Arjuna Awards: ಧೋನಿ To ನೆಹ್ರಾ.. ಈ 4 ದಿಗ್ಗಜ ಕ್ರಿಕೆಟಿಗರಿಗೆ ಒಲಿಯದ ಅರ್ಜುನ್ ಪ್ರಶಸ್ತಿ.!

Arjuna Awards : ಕೆಲವು ಭಾರತದ ದಿಗ್ಗಜ ಕ್ರಿಕೆಟಿಗರು ಇದುವರೆಗೂ ಅರ್ಜುನ ಪ್ರಶಸ್ತಿ ಪಡೆದಿಲ್ಲ.   

Written by - Chetana Devarmani | Last Updated : Jan 10, 2024, 10:19 AM IST
  • ಅರ್ಜುನ ಪ್ರಶಸ್ತಿಗೆ ಭಾಜನರಾಗದ ಟೀಮ್‌ ಇಂಡಿಯಾ ಆಟಗಾರರು
  • ಅರ್ಜುನ ಪ್ರಶಸ್ತಿ ಪಡೆದಯದ ಭಾರತದ ಕ್ರಿಕೆಟರ್‌
  • ಭಾರತದ ದಿಗ್ಗಜ ಕ್ರಿಕೆಟಿಗರ ಪಾಲಾಗದ ಅರ್ಜುನ ಪ್ರಶಸ್ತಿ
Arjuna Awards: ಧೋನಿ To ನೆಹ್ರಾ.. ಈ 4 ದಿಗ್ಗಜ ಕ್ರಿಕೆಟಿಗರಿಗೆ ಒಲಿಯದ ಅರ್ಜುನ್ ಪ್ರಶಸ್ತಿ.! title=

Arjuna Awards : ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದರು. ಪಾದದ ಗಾಯದಿಂದ ಚೇತರಿಸಿಕೊಂಡಿರುವ ಶಮಿ ಸನ್ಮಾನ ಸ್ವೀಕರಿಸಲು ಸಮಾರಂಭದಲ್ಲಿ ಹಾಜರಿದ್ದರು. ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ 7 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೆಲವು ಭಾರತದ ದಿಗ್ಗಜ ಕ್ರಿಕೆಟಿಗರು ಇದುವರೆಗೂ ಅರ್ಜುನ ಪ್ರಶಸ್ತಿ ಪಡೆದಿಲ್ಲ. 

ಮಹೇಂದ್ರ ಸಿಂಗ್ ಧೋನಿ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ. ಮಹೇಂದ್ರ ಸಿಂಗ್ ಧೋನಿ ಪದ್ಮಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ ಸೇರಿದಂತೆ ಹಲವು ದೊಡ್ಡ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ಆಶ್ಚರ್ಯಕರ ವಿಷಯವೆಂದರೆ ಮಹೇಂದ್ರ ಸಿಂಗ್ ಧೋನಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿಲ್ಲ. 

ಇದನ್ನೂ ಓದಿ: Mohammed Shami: ನನ್ನ ಜೀವನದಲ್ಲಿ ದೊಡ್ಡ ಸಾಧನೆ.. ಅರ್ಜುನ ಪ್ರಶಸ್ತಿ ಕುರಿತು ಶಮಿ ಕಾಮೆಂಟ್!

ಧೋನಿ ನಾಯಕತ್ವದಲ್ಲಿ ಭಾರತವು ICC T20 ವಿಶ್ವಕಪ್ (2007), ODI ವಿಶ್ವಕಪ್ (2011) ಮತ್ತು ICC ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಗಳನ್ನು ಗೆದ್ದಿದೆ. ಇದಲ್ಲದೇ 2009ರಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ನಂಬರ್ ಒನ್ ಆಯಿತು.

ಸ್ಟಾರ್‌ ಕ್ರಿಕೆಟರ್‌ ಸುರೇಶ್ ರೈನಾ ಅವರು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ (ಟೆಸ್ಟ್, ODI ಮತ್ತು T20 ಅಂತರರಾಷ್ಟ್ರೀಯ) ಭಾರತಕ್ಕಾಗಿ ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್. ಐಪಿಎಲ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 6,000 ರನ್ ಗಳಿಸಿದ ದಾಖಲೆಯನ್ನು ಸುರೇಶ್ ರೈನಾ ಹೊಂದಿದ್ದಾರೆ. ಆದರೆ ಸುರೇಶ್ ರೈನಾ ಅರ್ಜುನ ಪ್ರಶಸ್ತಿಯನ್ನು ಗೆದ್ದಿಲ್ಲ.

1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಇದುವರೆಗೆ ಅರ್ಜುನ ಪ್ರಶಸ್ತಿ ಗೆದ್ದಿಲ್ಲ. ಕೃಷ್ಣಮಾಚಾರಿ ಶ್ರೀಕಾಂತ್ 2,062 ಟೆಸ್ಟ್ ರನ್ ಮತ್ತು 4,091 ODI ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 

ಇದನ್ನೂ ಓದಿ: ಟಿ20 ವಿಶ್ವಕಪ್’ಗೆ ರೋಹಿತ್ ಬದಲು ಈತನೇ ಭಾರತದ ಕ್ಯಾಪ್ಟನ್: ಸೀಕ್ರೆಟ್ ರಿವೀಲ್ ಮಾಡಿದ ಸ್ಟಾರ್ ಸ್ಪೋರ್ಟ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಕೂಡ ಅರ್ಜುನ ಪ್ರಶಸ್ತಿಯನ್ನು ಪಡೆದಿಲ್ಲ. ವಿಶ್ವಕಪ್ 2003 ನಲ್ಲಿ ಆಶಿಶ್ ನೆಹ್ರಾ ಅವರ ಸ್ಮರಣೀಯ ಬೌಲಿಂಗ್ ಸ್ಪೆಲ್ ಅನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುತ್ತಾರೆ. ಆಶಿಶ್ ನೆಹ್ರಾ ಭಾರತದ ಪರ ಏಕದಿನದಲ್ಲಿ 157, ಟೆಸ್ಟ್‌ನಲ್ಲಿ 44 ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. 

Trending News