ಟಿ20 ವಿಶ್ವಕಪ್’ಗೆ ರೋಹಿತ್ ಬದಲು ಈತನೇ ಭಾರತದ ಕ್ಯಾಪ್ಟನ್: ಸೀಕ್ರೆಟ್ ರಿವೀಲ್ ಮಾಡಿದ ಸ್ಟಾರ್ ಸ್ಪೋರ್ಟ್

Hardik Pandya Team India Captain: 2024ರ ಟಿ20 ವಿಶ್ವಕಪ್‌’ನಲ್ಲಿ ಐರ್ಲೆಂಡ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಭಾರತವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ T20 ವಿಶ್ವಕಪ್ 2024 ಅಭಿಯಾನವನ್ನು ಪ್ರಾರಂಭಿಸಲಿದೆ, ಇನ್ನು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪಂದ್ಯಾವಳಿಯಲ್ಲಿ ಎದುರಿಸಲಿದೆ.

Written by - Bhavishya Shetty | Last Updated : Jan 9, 2024, 06:08 PM IST
    • ICC ಪುರುಷರ T20 ವಿಶ್ವಕಪ್ 2024 ರ ವೇಳಾಪಟ್ಟಿ ಪ್ರಕಟ
    • ಜೂನ್ 5 ರಿಂದ ಐರ್ಲೆಂಡ್ ವಿರುದ್ಧ T20 ವಿಶ್ವಕಪ್ 2024 ಅಭಿಯಾನ
    • ವಿಶ್ವಕಪ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಕಿಡಿ
ಟಿ20 ವಿಶ್ವಕಪ್’ಗೆ ರೋಹಿತ್ ಬದಲು ಈತನೇ ಭಾರತದ ಕ್ಯಾಪ್ಟನ್: ಸೀಕ್ರೆಟ್ ರಿವೀಲ್ ಮಾಡಿದ ಸ್ಟಾರ್ ಸ್ಪೋರ್ಟ್  title=
Team India Captain

Hardik Pandya Team India Captain: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಜನವರಿ 5 ರಂದು ಮುಂಬರುವ ICC ಪುರುಷರ T20 ವಿಶ್ವಕಪ್ 2024 ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ICC T20 ವಿಶ್ವಕಪ್ 2024 ಜೂನ್ 1-29 ರವರೆಗೆ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿದ್ದು, ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಮುಖಾಮುಖಿಯಾಗಲಿವೆ.

ಇದನ್ನೂ ಓದಿ:ರಣಜಿ ಟ್ರೋಪಿ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಠಿಸಿದ ರಿಯಾನ್‌ ಪರಾಗ್‌ ! 2ನೇ ಅತೀ ವೇಗದ ಶತಕ ಸಾಧನೆ.

2024ರ ಟಿ20 ವಿಶ್ವಕಪ್‌’ನಲ್ಲಿ ಐರ್ಲೆಂಡ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಭಾರತವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ T20 ವಿಶ್ವಕಪ್ 2024 ಅಭಿಯಾನವನ್ನು ಪ್ರಾರಂಭಿಸಲಿದೆ, ಇನ್ನು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪಂದ್ಯಾವಳಿಯಲ್ಲಿ ಎದುರಿಸಲಿದೆ.

ಈ ಮಧ್ಯೆ, ಮೆಗಾ ಈವೆಂಟ್‌’ನ ವೇಳಾಪಟ್ಟಿಯನ್ನು ಪ್ರಕಟಿಸಿದ ಬಳಿಕ, ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು 2024 ರ ಟಿ 20 ವಿಶ್ವಕಪ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಕಾರಣ, ಹಾರ್ದಿಕ್ ಪಾಂಡ್ಯ ಅವರ ಚಿತ್ರವನ್ನು ಭಾರತ ನಾಯಕನಾಗಿ ಬಳಸಿಕೊಂಡಿರುವುದು. ಅಂದಹಾಗೆ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕರಾಗಿದ್ದಾರೆ.

ಇದನ್ನೂ ಓದಿ: ಮೈದಾನಕ್ಕೆ ಬಂದಾಗೆಲ್ಲ 'ರಾಮ್ ಸಿಯಾ ರಾಮ್' ಹಾಡು ಪ್ಲೇ ಮಾಡೋದೇಕೆ? ರಹಸ್ಯ ಬಿಚ್ಚಿಟ್ಟ ಕೇಶವ್

ಆದರೆ, 2024ರ ಟಿ 20 ವಿಶ್ವಕಪ್‌’ನಲ್ಲಿ ಭಾರತೀಯ ಓಪನರ್ ತಂಡವನ್ನು ಮುನ್ನಡೆಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಿಲ್ಲ. ಆದರೆ ಸ್ಟಾರ್ ಸ್ಪೋರ್ಟ್ಸ್ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಪ್ರೋಮೋದಲ್ಲಿ ಮತ್ತು 2024 ರ ಟಿ 20 ವಿಶ್ವಕಪ್ 2024ರ ವೇಳಾಪಟ್ಟಿಯ ಪೋಸ್ಟರ್‌’ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಚಿತ್ರವನ್ನು ಬಳಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News