ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಎಂಟನೇ ಪಂದ್ಯ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವೆ ನಡೆಯುತ್ತಿದೆ.
ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು.
ಮೊದಲನೇ ಇನ್ನಿಂಗ್ಸ್ ಪ್ರಾರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಮಾಯಾಂಕ್ ಅಗರ್ವಾಲ್ ಹಾಗೂ ಟ್ರಾವಿಸ್ ಹೆಡ್ ಕಣಕ್ಕಿಳಿಸಿತು.ಮಾಯಾಂಕ್ ಅಗರ್ವಾಲ್ 11(13), ಟ್ರಾವಿಸ್ ಹೆಡ್ 62(24), ಅಭಿಷೇಕ್ ಶರ್ಮ 63(23), ಐಡೆನ್ ಮಾರ್ಕ್ರಾಮ್ 42 (28) , ಹೆನ್ರಿಕ್ ಕ್ಲಾಸೆನ್ 80(34) ರನ್ ಗಳಿಸಿದರು. ಇದಕ್ಕೆ ವಿರುದ್ಧವಾಗಿ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ, ಪಿಯುಷ್ ಚಾವ್ಲಾ, ಜೆರಾಲ್ಡ್ ಕೊಯೆಡ್ಜಿ ತಲಾ 1 ವಿಕೆಟ್ಗಳನ್ನು ಪಡೆದುಕೊಂಡರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ , ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್ ಉತ್ತಮ ಪ್ರದರ್ಶನವನ್ನು ತೋರ್ಪಡಿಸಿದರು.
ಇದನ್ನು ಓದಿ : Marigold : ದೂದಪೇಡಾ ದಿಗಂತ ಅಭಿನಯದ ಮಾರಿಗೋಲ್ಡ್ ಚಿತ್ರದ ಟ್ರೈಲರ್ ರಿಲೀಸ್
ಸದ್ಯಕ್ಕೆ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಟೂರ್ನಿಯ ಅಧಿಕ ಮೊತ್ತದ ಟಾರ್ಗೆಟನ್ನು ನೀಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಹುದೊಡ್ಡ ಸವಾಲನ್ನು ಎದುರಿಸುವಂತೆ ಮಾಡಿದೆ
ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು.ರೋಹಿತ್ ಶರ್ಮ 26(12), ಇಶಾನ್ ಕಿಶನ್ 34(13), ನಮನ್ ಧೀರ್30(14), ತಿಲಕ್ ವರ್ಮ 64(34), ಹಾರ್ದಿಕ್ ಪಾಂಡ್ಯ 24(20), ಟಿಮ್ ಡೇವಿಡ್ 42(22), ರೋಮಾರಿಯೋ ಶೆಫರ್ಡ್ 15(6) ರನ್ ಗಳಿಸಿದರು. ಬೌಲಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಜಯದೇವ್ ಉನದ್ಕತ್ 2, ಶಹಬಾಜ್ ಅಹಮದ್ 1, ಪ್ಯಾಟ್ ಕಮ್ಮಿನ್ಸ್ 2 ವಿಕೆಟ್ ಪಡೆದರು.
WHAT. A. MATCH! 🔥
Raining sixes and 500 runs scored for the first time ever in #TATAIPL 💥
Hyderabad is treated with an epic encounter 🧡💙👏
Scorecard ▶️ https://t.co/oi6mgyCP5s#SRHvMI pic.twitter.com/hwvWIDGsLh
— IndianPremierLeague (@IPL) March 27, 2024
ದಾಖಲೆಗೂ ಮೀರಿದ ಟಾರ್ಗೆಟ್ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಶಕ್ತಿಗೂ ಮೀರಿದ ಆಟವನ್ನು ಆಡಿತು.ತಿಲಕ್ ವರ್ಮಾ, ನಮನ್ ಧೀರ್, ಇಶನ್ ಕಿಶನ್, ಟಿಮ್ ಡೇವಿಡ್ ನಾಲ್ವರ ಆರಂಭಿಕ ಆಟ ಇನ್ನೊಂದು ದಾಖಲೆಯನ್ನು ಸೃಷ್ಟಿಸುತ್ತದೆ ಎನ್ನುವಂತೆ ಮಾಡಿತ್ತು
ಇದನ್ನು ಓದಿ : 13 ವರ್ಷ… 200 ಪಂದ್ಯ: ಮುಂಬೈ ಪರ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ!
ಆದರೆ ಕೊನೆಯಲ್ಲಿ ಆಟದ ಪರಿಯೇ ಬದಲಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದ ದಾಖಲೆ ತಂಡವನ್ನೇ ಗೆಲುವನ್ನ ಪಡೆಯುವಂತೆ ಮಾಡಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .