನೇ ಬಾರಿ ಒಲಿದ ಏಷ್ಯಾ ಕಪ್ ಕಿರೀಟ

ತೀವ್ರ ಕುತೂಹಲದ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಟೀಮ್ ಇಂಡಿಯಾ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದೆ. 

Last Updated : Sep 29, 2018, 07:14 AM IST
INDvsBAN: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತಕ್ಕೆ 7ನೇ ಬಾರಿ ಒಲಿದ ಏಷ್ಯಾ ಕಪ್ ಕಿರೀಟ title=
Pic Courtesy: IANS

ದುಬೈ: ದುಬೈನಲ್ಲಿ ನಡೆದ ಏಷ್ಯಾ ಕಪ್ 2018ರ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 3 ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ಸ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಈ ಮೂಲಕ ಭಾರತ ಭಾರತ  ದಾಖಲೆಯ ಏಳನೇ ಏಷ್ಯಾಕಪ್ ಪ್ರಶಸ್ತಿಯನ್ನು  ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತದ ನಿರ್ಧಾರ ಪ್ರಾರಂಭದಲ್ಲಿ ತಪ್ಪು ಎನ್ನುವಂತೆ ಭಾಸವಾಗಿತ್ತು.ಆರಂಭದಲ್ಲಿ  ಬಾಂಗ್ಲಾದೇಶದ ಪರ ಬ್ಯಾಟಿಂಗ್ ಇಳಿದ ಲಿಟನ್ ದಾಸ್ ಮತ್ತು ಮೆಹದಿ ಹಸನ್ ಅವರ ಉತ್ತಮ ಆರಂಭದಿಂದಾಗಿ 300ಕ್ಕೂ ಅಧಿಕ ರನ್ ಗಳಿಸುವ ಸೂಚನೆ ನೀಡಿತ್ತು. ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದ್ದ ಬಾಂಗ್ಲಾದೇಶ ನಂತರ ಧಿಡೀರ್‌ ಕುಸಿಯಿತು. ಬಾಂಗ್ಲಾದೇಶದ ಪರ ಲಿಟನ್ ದಾಸ್ ಒಬ್ಬರೇ 121 ರನ್ ಗಳಿಸುವ ಮೂಲಕ  ಅಪಾಯಕಾರಿಯಾಗಿ ಪರಿಣಮಿಸಿದರು.ಆದರೆ ಭಾರತದ ಪರ ಕುಲದೀಪ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದಾಗಿ ಬಾಂಗ್ಲಾದೇಶ ತಕ್ಷಣ  ಕುಸಿತ ಕಂಡಿತು. ಯಾದವ್ ಬಾಂಗ್ಲಾದ  ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ  ಬ್ಯಾಟಿಂಗ್ ಬೆನ್ನೆಲುಬು ಮುರಿದರು.ಇವರಿಗೆ ಸಾಥ್ ನೀಡಿದ  ಕೇದಾರ್ ಜಾದವ್ ಕೂಡ ಎರಡು ವಿಕೆಟ್ ಕಬಳಿಸಿದರು. ಅಂತಿಮವಾಗಿ ಬಾಂಗ್ಲಾ 48.3 ಓವರ್​​ಗಳಲ್ಲಿ 222 ರನ್​​ಗೆ ಆಲೌಟ್ ಆಯಿತು. 

ಬಾಂಗ್ಲಾ ನೀಡಿದ 223 ರನ್ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಅಘಾತವನ್ನು ಅನುಭವಿಸಿತು. ಶಿಖರ್ ಧವನ್ 15 ರನ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಅನಂತರ ರೋಹಿತ್ ಶರ್ಮಾ 48 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರೆ, ಅಂಬಾಟಿ ರಾಯುಡು 2 ಗೆ ಕ್ಯಾಚ್ ಒಪ್ಪಿಸಿದರು. ನಂತರದಲ್ಲಿ ಧೋನಿ–ಕಾರ್ತಿಕ್ ಜೊತೆಯಾಟ ತಂಡವನ್ನ ಗೆಲುವಿನ ದಡ ತಲುಪಿಸಬಹುದು ಎಂದೇ ನಂಬಲಾಗಿತ್ತು. ಆದರೆ ಇಬ್ಬರೂ ನಂಬಿಕೆಯನ್ನು ಹುಸಿಗೊಳಿಸಿದರು. ದಿನೇಶ್ ಕಾರ್ತಿಕ್ 37 ರಂ ಗಳಿಸಿ ವಿಕೆಟ್ ಒಪ್ಪಿಸಿದರೆ, ಮಹೇಂದ್ರ ಸಿಂಗ್ ಧೋನಿ 36 ರನ್ ಗಳಿಸಿ ನಿರ್ಗಮಿಸಿದರು. ಇದರಿಂದಾಗಿ ಭಾರತ ಸೋಲಿನ ಭೀತಿಯಲ್ಲಿತ್ತು. ಕೊನೆಯ ಓವರ್ ಅಂತೂ ಸಾಕಷ್ಟು ರೋಚಕತೆಗೆ ಸಾಕ್ಷಿಯಾಯಿತು. 6 ಎಸೆತಗಳಲ್ಲಿ 6 ರನ್ ಗಳಿಸಬೇಕಾಗಿತ್ತು. ಕೆಎಂ ಜಾದವ್  ಮತ್ತು ಕುಲದೀಪ್ ಯಾದವ್  ಜೋಡಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಒಂದು ಎಸೆತಕ್ಕೆ ಒಂದು ರನ್ ಗಳಿಸಬೇಕಾದ ಸಂದಿಗ್ಧತೆಯ ಸಂದರ್ಭದಲ್ಲಿ ಈ ಜೋಡಿ ತಾಳ್ಮೆ ಆಟವಾಡಿ ಟೀಂ ಇಂಡಿಯಾ ಗೆಲ್ಲಲು ನೆರವಾಯಿತು. ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 223 ರನ್ ಪಡೆದು ವಿಜಯದ ನಗೆ ಬೀರಿತು.
 

Trending News