IPL 2023: ಈ ಆಟಗಾರರ ಕಿತ್ತಾಟದ ಮುಂದೆ ಕೊಹ್ಲಿ-ಗಂಭೀರ್ ಯಾವ್ ಲೆಕ್ಕಾ! ಅವರ ಕಾದಾಟಕ್ಕೆ ಒಬ್ಬನ ಕೊಲೆಯೇ ಆಗ್ತಿತ್ತು!

Virat Kohli and Gautam Gambhir Fight: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಕಿತ್ತಾಟವನ್ನು ಕಂಡು ಅನೇಕರು ಶಾಕ್ ಆಗಿದ್ರೆ, ಇನ್ನೂ ಕೆಲವರು ತಮ್ಮ ನೆಚ್ಚಿನ ಆಟಗಾರರ ಪರವಾಗಿ ಮಾತನಾಡಲು ಆರಂಭಿಸಿದ್ದರು. ಇವೆಲ್ಲದರ ನಡುವೆ ಇವರಿಬ್ಬ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.

Written by - Bhavishya Shetty | Last Updated : May 4, 2023, 01:32 PM IST
    • ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ತೀವ್ರ ಮಾತಿನ ಚಕಮಕಿ ಕಂಡುಬಂದಿತ್ತು.
    • ಕೊಹ್ಲಿ ಮತ್ತು ಗಂಭೀರ್ ನಡುವಿನ ಕಾದಾಟಕ್ಕಿಂತ ಹೆಚ್ಚು ಅಪಾಯಕಾರಿಯಾದ ಕಿತ್ತಾಟವೊಂದಿದೆ.
    • ಆ ಜಗಳದಲ್ಲಿ ಆಟಗಾರನೊಬ್ಬ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿತ್ತು.
IPL 2023: ಈ ಆಟಗಾರರ ಕಿತ್ತಾಟದ ಮುಂದೆ ಕೊಹ್ಲಿ-ಗಂಭೀರ್ ಯಾವ್ ಲೆಕ್ಕಾ! ಅವರ ಕಾದಾಟಕ್ಕೆ ಒಬ್ಬನ ಕೊಲೆಯೇ ಆಗ್ತಿತ್ತು!  title=
Virat Kohli

Virat Kohli and Gautam Gambhir Fight: ಐಪಿಎಲ್ 2023 ರಲ್ಲಿ ಸೋಮವಾರ ನಡೆದ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಮುಖಾಮುಖಿಯಾಗಿ ಕಿತ್ತಾಡಿಕೊಂಡಿದ್ದರು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 18 ರನ್‌ ಗಳಿಂದ ಸೋಲಿಸಿತು. ಆಟ ಮುಗಿದ ನಂತರ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ತೀವ್ರ ಮಾತಿನ ಚಕಮಕಿ ಕಂಡುಬಂದಿತ್ತು.

ಇದನ್ನೂ ಓದಿ: Guru Gochar 2023: ಅಶ್ವಿನಿ ನಕ್ಷತ್ರದಲ್ಲಿ ಗುರು ಪ್ರವೇಶ, ಯಾವ ರಾಶಿಗಳ ಜನರ ಮೇಲೆ ಇದರ ಪ್ರಭಾವ ಹೇಗಿರಲಿದೆ?

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಕಿತ್ತಾಟವನ್ನು ಕಂಡು ಅನೇಕರು ಶಾಕ್ ಆಗಿದ್ರೆ, ಇನ್ನೂ ಕೆಲವರು ತಮ್ಮ ನೆಚ್ಚಿನ ಆಟಗಾರರ ಪರವಾಗಿ ಮಾತನಾಡಲು ಆರಂಭಿಸಿದ್ದರು. ಇವೆಲ್ಲದರ ನಡುವೆ ಇವರಿಬ್ಬ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.

