RCB ವಿರುದ್ಧದ ಪಂದ್ಯದಲ್ಲಿ ರೋಹಿತ್’ಗೆ ಮಹಾಮೋಸ! ಈ ನಿಯಮ ಅನುಸರಿಸದೆ ಔಟ್ ಎಂದ ಥರ್ಟ್ ಅಂಪೈರ್!

Rohit Sharma Out Controversy in RCB Match: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೋಸವಾಗಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Written by - Bhavishya Shetty | Last Updated : May 10, 2023, 01:03 PM IST
    • ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೋಸವಾಗಿದೆ.
    • ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ
    • ರೋಹಿತ್ ಶರ್ಮಾ ಕ್ರೀಸ್ ಗಿಂತ ಕೊಂಚ ಮುಂದಿದ್ದರು ಸಹ ಔಟ್ ಎಂದು ಥರ್ಟ್ ಅಂಪೈರ್
RCB ವಿರುದ್ಧದ ಪಂದ್ಯದಲ್ಲಿ ರೋಹಿತ್’ಗೆ ಮಹಾಮೋಸ! ಈ ನಿಯಮ ಅನುಸರಿಸದೆ ಔಟ್ ಎಂದ ಥರ್ಟ್ ಅಂಪೈರ್!  title=
Rohit Sharma

IPL 2023 News: ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ ಗಳಿಂದ ಸೋಲಿಸಿತು. ಆದರೆ ಈ ಪಂದ್ಯದ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ವಿವಾದಾತ್ಮಕ ರೀತಿಯಲ್ಲಿ ಎಲ್‌ಬಿಡಬ್ಲ್ಯು ಕೊಟ್ಟು ಔಟ್ ಮಾಡಲಾಗಿದ್ದು, ಈ ನಿರ್ಧಾರವು ಭಾರಿ ಚರ್ಚೆಯಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೋಸವಾಗಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: IPL 2023: ಪ್ಲೇ-ಆಫ್ ಮೇಲೆ ಧೋನಿ ಕಣ್ಣು: ಚೆನ್ನೈ vs ಡೆಲ್ಲಿ ಮಹಾಕದನದಲ್ಲಿ ಗೆಲುವು ಇದೇ ತಂಡಕ್ಕೆ… ಕನ್ಫರ್ಮ್!

ಏನಿದು ವಿವಾದ?

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ ನ ಐದನೇ ಓವರ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ವನಿಂದು ಹಸರಂಗ ಬೌಲಿಂಗ್‌ ಗೆ ಬಂದರು. ಐದನೇ ಓವರ್‌ ನ ಕೊನೆಯ ಎಸೆತದಲ್ಲಿ, ವನಿಂದು ಹಸರಂಗ ಅವರು ರೋಹಿತ್ ಶರ್ಮಾ ಅವರನ್ನು ಬೌಲ್ಡ್ ಮಾಡಿದರು. ಚೆಂಡು ನೇರವಾಗಿ ರೋಹಿತ್ ಅವರ ಪ್ಯಾಡ್‌ ಗೆ ತಗುಲಿತ್ತು. ಆದರೆ ವನಿಂದು ಹಸರಂಗ ಅವರ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಈ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ರಿವ್ಯೂ ಪಡೆದರು. ರೋಹಿತ್ ಕ್ರೀಸ್‌ ನಿಂದ 3 ಮೀಟರ್‌ ಗಳಷ್ಟು ಹೊರಗೆ ಹೆಜ್ಜೆ ಹಾಕಿದ್ದರಿಂದ ಚೆಂಡು ಲೆಗ್ ಸ್ಟಂಪ್‌ ನ ಹೊರಗೆ ಹೋಗುತ್ತದೆ ಅಥವಾ ಸ್ಟಂಪ್‌ ನ ಮೇಲೆ ಹೋಗುತ್ತದೆ ಎಂದು ಖಚಿತವಾಗಿತ್ತು. ಮೂರನೇ ಅಂಪೈರ್ ನೋಡಿದಾಗ ಚೆಂಡು ಸ್ಟಂಪ್‌ ನ ಮುಂಭಾಗದಲ್ಲಿತ್ತು, ಬಳಿಕ ಅದು ಸ್ಟಂಪ್‌ ಗೆ ಬಡಿಯುತ್ತಿತ್ತು. ಈ ಮೂಲಕ ಥರ್ಡ್ ಅಂಪೈರ್ ರೋಹಿತ್ ಔಟ್ ಎಂದು ಘೋಷಿಸಿದರು.

