IPL : ಪೊರೆಲ್-ಹೋಪ್ ಸಿಕ್ಸ್ ಗಳ ಸಮಾಗಮ, ಲಕ್ನೋ ಗೆ 209ರನ್ ಗಳ ಗೆಲುವಿನ ಗುರಿ ನೀಡಿದ ಡೆಲ್ಲಿ

IPL : ಇಂದಿನ ಐಪಿಎಲ್ 64ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೆಂಟ್ಸ್ ನಡುವೆ ನಡೆಯುತ್ತಿದೆ 

Written by - Zee Kannada News Desk | Last Updated : May 14, 2024, 09:38 PM IST
  • ಟಾಸ್ ಗೆದ್ದ ಲಕ್ನೋ ಸೂಪರ್ ಜೆಂಟ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ.
  • ಲಕ್ನೋ ಸೂಪರ್ ಜೇಂಟ್ಸ್ ತಂಡಕ್ಕೆ 209ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
  • ಸಿಕ್ಸ್ ಗಳ ಸುರಿಮಳೆಯಿಂದ ಲಕ್ನೋ ಗೆ ಭರ್ಜರಿ ಟಾರ್ಗೆಟ್ ಅನ್ನು ನೀಡಿದೆ
IPL :  ಪೊರೆಲ್-ಹೋಪ್  ಸಿಕ್ಸ್ ಗಳ ಸಮಾಗಮ, ಲಕ್ನೋ ಗೆ 209ರನ್ ಗಳ ಗೆಲುವಿನ ಗುರಿ ನೀಡಿದ ಡೆಲ್ಲಿ title=

DC Vs LSG : ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೆಂಟ್ಸ್ ನಡುವಿನ 64ನೇ ಪಂದ್ಯ ಇಂದು ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಲಕ್ನೋ ಸೂಪರ್ ಜೆಂಟ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಗೆ 209ರನ್ ಗಳ ಗೆಲುವಿನ ಗುರಿ ನೀಡಿದೆ. 

ಇದನ್ನು ಓದಿ : ಯಾವತ್ತಾದ್ರೂ  ಕೊರಿಯನ್ ಸಾಸ್ ಟ್ರೈ ಮಾಡಿದೀರಾ? ಇಲ್ಲಿದೆ ಟಾಪ್ 6 ಸಾಸ್ ಗಳು !

ಈ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೆಂಟ್ಸ್ ತಂಡ ಒಟ್ಟು 12 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ ಈ ಮೂಲಕ 7ನೇ ಸ್ಥಾನದಲ್ಲಿದೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಟ್ಟು 13 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆದ್ದು ಏಳು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ ಆರನೇ ಸ್ಥಾನದಲ್ಲಿದೆ. 

ಇಂದು ಈ ಟೂರ್ನಿಯ 64ನೇ ಪಂದ್ಯ ನಡೆಯಲಿದ್ದು, ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದಿನ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೆಂಟ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಟಾಸ್ ಗೆದ್ದ ಲಕ್ನೋ ಸೂಪರ್ ಜೆಂಟ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್  ತಂಡದಿಂದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಹಾಗೂ ಅಭಿಷೇಕ್ ಪೊರೆಲ್  ಕಣಕ್ಕಿಳಿದರು.  ಜೇಕ್ ಫ್ರೇಸರ್-ಮೆಕ್‌ಗುರ್ಕ್ 0(2), ಅಭಿಷೇಕ್ ಪೊರೆಲ್  58(33), ಶಾಯ್ ಹೋಪ್ 38(27),  ರಿಷಭ್ ಪಂತ್ 33(23),  ಟ್ರಿಸ್ಟಾನ್ ಸ್ಟಬ್ಸ್ 57(25)  ರನ್ ಗಳಿಸಿದರು. ಅಭಿಷೇಕ್ ಪೊರೆಲ್,  ಶಾಯ್ ಹೋಪ್, ಟ್ರಿಸ್ಟಾನ್ ಸ್ಟಬ್ಸ್  ಮೂವರ ಆಟವು ಲಕ್ನೋ ತಂಡಕ್ಕೆ 209ರನ್ ಗಳ ಗೆಲುವಿನ ಗುರಿ ನೀಡುವಲ್ಲಿ ಸಹಕಾರಿಯಾಯಿತು. ಸಿಕ್ಸ್ ಗಳ ಸುರಿಮಳೆಯಿಂದ ಲಕ್ನೋಗೆ ಭರ್ಜರಿ ಟಾರ್ಗೆಟ್ ಅನ್ನು ನೀಡಿದೆ. 

ಇದನ್ನು ಓದಿ : Pavan Kalyan : ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಲಕ್ನೋ ಸೂಪರ್ ಜೇಂಟ್ಸ್ ತಂಡದ  ಅರ್ಷದ್ ಖಾನ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಹಾಗೂ ನವೀನ್ ಉಲ್ ಹಖ್ 2 ವಿಕೆಟ್ ಪಡೆದುಕೊಂಡರು. 

ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 20 ಓವರ್ ಗಳಲ್ಲಿ 4ವಿಕೆಟ್ ಕಳೆದುಕೊಂಡು  208ರನ್ ಗಳಿಸಿ, ಲಕ್ನೋ ಸೂಪರ್ ಜೇಂಟ್ಸ್ ತಂಡಕ್ಕೆ  209ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News