ನವದೆಹಲಿ: ಬ್ಯಾಟಿಂಗ್‍ನಲ್ಲಿ ಮಿಂಚಿದರೂ ಕಳಪೆ ಬೌಲಿಂಗ್‍ನಿಂದಾಗಿ ಪಂಜಾಬ್ ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಮೊದಲ ಪಂದ್ಯದಲ್ಲಿಯೇ ಸೋಲು ಕಂಡಿತ್ತು. ಇದರಿಂದ ‘ಈ ಸಲ ಕಪ್ ನಮ್ದೆ’ ಎನ್ನುತ್ತಿರುವ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆಯುಂಟಾಗಿತ್ತು. ಬುಧವಾರ ಸಂಜೆ 7.30ಕ್ಕೆ ಮುಂಬೈನ ಡಾ. ಡಿ.ವೈ.ಪಾಟೀಲ್ ಸ್ಫೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡು ಪ್ಲೆಸಿಸ್ ಪಡೆ ಸೆಣಸಾಡಲಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ 15ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಕೋಲ್ಕತ್ತಾ ಮತ್ತೊಂದು ಗೆಲುವಿನ(RCB vs KKR) ಹುಮ್ಮಸ್ಸಿನಲ್ಲಿದೆ. ಕೆಕೆಆರ್ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ಆರ್‌ಸಿಬಿಗೆ ಬೌಲಿಂಗ್ ವಿಭಾಗದ್ದೇ ಸಮಸ್ಯೆ. ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಹೆಚ್ಚು ರನ್ ಬಿಟ್ಟುಕೊಟ್ಟ ಕಾರಣ ಆರ್‌ಸಿಬಿ ಸೋಲು ಕಾಣಬೇಕಾಯಿತು.
ಇದನ್ನೂ ಓದಿ: IPL 2022 ಹರಾಜಿನಲ್ಲಿ 10.75 ಕೋಟಿಗೆ ಮಾರಾಟವಾದ ಈ ಆಟಗಾರನ ಅತ್ಯಂತ ಮುಜುಗರದ ದಾಖಲೆ!
𝗧𝗢𝗣 𝗣𝗘𝗥𝗙𝗢𝗥𝗠𝗔𝗡𝗖𝗘𝗦 against KKR
Some unforgettable performances from our stars over the years against tonight’s opponents. 🤩
Which one was your favourite, 12th Man Army? 🙌🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvKKR pic.twitter.com/NQL8OAs7hS
— Royal Challengers Bangalore (@RCBTweets) March 30, 2022
ಕಳೆದ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಆರ್‌ಸಿಬಿ(RCB) ಕಣಕ್ಕಿಳಿಯಬೇಕಿದೆ. ಮುಖ್ಯವಾಗಿ ಬೌಲಿಂಗ್ ವಿಭಾಗ ಬಲಿಷ್ಠವಾಗಬೇಕಿದೆ. ಹಳೆಯ ಪಂದ್ಯದಂತೆಯೇ ಬೌಲರ್ ಗಳು ಹೆಚ್ಚು ರನ್ ಬಿಟ್ಟುಕೊಟ್ಟರೆ ಆರ್‌ಸಿಬಿ ತಂಡಕ್ಕೆ ಮುಳುವಾಗಲಿದೆ. ನಾಯಕ ಡು ಪ್ಲೆಸಿಸ್(Faf du Plessis), ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಅನುಜ್ ರಾವತ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಆದರೆ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ತಮ್ಮ ಲಯಕ್ಕೆ ಮರಳುವುದು ಅತಿಮುಖ್ಯವಾಗಿದೆ. ಶ್ರೀಲಂಕಾ ಸ್ಪಿನ್ನರ್ ವಣಿಂದು ಹಸರಂಗಾ ಕೂಡ ಕಮಾಲ್ ಮಾಡಬೇಕಿದೆ.
