ನವದೆಹಲಿ: IPL 2022 LATEST NEWS - ಭಾರತೀಯ ಕ್ರಿಕೆಟ್ ಮಂಡಳಿ (BCCI) 2022 ರ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಪ್ರಾರಂಭಕ್ಕೆ ಎರಡು ದಿನಾಂಕಗಳನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ. ಬಿಸಿಸಿಐ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ ಕೆಲ ಮಂಡಳಿಯ ಅಧಿಕಾರಿಗಳು ಮತ್ತು ಕೆಲ ಫ್ರಾಂಚೈಸಿ ಮಾಲೀಕರು ಲೀಗ್ ಅನ್ನು ಮಾರ್ಚ್ 27 ರಿಂದ ಪ್ರಾರಂಭಿಸಬೇಕೆಂದು ಬಯಸುತ್ತಿದ್ದಾರೆ. ಆದರೆ ಕೆಲವು ಪ್ರಭಾವಿ ವ್ಯಕ್ತಿಗಳು ಈ ದೊಡ್ಡ ಟೂರ್ನಿಯು ಲೋಧಾ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಏಪ್ರಿಲ್ 2 (IPL 2022 Dates) ರಿಂದ ಪ್ರಾರಂಭವಾಗಬೇಕು ಎನ್ನುತ್ತಿದ್ದಾರೆ ಎನ್ನಲಾಗಿದೆ.
ಐಪಿಎಲ್ ದಿನಾಂಕ ಬಹಿರಂಗ
ಅನಾಮಧೇಯತೆಯ ಷರತ್ತಿನ ಮೇಲೆ ಪಿಟಿಐಗೆ ಮಾಹಿತಿ ನೀಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು "ಕೆಲವು ತಂಡದ ಮಾಲೀಕರು ಇದನ್ನು ಮಾರ್ಚ್ 27 ರಂದು ಪ್ರಾರಂಭಿಸಲು ಒಲವು ಹೊಂದಿದ್ದಾರೆ, ಆದರೆ ಭಾರತವು ಮಾರ್ಚ್ 18 ರಂದು ಶ್ರೀಲಂಕಾ ವಿರುದ್ಧ ತನ್ನ ಕೊನೆಯ ಅಂತರರಾಷ್ಟ್ರೀಯ (ಟಿ 20) ಪಂದ್ಯವನ್ನು ಲಕ್ನೋದಲ್ಲಿ ಆಡಬೇಕಿದೆ. ನಂತರ ಲೋಧಾ ಸಮಿತಿಯ ನಿಯಮದ ಪ್ರಕಾರ 14 ದಿನಗಳ ಅಂತರ ನೀಡುವ ಅವಶ್ಯಕತೆ ಇದೆ. ಹೀಗಾಗಿ ಏಪ್ರಿಲ್ 2ರಿಂದ ಲೀಗ್ ಆರಂಭವಾಗಬಹುದು" ಎಂದಿದ್ದಾರೆ.
ಬಿಸಿಸಿಐ ಮೂಲಗಳಿಂದ ದೊರೆತ ಮಾಹಿತಿ
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ತವರಿನಲ್ಲಿ ಸತತ ಮೂರು ಬಯೋ ಬಬಲ್‌ಗಳ ನಂತರ ಭಾರತೀಯ ಆಟಗಾರರು ದಣಿದಿದ್ದಾರೆ ಎಂದು ಹೇಳಿದ್ದಾರೆ. ‘ಶ್ರೀಲಂಕಾ ಪ್ರವಾಸದ ನಂತರ 10 ದಿನಗಳೊಳಗೆ ಐಪಿಎಲ್ (IPL) ಆರಂಭಿಸುವ ಯೋಚನೆ ಮಾಡುವ ಮುನ್ನ ಆಟಗಾರರ ಆಯಾಸವನ್ನು ಬಿಸಿಸಿಐ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಬಿಸಿಸಿಐ ಮೂಲ ತಿಳಿಸಿದೆ.
ಲಕ್ನೋ ಮತ್ತು ಅಹಮದಾಬಾದ್‌ನ ಎರಡು ಹೊಸ ತಂಡಗಳು ಸೇರಿದಂತೆ ಎಲ್ಲಾ 10 ಐಪಿಎಲ್ ಫ್ರಾಂಚೈಸ್ ಮಾಲೀಕರು 2022 ರ ಐಪಿಎಲ್‌ಗೆ ಭಾರತವನ್ನು ಆತಿಥೇಯ ರಾಷ್ಟ್ರವನ್ನಾಗಿ ಬಯಸುತ್ತಿದ್ದಾರೆ ಎನ್ನಲಾಗಿದೆ. ಮುಂಬೈ ಮತ್ತು ಪುಣೆ ತಮ್ಮ ನೆಚ್ಚಿನ ನಗರಗಳಾಗಿವೆ ಎಂದು ಅವರು ಹೇಳಿದ್ದಾರೆ. ಅವರ ಎರಡನೇ ಆಯ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಗಿದೆ. ಈಗಾಗಲೇ ಅಲ್ಲಿ ಐಪಿಎಲ್ ಆಯೋಜಿಸಲಾಗಿದ್ದು, ಅವರ ಕೊನೆಯ ಆಯ್ಕೆ ದಕ್ಷಿಣ ಆಫ್ರಿಕಾ ಆಗಿದ್ದು, 2009ರಲ್ಲಿ ಅಲ್ಲಿ IPL ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಆದರೆ, ಭಾರತದಲ್ಲಿ ಕೋವಿಡ್ -19 ರ ಪರಿಸ್ಥಿತಿ ತುಂಬಾ ಹದಗೆಟ್ಟಾಗ ಮಾತ್ರ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ದಕ್ಷಿಣ ಆಫ್ರಿಕಾದ ಆಯ್ಕೆಯನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಶ್ರೀಲಂಕಾದಲ್ಲಿಯೂ ಆಯೋಜನೆಗೊಳ್ಳುವ ಸಾಧ್ಯತೆ ಇದೆ