 

ಕ್ರಿಕೆಟ್ ನಿಯಮಗಳ ಪ್ರಕಾರ ಯಾವುದೇ ಬ್ಯಾಟ್ಸ್‌ಮನ್‌’ಗೆ ಎಲ್‌ಬಿಡಬ್ಲ್ಯೂ ಔಟ್ ನೀಡಬೇಕೆಂದರೆ ಆತ ಕ್ರೀಸ್‌ನೊಳಗೆ ಇರಬೇಕು. ಆದರೆ ರೋಹಿತ್ ಶರ್ಮಾ ಕ್ರೀಸ್ ಗಿಂತ ಕೊಂಚ ಮುಂದಿದ್ದರು. ಆದ್ದರಿಂದ ಅವರನ್ನು ಔಟ್ ಎಂದು ಘೋಷಿಸಲು ಸಾಧ್ಯವಿಲ್ಲ. ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್ ಕ್ರೀಸ್’ನಿಂದ 3 ಮೀಟರ್‌ ಮುಂದೆ ಆಡುತ್ತಿದ್ದರೆ, ಎಲ್ಬಿಡಬ್ಲ್ಯೂ ಹೊರತುಪಡಿಸಿ ಎಲ್ಲಾ ಕಾರಣಗಳಿಗೆ ಔಟ್ ನೀಡಬಹುದು. ಈ ವಿಚಾರ ಬಯಲಾಗುತ್ತಿದ್ದಂತೆ, ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಇದನ್ನೂ ಓದಿ: ಪಾಕ್ ಅಲ್ಲ… ವಿಶ್ವಕಪ್’ಗೆ ಅರ್ಹತೆ ಪಡೆದ Team Indiaದ ಅತಿ ದೊಡ್ಡ ಶತ್ರು ತಂಡ! ಕ್ರಿಕೆಟ್ ಜಗತ್ತಿನಲ್ಲಿ ಹಠಾತ್ ಭೀತಿ

ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ರೋಹಿತ್ ಶರ್ಮಾ ಅವರ ವಿವಾದಾತ್ಮಕ ಔಟ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮೊಹಮ್ಮದ್ ಕೈಫ್ ಟ್ವೀಟ್ ಮಾಡಿ, “ಹಲೋ ಡಿಆರ್‌ಎಸ್, ಇದು ಅತಿಯಾಯಿತು ಅಲ್ಲವೇ? ಇದು ಹೇಗೆ LBW ಆಗುತ್ತದೆ? ಇದರಲ್ಲಿ ರೋಹಿತ್ ಶರ್ಮಾ ಸ್ಟಂಪ್‌ನಿಂದ 3.7 ಮೀಟರ್ ದೂರದಲ್ಲಿದ್ದಾರೆ. ಅಲ್ಲಿ ಚೆಂಡು ಅವರ ಪ್ಯಾಡ್‌ಗೆ ಬಡಿದಿದೆ. ಈಗ ಡಿಆರ್ ಎಸ್ ಕೂಡ ನಿಲ್ಲಿಸಬೇಕು ಎನಿಸುತ್ತಿದೆ. ಅನ್ ಲಕ್ಕಿ ರೋಹಿತ್ ಶರ್ಮಾ!” ಎಂದು ಹೇಳಿಕೊಂಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News