ಚೆನ್ನೈ: ಐಪಿಎಲ್ ಹರಾಜು 2021 (IPL Auction 2021) ರಲ್ಲಿ ಕೊನೆಯ ಕ್ಷಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಸೇರ್ಪಡೆಗೊಳ್ಳುವ ಮೂಲಕ ಭಾರತದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರ ಐಪಿಎಲ್ ವೃತ್ತಿಜೀವನವು ಸ್ವಲ್ಪಮಟ್ಟಿಗೆ ಬದುಕುಳಿದಿದೆ ಎನ್ನಬಹುದಾಗಿದೆ.
ಭಜ್ಜಿ ಮೇಲೆ ಕೋಲ್ಕತಾ ಬಾಜಿ:
ಐಪಿಎಲ್ ಹರಾಜು 2021 (IPL Auction 2021) ರ ಕೊನೆಯ ತಿರುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಮ್ಮ ಮೂಲ ಬೆಲೆ 2 ಕೋಟಿ ಬೆಲೆಗೆ ಹರ್ಭಜನ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಹಿಂದೆ ಭಜ್ಜಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ.
ಭಜ್ಜಿ 9 ವರ್ಷಗಳಿಂದ ಮುಂಬೈ ಪರ ಆಡಿದ್ದಾರೆ :
ಹರ್ಭಜನ್ ಸಿಂಗ್ 9 ವರ್ಷಗಳ ಕಾಲ (2008-2017) ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲಿ ಆಡಿದ್ದಾರೆ. ನಂತರ ಹರ್ಭಜನ್ ಸಿಂಗ್ 2018-2019ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಿದ್ದರು.
ಇದನ್ನೂ ಓದಿ - ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾಗಿದ್ದು ಎಷ್ಟಕ್ಕೆ ಗೊತ್ತೇ?
ಕಳೆದ ಐಪಿಎಲ್ ಋತುವಿನಲ್ಲಿ ಭಜ್ಜಿ ಆಡಲಿಲ್ಲ :
ಕಳೆದ ವರ್ಷ (2020) ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಿಂದ ಹರ್ಭಜನ್ ಸಿಂಗ್ (Harbhajan Singh) ಹಿಂದೆ ಸರಿದರು. ಇದೀಗ ಹರ್ಭಜನ್ ಸಿಂಗ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗುವುದರೊಂದಿಗೆ, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಯಂತಹ ಸ್ಪಿನ್ನರ್‌ಗಳು ತಮ್ಮ ಅನುಭವದಿಂದ ಪ್ರಯೋಜನ ಪಡೆಯುತ್ತಾರೆ ಮತ್ತು ಸಾಕಷ್ಟು ಕಲಿಯಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಕ್ರಿಸ್ ಮೋರಿಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ :
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಆಟಗಾರರ ಹರಾಜನ್ನು ಚೆನ್ನೈನಲ್ಲಿ ಮುಕ್ತಾಯಗೊಳಿಸಲಾಯಿತು. ಇದರಲ್ಲಿ ಕ್ರಿಸ್ ಮೋರಿಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಕ್ರಿಸ್ ಮೋರಿಸ್ 16.25 ಕೋಟಿಗಳಿಗೆ ಮಾರಾಟವಾಗಿದ್ದಾರೆ. ಕ್ರಿಸ್ ಮೋರಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ. ಅದೇ ಸಮಯದಲ್ಲಿ, ಗ್ಲೆನ್ ಮ್ಯಾಕ್ಸ್ವೆಲ್ 14.25 ಕೋಟಿಗಳಿಗೆ ಮಾರಾಟವಾಗಿದ್ದಾರೆ.
ಇದನ್ನೂ ಓದಿ - ಅಂತರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆಯಾಗಿಲ್ಲವಾದರೂ 9.25 ಕೋಟಿ ರೂಗೆ ಹರಾಜಾದ ಕನ್ನಡಿಗ...!
ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ (RCB) ಖರೀದಿಸಿದೆ. ಈ ಹರಾಜಿನಲ್ಲಿ ಅನೇಕ ದೊಡ್ಡ ಹೆಸರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಯಿತು ಮತ್ತು ಅನೇಕರು ಖರೀದಿದಾರರನ್ನು ಸಹ ಪಡೆಯಲಿಲ್ಲ. ಇದು ಮಾತ್ರವಲ್ಲ, ಕೆಲವು ಆಟಗಾರರು ವರ್ಷಗಳ ನಂತರ ಐಪಿಎಲ್‌ಗೆ ಮರಳಿದರು, ಕೆಲವು ದೇಶೀಯ ಆಟಗಾರರು ಸಹ ಫ್ರಾಂಚೈಸಿಗಳ ಮನಸೆಳೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.