ಇಸ್ರೋ ಬರಿ ಚಂದ್ರನ ಮೇಲೆ ಅಷ್ಟೇ ಅಲ್ಲ ದೂರದ ಗೆಲಾಕ್ಸಿಗೂ ತಲುಪಲಿದೆ- ಸಚಿನ್ ತೆಂಡೂಲ್ಕರ್

ಈಗ ಭಾರತದ ಬಹುನಿರೀಕ್ಷಿತ ಚಂದ್ರಯಾನ 2 ಯೋಜನೆ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 'ಇಸ್ರೋ ಕೇವಲ ಚಂದ್ರನ ಮೇಲೆ ಅಷ್ಟೇ ಅಲ್ಲ ದೂರದ ಗೆಲಾಕ್ಸಿಗಳವರೆಗೆ ತಲುಪಲಿದೆ' ಎಂದು ಹೇಳಿದ್ದಾರೆ.  

Last Updated : Sep 8, 2019, 05:00 PM IST
ಇಸ್ರೋ ಬರಿ ಚಂದ್ರನ ಮೇಲೆ ಅಷ್ಟೇ ಅಲ್ಲ ದೂರದ ಗೆಲಾಕ್ಸಿಗೂ ತಲುಪಲಿದೆ- ಸಚಿನ್ ತೆಂಡೂಲ್ಕರ್ title=

ನವದೆಹಲಿ: ಈಗ ಭಾರತದ ಬಹುನಿರೀಕ್ಷಿತ ಚಂದ್ರಯಾನ 2 ಯೋಜನೆ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 'ಇಸ್ರೋ ಕೇವಲ ಚಂದ್ರನ ಮೇಲೆ ಅಷ್ಟೇ ಅಲ್ಲ ದೂರದ ಗೆಲಾಕ್ಸಿಗಳವರೆಗೆ ತಲುಪಲಿದೆ' ಎಂದು ಹೇಳಿದ್ದಾರೆ.  

ಶನಿವಾರದಂದು ಚಂದ್ರನ ಮೇಲ್ಮೈ ಗಿಂತ 2.1 ಕಿಮೀ ದೂರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಈಗ ಪತ್ತೆಯಾಗಿದೆ ಎಂದು ಇಸ್ರೋ ಖಚಿತ ಪಡಿಸಿದೆ. ಆದರೆ ಇದುವರೆಗೆ ಸಂಪರ್ಕ ಕಲ್ಪಿಸುವಲ್ಲಿ ಸಾಧ್ಯವಾಗಿಲ್ಲ. ಅದನ್ನು ಸಂಪರ್ಕಿಸುವ ಪ್ರಯತ್ನ ಮುಂದುವರೆಯಲಿದೆ ಎಂದು ಇಸ್ರೋ ಅಧ್ಯಕ್ಷ  ಕೆ.ಶಿವನ್ ಹೇಳಿದ್ದರು. 

ಈಗ ಇಂತಹ ಮಹತ್ವಾಕಾಂಕ್ಷೆಯ ಯೋಜನೆ ಬಗ್ಗೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ ' ರಾಕೇಶ್ ಶರ್ಮಾ ಭಾರತ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂದಾಗ ಅವರು 'ಸಾರೆ ಜಹಾಂಸೇ ಅಚ್ಚಾ ಹಿಂದುಸ್ತಾನ ಹಮಾರಾ' ಎಂದು ಹೇಳಿದ್ದರು. ಇಸ್ರೋ ಕೇವಲ ಚಂದ್ರನ ಮೇಲೆ ತಲುಪುವುದಲ್ಲದೆ ದೂರದ ಗ್ಯಾಲಕ್ಸಿಗಳನ್ನು ಅದು ತಲುಪಲಿದೆ, ನಾವು ಈಗ ಹೆಮ್ಮೆಯಿಂದ ಸಾರೇ ಜಹಾಂಸೇ ಅಚ್ಚಾ ಹಿಂದುಸ್ತಾನ ಎಂದು ಹೇಳಬೇಕಾಗಿದೆ. ಇಸ್ರೋ ನಿಮ್ಮ ಪ್ರಯತ್ನಕ್ಕೆ ಸೆಲ್ಯೂಟ್ ' ಎಂದು ಟ್ವೀಟ್ ಮಾಡಿದ್ದಾರೆ. 

ಈಗ ವಿಕ್ರಮ ಲ್ಯಾಂಡರ್ ಪತ್ತೆಯಾಗಿರುವುದರಿಂದ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಭಾರತದ ಆಸೆಗೆ ಮತ್ತೆ ಜೀವ ಬಂದಿದೆ ಎಂದು ಹೇಳಬಹುದು.  

Trending News