13 ವರ್ಷಗಳಲ್ಲಿ ಕಬಳಿಸಿದ್ದು ಕೇವಲ 3 ವಿಕೆಟ್: ಈ ಕಳಪೆ ಆಟಗಾರನಿಗೆ ‘ಗೆಟ್ ಔಟ್’ ಎಂದ ರೋಹಿತ್ ಶರ್ಮಾ!

Jaydev Unadkat Cricket News: ಜುಲೈ 20 ರಿಂದ ಟ್ರಿನಿಡಾಡ್‌ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ ನಿಂದ ನಾಯಕ ರೋಹಿತ್ ಶರ್ಮಾ ಈ ಆಟಗಾರನನ್ನು ಕೈಬಿಡುವ ಲಕ್ಷಣಗಳು ಕಾಣುತ್ತಿದೆ.

Written by - Bhavishya Shetty | Last Updated : Jul 17, 2023, 10:12 AM IST
    • ಟ್ರಿನಿಡಾಡ್‌ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ
    • ವೇಗದ ಬೌಲರ್ ಜಯದೇವ್ ಉನದ್ಕತ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.
    • 2010 ರಿಂದ 2023ರ ವರೆಗೆ, ಈ ಆಟಗಾರ ಭಾರತಕ್ಕಾಗಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ
13 ವರ್ಷಗಳಲ್ಲಿ ಕಬಳಿಸಿದ್ದು ಕೇವಲ 3 ವಿಕೆಟ್: ಈ ಕಳಪೆ ಆಟಗಾರನಿಗೆ ‘ಗೆಟ್ ಔಟ್’ ಎಂದ ರೋಹಿತ್ ಶರ್ಮಾ!  title=
Jaydev Unadkat

Jaydev Unadkat, IND vs WI 2nd Test: ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಮೊದಲ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 141 ರನ್‌ ಗಳಿಂದ ಗೆದ್ದಿದೆ. ಆದರೆ ನಾಯಕ ರೋಹಿತ್ ಶರ್ಮಾ ಅವರ ದೃಷ್ಟಿಯಲ್ಲಿ ಈ ಕ್ರಿಕೆಟಿಗ ಯಾವುದೇ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಅಷ್ಟೇ ಅಲ್ಲದೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಈ ಆಟಗಾರನ ಕ್ರಿಕೆಟ್ ಜೀವನ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದ್ದು, ಜುಲೈ 20 ರಿಂದ ಟ್ರಿನಿಡಾಡ್‌ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಈ ಸರಣಿಯನ್ನು ವಶಪಡಿಸಿಕೊಳ್ಳಲು ಕಾತುರದಿಂದ ಕಾಯುತ್ತಿದೆ.

ಇದನ್ನೂ ಓದಿ: Viral Video: ವೈರಲ್ ಆದ ಬುಮ್ರಾ ಬಿರುಗಾಳಿ ಬೌಲಿಂಗ್...!

ಜುಲೈ 20 ರಿಂದ ಟ್ರಿನಿಡಾಡ್‌ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ ನಿಂದ ನಾಯಕ ರೋಹಿತ್ ಶರ್ಮಾ ಈ ಆಟಗಾರನನ್ನು ಕೈಬಿಡುವ ಲಕ್ಷಣಗಳು ಕಾಣುತ್ತಿದೆ. ಕಳಪೆ ಪ್ರದರ್ಶನದಿಂದಾಗಿ ಈ ಕ್ರಿಕೆಟಿಗ ನಾಯಕ ರೋಹಿತ್ ಶರ್ಮಾ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಇನ್ಮುಂದೆ ಅವಕಾಶ ನೀಡಲು ಹಿಂಜರಿಯುವ ಸ್ಥಿತಿ ತಲುಪಿದೆ.

ನಾಯಕ ರೋಹಿತ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ 11ರಿಂದ ವೇಗದ ಬೌಲರ್ ಜಯದೇವ್ ಉನದ್ಕತ್ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ಗೆ ಅವಕಾಶ ನೀಡಬಹುದು ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಟ್ರಿನಿಡಾಡ್‌’ನ ಪಿಚ್ ಸ್ಪಿನ್ ಬೌಲರ್‌’ಗಳಿಗೆ ನೆರವಾಗಲಿದೆ. ಮೂವರು ಸ್ಪಿನ್ನರ್‌’ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಟ್ರಿನಿಡಾಡ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ವೇಗದ ಬೌಲರ್ ಗಳಾಗಿ ಸ್ಥಾನ ಪಡೆಯಲಿದ್ದಾರೆ.

ನಾಯಕ ರೋಹಿತ್ ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಜಯದೇವ್ ಉನದ್ಕತ್ ಗೆ ಅವಕಾಶ ನೀಡಿದ್ದರು, ಆದರೆ ಈ ಆಟಗಾರ ಯಾವುದೇ ಪ್ರಭಾವಶಾಲಿ ಆಟ ಪ್ರದರ್ಶನ ಮಾಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯದೇವ್ ಉನದ್ಕತ್ ಒಂದೇ ಒಂದು ವಿಕೆಟ್ ಪಡೆದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಇದನ್ನೂ ಓದಿ: 2ನೇ ಟೆಸ್ಟ್’ಗೆ ಟೀಂ ಇಂಡಿಯಾ Playing 11 ರೆಡಿ: ಮೊದಲ ಪಂದ್ಯದ ಗೆಲುವಿಗೆ ಕಾರಣವಾದವ ಔಟ್.. ಈ ಆಟಗಾರ ಇನ್!

2010 ರಿಂದ 2023ರ ವರೆಗೆ, ಈ ಆಟಗಾರ ಭಾರತಕ್ಕಾಗಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆಡಿದ ಮೂರು ಪಂದ್ಯದಲ್ಲಿ ಕಬಳಿಸಿದ್ದು ಕೂಡ 3 ವಿಕೆಟ್ ಮಾತ್ರ. 13 ವರ್ಷಗಳಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಿರುವ ಈ ವೇಗದ ಬೌಲರ್ ವೃತ್ತಿಜೀವನವನ್ನು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅಂತ್ಯಗೊಳಿಸುತ್ತಾರಾ ಎಂದು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News