Tata IPL 2023: ಜಿಯೋ ಸಿನಿಮಾದಿಂದ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ !

Tata IPL 2023: ನಗರದ ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ನಲ್ಲಿ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಪಂದ್ಯಗಳ ನೇರಪ್ರಸಾರ ವೀಕ್ಷಣೆಯನ್ನು ಅಭಿಮಾನಿಗಳಿಗೆ ಆಹ್ವಾನ ನೀಡಿದೆ. 

Written by - Zee Kannada News Desk | Last Updated : May 18, 2023, 06:30 PM IST
  • ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ ಜಿಯೋ ಸಿನಿಮಾದಿಂದ ಅಭಿಮಾನಿಗಳಿಗೆ ಆಹ್ವಾನ
  • ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‌ಗೆ ಉಚಿತ ಪ್ರವೇಶ
  • ಎಲ್ಲಾ ವಯಸ್ಸಿನ ಜನರಿಗೆ ಅತ್ಯಾಕರ್ಷಕ ಕೊಡುಗೆಯಾಗಿ ಫ್ಯಾನ್ ಪಾರ್ಕ್ ಆಹ್ವಾನ
Tata IPL 2023: ಜಿಯೋ ಸಿನಿಮಾದಿಂದ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ! title=

ಮಂಗಳೂರು: ನಗರದ ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ನಲ್ಲಿ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಪಂದ್ಯಗಳ ನೇರಪ್ರಸಾರ ವೀಕ್ಷಣೆಯನ್ನು ಅಭಿಮಾನಿಗಳಿಗೆ ಆಹ್ವಾನ ನೀಡಿದೆ. 

ಮಂಗಳೂರಿನಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ಗೆ ಅಭಿಮಾನಿಗಳನ್ನು ಆಹ್ವಾನಿಸುತ್ತಿದೆ. ಮೇ 21ರಂದು ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಪಂದ್ಯಗಳ ನೇರಪ್ರಸಾರ ವೀಕ್ಷಣೆಯನ್ನು ಪಡೆಯಬಹುದು.

ಇದನ್ನೂ ಓದಿ: ಅಂದು ಪಾನಿಪೂರಿ ಮಾರುತ್ತಿದ್ದ; ಇಂದು ಕ್ರಿಕೆಟ್ ದಿಗ್ಗಜರೇ ಕೊಂಡಾಡುತ್ತಿರುವ ಬ್ಯಾಟ್ಸ್’ಮನ್! ಈಗ ಗಿಲ್ ಆಟಕ್ಕೆ ಕುತ್ತು ತಂದನಲ್ಲಾ?

ಮೇ 21ರಂದು 3.30ರಿಂದ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಮತ್ತು ರಾತ್ರಿ 7.30ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿರುವ ಟಾಟಾ ಐಪಿಎಲ್ ಪಂದ್ಯಗಳನ್ನು ಮಂಗಳೂರಿನ ಫ್ಯಾನ್ ಪಾರ್ಕ್ನಲ್ಲಿ ಜಿಯೋಸಿನಿಮಾ ನೇರಪ್ರಸಾರ ಮಾಡಲಿದೆ. ಭಾನುವಾರ ಮಧ್ಯಾಹ್ನ 1.30ರಿಂದ ಫ್ಯಾನ್ ಪಾರ್ಕ್ನ ಗೇಟ್ಗಳು ತೆರೆಯಲಿವೆ. 

ಟಾಟಾ ಐಪಿಎಲ್ ಫ್ಯಾನ್ ಪಾರ್ಕ್‌ಗೆ ಪ್ರವೇಶ ಉಚಿತವಾಗಿದ್ದು, ಅಭಿಮಾನಿಗಳು ದೊಡ್ಡ ಎಲ್ಇಡಿ ಪರದೆಗಳಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್ ಮೂಲಕ ಲೈವ್-ಸ್ಟ್ರೀಮ್ ಮಾಡುವ ಆಟವನ್ನು ಅನುಭವಿಸಬಹುದಾಗಿದೆ. 

ಇದನ್ನೂ ಓದಿ: Ind Vs Pak Test Series: 15 ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಟೆಸ್ಟ್ ಸರಣಿ?

ಅದರ ನಡುವೆ, ಜಿಯೋಸಿನಿಮಾ ಜೀತೋ ಧನ್ ಧನಾ ಧನ್ ಎಂಬ ಹೊಸ ಸ್ಪರ್ಧೆಯನ್ನು ಪರಿಚಯಿಸಿತು. ಇದು ಅಭಿಮಾನಿಗಳಿಗೆ ಪ್ರತಿ ಪಂದ್ಯದಲ್ಲೂ ಒಂದು ಕಾರನ್ನು ಗೆಲ್ಲುವ ಅವಕಾಶವನ್ನು ನೀಡುತ್ತ ಬಂದಿದೆ. 

ಜಿಯೋಸಿನಿಮಾದಲ್ಲಿನ ಟಾಟಾ ಐಪಿಎಲ್‌ನ ನೇರಪ್ರಸಾರವು ಈಗಾಗಲೇ ಹಲವಾರು ದಾಖಲೆಗಳ ಮುರಿತಕ್ಕೆ ಸಾಕ್ಷಿಯಾಗಿದೆ. ಏಪ್ರಿಲ್ 17ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ದಾಖಲೆಯ 2.4 ಕೋಟಿ ವೀಕ್ಷಣೆ ಕಂಡಿದೆ. ಇದು ಈ ಋತುವಿನ ಟಾಟಾ ಐಪಿಎಲ್ನಲ್ಲಿ ಗರಿಷ್ಠ ವೀಕ್ಷಣೆ ಕಂಡ ಪಂದ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News