Team India: ಅಂದು ಯಶಸ್ಸು-ಇಂದು ಸೋಲು! ಟೀಂ ಇಂಡಿಯಾದ ಈ 3 ಸ್ಟಾರ್ ಕ್ರಿಕೆಟಿಗರ ವೃತ್ತಿಜೀವನ ಅಂತ್ಯ!

IPL 2023 News: IPL 2023ರ ಋತುವಿನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಇವರನ್ನು ಮುಂದಿನ ಸೀಸನ್ ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಇದುವರೆಗೆ ಈ ಸೀಸನ್ ನಲ್ಲಿ 47 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 3 ಭಾರತೀಯ ಆಟಗಾರರ ಪ್ರದರ್ಶನವು ತುಂಬಾ ಕೆಟ್ಟದಾಗಿತ್ತು. ಆ ಮೂರು ಆಟಗಾರರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.

Written by - Bhavishya Shetty | Last Updated : May 5, 2023, 08:44 AM IST
    • ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವೂ ಕೊನೆಗೊಳ್ಳುವ ಹಂತ ತಲುಪಿದೆ.
    • ಮಯಾಂಕ್ ಅಗರ್ವಾಲ್ ಅವರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಿಂದ ಕೈಬಿಡಲಾಗಿದೆ
    • ಮಂದೀಪ್ ಸಿಂಗ್ ಐಪಿಎಲ್ 2023 ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್
Team India: ಅಂದು ಯಶಸ್ಸು-ಇಂದು ಸೋಲು! ಟೀಂ ಇಂಡಿಯಾದ ಈ 3 ಸ್ಟಾರ್ ಕ್ರಿಕೆಟಿಗರ ವೃತ್ತಿಜೀವನ ಅಂತ್ಯ!  title=
IPL 2023

IPL 2023 News: ಟೀಂ ಇಂಡಿಯಾದ 3 ಆಟಗಾರರ ಐಪಿಎಲ್ ವೃತ್ತಿಜೀವನ ಈಗ ಬಹುತೇಕ ಮುಗಿದಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿನ ಕಳಪೆ ಪ್ರದರ್ಶನದಿಂದಾಗಿ ಈ 3 ಕ್ರಿಕೆಟಿಗರು ಏಕಾಏಕಿ ಜಗತ್ತಿಗೆ ವಿಲನ್ ಆಗಿದ್ದಾರೆ. ಐಪಿಎಲ್ 2023ರ ಋತುವಿನಲ್ಲಿ ಈ 3 ಆಟಗಾರರು ಅವಕಾಶಗಳನ್ನು ವ್ಯರ್ಥ ಮಾಡುವ ಮೂಲಕ ತಮ್ಮ ಅಂತ್ಯಕ್ಕೆ ತಾವೇ ನಾಂದಿ ಹಾಡಿದಂತಾಗಿದೆ.

IPL 2023ರ ಋತುವಿನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಇವರನ್ನು ಮುಂದಿನ ಸೀಸನ್ ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಇದುವರೆಗೆ ಈ ಸೀಸನ್ ನಲ್ಲಿ 47 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 3 ಭಾರತೀಯ ಆಟಗಾರರ ಪ್ರದರ್ಶನವು ತುಂಬಾ ಕೆಟ್ಟದಾಗಿತ್ತು. ಆ ಮೂರು ಆಟಗಾರರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.

ಇದನ್ನೂ ಓದಿ: 12 ವರ್ಷಗಳ ಬಳಿಕ ಚಂದ್ರಗ್ರಹಣದಂಡು ಅದ್ಭುತ ಸಂಯೋಗ, ಈ ರಾಶಿಯವರಿಗೆ ಸಿರಿವಂತರಾಗುವ ಯೋಗ

ಮನೀಶ್ ಪಾಂಡೆ: ಅಂತರಾಷ್ಟ್ರೀಯ ಕ್ರಿಕೆಟ್‌ ನಂತೆ ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವೂ ಕೊನೆಗೊಳ್ಳುವ ಹಂತ ತಲುಪಿದೆ. ಐಪಿಎಲ್ 2023ರಲ್ಲಿ ಇಲ್ಲಿಯವರೆಗೆ, ಮನೀಶ್ ಪಾಂಡೆ ಅವರು ಆಡಿರುವ 7 ಪಂದ್ಯಗಳಲ್ಲಿ 19 ರ ಅತ್ಯಂತ ಕಳಪೆ ಸರಾಸರಿಯಲ್ಲಿ ಕೇವಲ 133 ರನ್ ಗಳಿಸಲು ಸಮರ್ಥರಾಗಿದ್ದಾರೆ. ಈ ಸೀಸನ್ ನಲ್ಲಿ ಅವರ ಪ್ರದರ್ಶನ ಸಾಕಷ್ಟು ನಿರಾಶಾದಾಯಕವಾಗಿದೆ. ಮನೀಶ್ ಪಾಂಡೆ ತಂಡದಲ್ಲಿದ್ದರೂ ಇಲ್ಲದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಮನೀಶ್ ಪಾಂಡೆ ತಮಗೆ ಸಿಗುತ್ತಿರುವ ಸುವರ್ಣಾವಕಾಶಗಳನ್ನು ಕೆಟ್ಟದಾಗಿ ಹಾಳು ಮಾಡಿಕೊಂಡಿದ್ದಾರೆ. ಬಹುಶಃ ಈ ವರ್ಷ ತಮ್ಮ ಕೊನೆಯ ಐಪಿಎಲ್ ಋತುವನ್ನು ಆಡುತ್ತಿದ್ದಾರೆ ಏನೋ ಎಂಬಂತೆ ಕಾಣುತ್ತಿದೆ. ಮುಂದಿನ ವರ್ಷ ಐಪಿಎಲ್ 2024 ರ ಹರಾಜಿಗೆ ಮನೀಶ್ ಪಾಂಡೆಯನ್ನು ಖರೀದಿಸಲು ಯಾವುದೇ ತಂಡವು ಬಯಸುವುದಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ ಮನೀಶ್ ಪಾಂಡೆ ಮೇಲೆ ಹೆಚ್ಚಿನ ನಂಬಿಕೆಯನ್ನು ತೋರಿಸಿದ್ದು, ಅದನ್ನು ಅವರು ಹುಸಿ ಮಾಡಿದ್ದಾರೆ.