ಇದಕ್ಕೂ ಮೊದಲು ಶ್ರೀಲಂಕಾದಲ್ಲಿಯೂ ಕೂಡ ಐಪಿಎಲ್ ಆಯೋಜನೆಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿತ್ತು. ಆದರೆ, ಮಂಡಳಿಯ ಸಭೆಯಲ್ಲಿ ಶ್ರೀಲಂಕಾ ಬಗ್ಗೆ ಉಲ್ಲೇಖ ಕೂಡ ಮಾಡಲಾಗಿಲ್ಲ. ದೊಡ್ಡ ಆಟಗಾರರ ಹರಾಜು ದಿನಾಂಕಕ್ಕೆ ಸಂಬಂಧಿಸಿದಂತೆ, ಮೂಲ ವೇಳಾಪಟ್ಟಿಯಂತೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಈ ಕುರಿತು ಮಾಹಿತಿ ನೀಡಿರುವ ಮಂಡಳಿಯ ಉನ್ನತ ಮೂಲಗಳು, “ಇಂದಿನ ಸಭೆಯು ಮುಖ್ಯವಾಗಿ ತಂಡದ ಮಾಲೀಕರಿಗೆ ಆಗಿತ್ತು, ಅವರು ತಮ್ಮ ಆದ್ಯತೆಯ ಸ್ಥಳಗಳ ವಿಷಯದ ಬಗ್ಗೆ ತಮ್ಮ ಸಲಹೆಗಳನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತು ಕೋವಿಡ್ -19 ರ ಮೂರನೇ ಅಲೆಯ ಪ್ರಭಾವ ಕಡಿಮೆಯಾದರೆ ಭಾರತದಲ್ಲಿ ಐಪಿಎಲ್ ಅನ್ನು ಆಯೋಜಿಸಬೇಕೆಂದು ಹೆಚ್ಚಿನ ಮಾಲೀಕರು ಬಯಸಿದ್ದಾರೆ" ಎಂದಿವೆ.
ಇದನ್ನೂ ಓದಿ-ಲಕ್ನೋ ಫ್ರಾಂಚೈಸಿಗೆ ಸೇರಲು ಕೆ.ಎಲ್.ರಾಹುಲ್ ಪಡೆದ ಹಣವೆಷ್ಟು ಗೊತ್ತೇ?
'ಮುಂಬೈನಲ್ಲಿ ಮೂರು ಮೈದಾನಗಳಿವೆ ಮತ್ತು ನಮ್ಮ ಬಳಿ ಪುಣೆ ಮೈದಾನ ಕೂಡ ಇದ್ದು, ಇದು ರಾಷ್ಟ್ರೀಯ ಮಹಾಮಾರ್ಗಕ್ಕೆ ಹೊಂದಿಕೊಂಡಂತೆ ಇದೆ. ನಾವು ವಾಂಖೆಡೆ, ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಸ್ಟೇಡಿಯಂಗಳೊಂದಿಗೆ (ನವಿ ಮುಂಬೈ) ಗಹುಂಜೆ ಕ್ರೀಡಾಂಗಣವನ್ನು ಬಳಸಬಹುದು. ಅಲ್ಲಿ ಯಾವುದೇ ವಿಮಾನ ಹಾರಾಟ ಇರುವುದಿಲ್ಲ ಮತ್ತು ಒಂದು ನಗರದಲ್ಲಿ ಜೈವಿಕ-ಬಬಲ್ ಅನ್ನು ರಚಿಸಬಹುದು' ಇನ್ನೊಂದು ಆಯ್ಕೆಯು ಯುಎಇ ಆಗಿದ್ದು, ಅಲ್ಲಿ ಕಟ್ಟುನಿಟ್ಟಾದ ಜೈವಿಕ-ಬಬಲ್‌ನಲ್ಲಿ ಎರಡು ಅವಧಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ' ಎಂದಿದ್ದಾರೆ.
ಇದನ್ನೂ ಓದಿ-Ind vs SA : ಭಾರತದ ಸೋಲಿಗೆ ವಿಲನ್ ಯಾರು? ಟೀಂನಿಂದ ಔಟ್ ಆಗ್ತಾನಾ ಈ ಆಟಗಾರ?
'ದಕ್ಷಿಣ ಆಫ್ರಿಕಾ ಕೊನೆಯ ಆಯ್ಕೆಯಾಗಿದೆ, ಆದರೆ ಈಗ ನಾವು ಅದನ್ನು ಆಯ್ಕೆಯಾಗಿ ಯೋಚಿಸುತ್ತಿಲ್ಲ. ಅದು ನಮ್ಮ ಕೊನೆಯ ಆಯ್ಕೆಯಗಿರಲಿದೆ.. ಪ್ರೇಕ್ಷಕರ ಪ್ರವೇಶಕ್ಕೆ ಸಂಬಂಧಿಸಿದಂತೆ, ಪಂದ್ಯಾವಳಿ ಸಮೀಪಿಸುತ್ತಿದ್ದಂತೆಯೇ ನಿರ್ಧಾರ ಕೈಗೊಳ್ಳುವುದು ಉಚಿತ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-"ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೊರತುಪಡಿಸಿ ಒತ್ತಡ ನಿಭಾಯಿಸಬಲ್ಲವರು ಭಾರತ ತಂಡದಲ್ಲಿಲ್ಲ''
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.