ಪಂದ್ಯ ಮುಗಿದ ಬಳಿಕ ಉಭಯ ತಂಡಗಳು ಪೆವಿಲಿಯನ್ ಕಡೆಗೆ ಮರಳುತ್ತಿದ್ದವು. ಆಗ ಕೈಲ್ ಮೇಯರ್ಸ್ ಜೊತೆ ವಿರಾಟ್ ಸಂಭಾಷಣೆ ನಡೆಸುತ್ತಿದ್ದು, ಆ ಸಮಯದಲ್ಲಿ ಏನೋ ಹೇಳುತ್ತಿರುವುದು ಕಂಡುಬಂದಿದೆ. ಇಲ್ಲಿಂದ ಪ್ರಾರಂಭವಾಗ ಮಾತು, ಲಯ ತಪ್ಪುವವರೆಗೆ ಹೋಗಿತ್ತು. ಬಳಿಕ ಲಕ್ನೋ ತಂಡದ ಅಮಿತ್ ಮಿಶ್ರಾ, ಕೆ ಎಲ್ ರಾಹುಲ್ ಮತ್ತು ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅಡ್ಡ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಇನ್ನು ಐಪಿಎಲ್ ಇತಿಹಾಸವನ್ನು ಗಮನಿಸಿದರೆ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಕಾದಾಟಕ್ಕಿಂತ ಹೆಚ್ಚು ಅಪಾಯಕಾರಿಯಾದ ಕಿತ್ತಾಟವೊಂದಿದೆ. ಆ ಜಗಳದಲ್ಲಿ ಆಟಗಾರನೊಬ್ಬ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿತ್ತು. ಐಪಿಎಲ್ 2014 ರಲ್ಲಿ, ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ನಡುವೆ ದೊಡ್ಡ ಕಾದಾಟ ಕಂಡುಬಂದಿದೆ. ಐಪಿಎಲ್ 2014 ರಲ್ಲಿ, RCB ಪರ ಆಡುತ್ತಿದ್ದ ಮಿಚೆಲ್ ಸ್ಟಾರ್ಕ್, ಕೀರಾನ್ ಪೊಲಾರ್ಡ್ ಮೇಲೆ ಬೌನ್ಸರ್ ಎಸೆದರು. ಅಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ ವಿರುದ್ಧ ಕೆಲವು ನಿಂದನೀಯ ಮಾತುಗಳನ್ನು ಹೇಳಿದರು. ಇದರಿಂದ ಕೋಪಗೊಂಡ ಪೊಲಾರ್ಡ್ ತಮ್ಮ ಬ್ಯಾಟ್ ಅನ್ನು ಮಿಚೆಲ್ ಸ್ಟಾರ್ಕ್ ಕಡೆಗೆ ಎಸೆದರು. ಪೊಲಾರ್ಡ್ ಮತ್ತು ಸ್ಟಾರ್ಕ್ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಇಡೀ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಬಿಸಿಯೇರಿತ್ತು.

ಇದನ್ನೂ ಓದಿ: ತಮ್ಮ ಕಚೇರಿಯಲ್ಲಿರುವ ಪ್ರಧಾನಿ ಮೋದಿ ,ಶಾ ಫೋಟೋ ತೆಗೆಯಲ್ಲ ಎಂದ ಜಗದೀಶ್ ಶೆಟ್ಟರ್

ನಂತರ ಸ್ಟಾರ್ಕ್ ಮುಂದಿನ ಚೆಂಡನ್ನು ಬೌಲ್ ಮಾಡಿದಾಗ, ಪೊಲಾರ್ಡ್ ಅದನ್ನು ಆಡಲು ಸಿದ್ಧರಿರಲಿಲ್ಲ. ಇದರಿಂದ ಕೋಪಗೊಂಡ ಸ್ಟಾರ್ಕ್ ಪೊಲಾರ್ಡ್ ಕಡೆ ಗುರಿಯಾಗಿಸಿ ಆ ಚೆಂಡನ್ನು ಎಸೆದರು. ಇದನ್ನು ಕಂಡ ಪೊಲಾರ್ಡ್ ಪ್ರತಿಯಾಗಿ ಸ್ಟಾರ್ಕ್ ಕಡೆಗೆ ತನ್ನ ಕೈಯಲ್ಲಿದ್ದ ಬ್ಯಾಟ್ ಎಸೆದರು. ಅದೃಷ್ಟವಶಾತ್ ಬ್ಯಾಟ್ ಸ್ಟಾರ್ಕ್‌ ಗೆ ತಗುಲಿರಲಿಲ್ಲ.  ಒಂದು ವೇಳೆ ಸ್ಟಾರ್ಕ್‌ಗೆ ಬ್ಯಾಟ್ ತಗುಲಿದ್ದರೆ ಈ ಆಟಗಾರನ ಪ್ರಾಣಕ್ಕೇ ಅಪಾಯವಾಗುತ್ತಿತ್ತು. ಇಬ್ಬರ ನಡುವೆ ಸಾಕಷ್ಟು ಘರ್ಷಣೆ ನಡೆದಿತ್ತು ಮತ್ತು ಈ ಘಟನೆಯ ನಂತರ, ಕ್ರಿಸ್ ಗೇಲ್ ಮತ್ತು ಅಂಪೈರ್ ವಿಷಯವನ್ನು ಸಮಾಧಾನಪಡಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News