ಮಯಾಂಕ್ ಅಗರ್ವಾಲ್: ಮಯಾಂಕ್ ಅಗರ್ವಾಲ್ ಅವರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಿಂದ ಕೈಬಿಡಲಾಗಿದೆ. ಆದರೆ ಈಗ IPL 2023 ರಲ್ಲಿ ಅತ್ಯಂತ ಕಳಪೆ ಪ್ರದರ್ಶನದ ನಂತರ, ಅವರ ಕ್ರಿಕೆಟ್ ವೃತ್ತಿಜೀವನವು ಶೀಘ್ರದಲ್ಲೇ ಕೊನೆಗೊಳ್ಳಬಹುದು. ಐಪಿಎಲ್ 2023 ರಲ್ಲಿ, ಮಯಾಂಕ್ ಅಗರ್ವಾಲ್ ತಮ್ಮ 9 ಪಂದ್ಯಗಳಲ್ಲಿ 20.78 ರ ಅತ್ಯಂತ ಕಳಪೆ ಸರಾಸರಿಯಲ್ಲಿ 187 ರನ್ ಗಳಿಸಿದ್ದಾರೆ. ಐಪಿಎಲ್ 2023 ರ ಋತುವಿನಲ್ಲಿ ಮಯಾಂಕ್ ಅಗರ್ವಾಲ್ ಇದುವರೆಗೆ ಕೇವಲ 27, 8, 21, 9, 48, 2, 49, 5 ಮತ್ತು 18 ರನ್ ಗಳಿಸಲು ಸಮರ್ಥರಾಗಿದ್ದಾರೆ. ಮಯಾಂಕ್ ಅಗರ್ವಾಲ್ ಐಪಿಎಲ್ 2023 ಸೀಸನ್‌ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಆದರೆ ಇಡೀ ಪಂದ್ಯದಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ. ಈ ಕಳಪೆ ಪ್ರದರ್ಶನದ ಆಧಾರದ ಮೇಲೆ ಯಾವುದೇ ಐಪಿಎಲ್ ತಂಡವು ಮುಂದಿನ ವರ್ಷ ಅವರನ್ನು ಖರೀದಿಸಲು ಮುಂದೆ ಬರುವುದು ಡೌಟ್. ಐಪಿಎಲ್ 2023 ರ ಸೀಸನ್‌ ನಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಸನ್‌ ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. ಆದರೆ ಮಯಾಂಕ್ ಕಳಪೆ ಪ್ರದರ್ಶನ ಇಡೀ ತಂಡಕ್ಕೆ ಮುಳುವಾದಂತೆ ಪರಿಣಮಿಸಿದೆ,

ಇದನ್ನೂ ಓದಿ: IPL 2023: ಮತ್ತೆ ಕಿಚ್ಚು ಹಚ್ಚಿದ ಗಂಭೀರ್! ಕೊಹ್ಲಿ ವಿರುದ್ಧ ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ ಗೌತಮ್

ಮಂದೀಪ್ ಸಿಂಗ್: ಮಂದೀಪ್ ಸಿಂಗ್ ಐಪಿಎಲ್ 2023 ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್. ಆಡಿರುವ 3 ಪಂದ್ಯಗಳಲ್ಲಿ 4.67 ರ ಅತ್ಯಂತ ಕಳಪೆ ಸರಾಸರಿಯಲ್ಲಿ 14 ರನ್ ಗಳಿಸಿದ್ದಾರೆ. ಐಪಿಎಲ್ 2023 ರಲ್ಲಿ ಯಾವುದೇ ಬ್ಯಾಟ್ಸ್‌ಮನ್ ಅಷ್ಟು ಕಳಪೆ ಪ್ರದರ್ಶನ ನೀಡಿಲ್ಲ. ಐಪಿಎಲ್ 2023 ರ ಋತುವಿನಲ್ಲಿ ಇದುವರೆಗೆ ಕೇವಲ 2, 0 ಮತ್ತು 12 ರನ್ ಗಳಿಸಲು ಶಕ್ತರಾಗಿದ್ದಾರೆ. 31ರ ಹರೆಯದ ಬ್ಯಾಟ್ಸ್‌ಮನ್ ಮಂದೀಪ್ ಸಿಂಗ್‌ ಗೆ ಐಪಿಎಲ್‌ ನಲ್ಲಿ ಸಾಕಷ್ಟು ಅವಕಾಶಗಳು ಬಂದಿದ್ದವು. ಆದರೆ ಅದನ್ನು ಅವರು ವ್ಯರ್ಥ ಮಾಡಿಕೊಂಡಿದ್ದಾರೆ. ಐಪಿಎಲ್ 2023 ರಲ್ಲಿ ಇವರ ಈ ಫ್ಲಾಪ್ ಶೋ ನೋಡಿದವರು, ಮಂದೀಪ್ ಸಿಂಗ್ ಐಪಿಎಲ್ ವೃತ್ತಿಜೀವನವು ಈ ಋತುವಿನಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj

Trending News