ಮುಂಬೈ: ಇಲ್ಲಿನ ವಾಂಖೇಡ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 20 ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೂರು ರನ್ ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಲಕ್ನೋ ತಂಡವು ರಾಜಸ್ತಾನ್ ರಾಯಲ್ಸ್ ತಂಡವನ್ನು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 165 ರನ್ ಗಳಿಗೆ ನಿಯಂತ್ರಿಸಿತು. ರಾಜಸ್ತಾನ ರಾಯಲ್ಸ್ ಪರವಾಗಿ ಪಡಿಕ್ಕಲ್ 29, ಹೆತ್ಮಾರ್ 59,ಅಶ್ವಿನ್ ಅವರ 28 ರನ್ಗಳನ್ನು ಗಳಿಸುವ ಮೂಲಕ 160 ರನ್ ಗಡಿ ದಾಟುವಲ್ಲಿ ನೆರವಾದರು.ಲಕ್ನೋ ಪರವಾಗಿ ಕೆ.ಗೌತಮ್ ಹಾಗೂ ಹೋಲ್ಡರ್ ತಲಾ ಎರಡು ವಿಕೆಟ್ ಗಳನ್ನು ಪಡೆದು ಮಿಂಚಿದರು.
Match Report - @SHetmyer’s impeccable 59*(36) guided #RR to a competitive total of 165-6 before @yuzi_chahal shined with a four-wicket haul as RR successfully defended the target in the last over - by @mihirlee_58
READ - https://t.co/zxGn5E4T3S #TATAIPL pic.twitter.com/gpDn0FkbFH
— IndianPremierLeague (@IPL) April 10, 2022
ಇದನ್ನೂ ಓದಿ: IPL 2022, KKR vs DC: ಕೋಲ್ಕತ್ತಾ ನೈಟ್ ರೈಡರ್ಸ್ ಗೆ ದೆಹಲಿ ಕ್ಯಾಪಿಟಲ್ಸ್ ಸವಾಲು!
ಈ 166 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಲಕ್ನೋ ತಂಡವು ಆರಂಭದಲ್ಲಿ ಆಘಾತವನ್ನು ಎದುರಿಸಿತು ತಂಡದ ಮೊತ್ತ 14 ಆಗುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಡಿಕಾಕ್ 39, ಸ್ಟೋನಿಸ್ 38, ದೀಪಕ್ ಹೂಡಾ 25, ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ತಡಕ್ಕೆ ತಂದಿದ್ದರಾದರೂ ಕೂಡ ಕೊನೆಗೆ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಮಾತ್ರ ಗಳಿಸಿತು.ಆ ಮೂಲಕ ಕೇವಲ ಮೂರು ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತು.
ರಾಜಸ್ತಾನ ರಾಯಲ್ಸ್ ಪರವಾಗಿ ಯುಜುವೆಂದ್ರ ಚಹಾಲ್ ನಾಲ್ಕು ಹಾಗೂ ಟ್ರೆಂಟ್ ಬೌಲ್ಟ್ ಎರಡು ವಿಕೆಟ್ಗಳನ್ನು ಪಡೆಯುವ ಮೂಲಕ ಲಕ್ನೋ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.