IPL 2020: ರಾಜಸ್ಥಾನದ ವಿರುದ್ಧ ಕೋಲ್ಕತ್ತಾಗೆ 37 ರನ್ ಗಳ ಜಯ

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 37  ರನ್ ಗಳ ಗೆಲುವನ್ನು ಸಾಧಿಸಿದೆ.

Updated: Oct 1, 2020 , 12:11 AM IST
IPL 2020: ರಾಜಸ್ಥಾನದ ವಿರುದ್ಧ ಕೋಲ್ಕತ್ತಾಗೆ 37 ರನ್ ಗಳ ಜಯ
Photo Courtsey : Twitter

ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 37  ರನ್ ಗಳ ಗೆಲುವನ್ನು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಕೊಲ್ಕತ್ತಾ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳನ್ನು ಗಳಿಸಿತು. ಕೋಲ್ಕತ್ತಾ ಪರವಾಗಿ ಶುಬ್ಮನ್ ಗಿಲ್ 47, ಮೊರ್ಗಾನ್ 34, ರಸೆಲ್ 24 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.

ಜನರು ಕೊಹ್ಲಿ ಮನುಷ್ಯ ಎನ್ನುವುದನ್ನು ಮರೆತು ಯಂತ್ರ ಎಂದು ಭಾವಿಸಿದ್ದಾರೆ-ಕೊಹ್ಲಿ ಬಾಲ್ಯದ ಕೋಚ್

ಇದಾದ ನಂತರ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ತಾನ ತುಂಬಾ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು, ಟಾಮ್ ಕ್ಯುರಾನ್ 54 ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 30ರ ಗಡಿ ದಾಟಲಿಲ್ಲ. ಕೊಲ್ಕತ್ತಾ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ  ರಾಜಸ್ತಾನ ತಂಡವು 20 ಓವರ್ ಗಳಲ್ಲಿ  9 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.