ಚೆನ್ನೈ ಸೋಲಿಸಿ ಆತ್ಮವಿಶ್ವಾಸದಲ್ಲಿರುವ ಶ್ರೇಯಸ್ ಅಯ್ಯರ್ ಪಡೆ(Kolkata Knight Riders)ಯನ್ನು ಕಡಿಮೆ ರನ್‍ಗಳಿಗೆ ಕಟ್ಟಿಹಾಕಲು ಡು ಪ್ಲೆಸಿಸ್ ಸೇನೆ ಪ್ರಯತ್ನಿಸಬೇಕಿದೆ. ಎಲ್ಲಾ ವಿಭಾಗದಲ್ಲಿಯೂ ಬಲಿಷ್ಠವಾಗಿರುವ ಕೆಕೆಆರ್ ತಂಡ ಆರ್‌ಸಿಬಿ ಸೋಲಿಸಲು ರಣತಂತ್ರ ರೂಪಿಸಿದೆ. ಅಂಜಿಂಕ್ಯ ರಹಾನೆ ಆರಂಭಿಕ ಬ್ಯಾಟ್ಸ್‍ಮನ್ ಆಗಿ ಲಯ ಕಂಡುಕೊಂಡಿದ್ದಾರೆ. ವೆಂಟಕೇಶ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನಿಲ್ ನರೈನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇಂದಿನ ಪಂದ್ಯದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸಲಿದೆ.
ಮುಸ್ಸಂಜೆಯ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸೋಲು-ಗೆಲುವು ನಿರ್ಧಾರವಾಗಲಿದೆ. ಈಗಾಗಲೇ ಮೊದಲ ಪಂದ್ಯ ಸೋತಿರುವ ಆರ್‌ಸಿಬಿಗೆ ಗೆಲುವಿನ ತವಕವಿದ್ದರೆ, ಕೆಕೆಆರ್ ತಂಡ ಮತ್ತೊಂದು ಗೆಲುವು ಸಾಧಿಸಲು ಹಾತೊರೆಯುತ್ತಿದೆ.
ಇದನ್ನೂ ಓದಿ: IPL 2022: ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದ ಗ್ಲೆನ್ ಮ್ಯಾಕ್ಸವೆಲ್..!
ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ವಣಿಂದು ಹಸರಂಗಾ, ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಜಲ್‌ವುಡ್, ಶಾಬಾಜ್ ಅಹಮದ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಶೆರ್ಫೆನ್ ರುದರ್‌ಫೋರ್ಡ್, ಜೇಸನ್ ಬೆಹ್ರನ್‌ಡಾರ್ಫ್, ಸುಯಶ್ ಪ್ರಭುದೇಸಾಯಿ, ಚಮಾ ಮಿಲಿಂದ, ಅನೀಶ್ವರ್ ಗೌತಮ್, ಕರ್ಣ ಶರ್ಮಾ, ಡೇವಿಡ್ ವಿಲ್ಲಿ, ಲವನೀತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್.
ಕೋಲ್ಕತ್ತ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಆರನ್ ಫಿಂಚ್, ವೆಂಕಟೇಶ್ ಅಯ್ಯರ್, ಅಭಿಜಿತ್ ತೋಮರ್, ಅಜಿಂಕ್ಯ ರಹಾನೆ, ಬಾಬಾ ಇಂದ್ರಜೀತ್, ನಿತೀಶ್ ರಾಣಾ, ಪ್ರಥಮ್ ಸಿಂಗ್, ರಿಂಕು ಸಿಂಗ್, ಅಶೋಕ್ ಶರ್ಮಾ, ಪ್ಯಾಟ್ ಕಮಿನ್ಸ್, ರಸಿಕ್ ದಾರ್, ಶಿವಂ ಮಾವಿ, ಟಿಮ್ ಸೌಥಿ, ಉಮೇಶ್ ಯಾದವ್, ವರುಣ ಚಕ್ರವರ್ತಿ, ಅಮನ್ ಖಾನ್, ಆಯಂಡ್ರೆ ರಸೆಲ್, ಅನುಕೂಲ್ ರಾಯ್, ಚಮಿಕಾ ಕರುಣರತ್ನೆ, ಮೊಹಮ್ಮದ್ ನಬಿ, ರಮೇಶ್ ಕುಮಾರ್, ಸುನೀಲ್ ನಾರಾಯಣ್, ಸ್ಯಾಮ್ ಬಿಲಿಂಗ್ಸ್, ಶೆಲ್ಡನ್ ಜಾಕ್ಸನ್
A high octane clash on the cards tonight. 🔥⚔️
It’s GAME ON! 🤜🏻🤛🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvKKR pic.twitter.com/UJcuMsLLfP
— Royal Challengers Bangalore (@RCBTweets) March 30, 2022
ಐಪಿಎಲ್ ಪಂದ್ಯ: 06
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್
ದಿನಾಂಕ: ಮಾರ್ಚ್ 30, ಬುಧವಾರ
ಸ್ಥಳ: ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಫೋರ್ಟ್ಸ್ ಅಕಾಡೆಮಿ ಕ್ರೀಡಾಂಗಣ
ಸಮಯ: ಸಂಜೆ 7.30ಕ್ಕೆ
==========================================================================================================
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.