IND vs ENG 5th test : ಅನೇಕ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲೂ ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ರೋಹಿತ್ ಪಡೆ ಮಾರ್ಚ್ 7 ರಂದು ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದೆ. ಸರಣಿಯ ಮೊದಲ ಪಂದ್ಯದ ನಂತರ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಗಾಯಗೊಂಡಿದ್ದು, ತಂಡದಿಂದ ಹೊರಗುಳಿದಿದ್ದರು. ಕಳೆದ ಮೂರು ಟೆಸ್ಟ್ಗಳಲ್ಲಿ ರಾಹುಲ್ ವಾಪಸಾಗಿರಲಿಲ್ಲ. ಇದೀಗ ಕೊನೆಯ ಟೆಸ್ಟ್ ನಲ್ಲಿಯೂ ರಾಹುಲ್ ವಾಪಾಸಾಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವ ಕೆಎಲ್ ರಾಹುಲ್ :
ಕಳೆದ ವರ್ಷ, ಕೆಎಲ್ ರಾಹುಲ್ ಬಲ ಭುಜದ ಶಸ್ತ್ರಚಿಕಿತ್ಗೆ ಒಳಗಾಗಿದ್ದರು. ಇದೀಗ ಕೆಎಲ್ ರಾಹುಲ್ ತೀವ್ರ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೂರನೇ ಟೆಸ್ಟ್ಗೂ ಮುನ್ನ ರಾಹುಲ್ ಶೇ.90ರಷ್ಟು ಫಿಟ್ ಆಗಿದ್ದಾರೆ ಎನ್ನವ ಸುದ್ದಿ ಹೊರ ಬಿದ್ದಿತ್ತು. ಆದರೂ ಅವರು ತಂಡಕ್ಕೆ ಮರಳಿರಲಿಲ್ಲ.ವರದಿಯ ಪ್ರಕಾರ, ಗಾಯದ ಕಾರಣ, ರಾಹುಲ್ ಅವರನ್ನು ಲಂಡನ್ಗೆ ಕಳುಹಿಸಲಾಗಿದೆ. ಕೆಎಲ್ ರಾಹುಲ್ ಅವರ ಗಾಯವನ್ನು ಎನ್ಸಿಎಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಹುಲ್ ಲಂಡನ್ ನಿಂದ ಹಿಂದಿರುಗಿರುವ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಇದೀಗ 5ನೇ ಟೆಸ್ಟ್ ನಲ್ಲಿ ರಾಹುಲ್ ಮೈದಾನಕ್ಕೆ ಇಳಿಯುವುದು ಕಷ್ಟ ಎನ್ನಲಾಗುತ್ತಿದೆ.
ಇದನ್ನೂ ಓದಿ : Yashasvi jaiswal: 7 ಟೆಸ್ಟ್ಗಳ ಅಪೂರ್ವ ದಾಖಲೆಗಳಿಂದ ಕ್ರಿಕೆಟ್ ದಂತಕಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಟಾರ್ ಬ್ಯಾಟ್ಸ್ಮನ್ ಈತ!
ಜಸ್ಪ್ರೀತ್ ಬುಮ್ರಾ ಅಪ್ಡೇಟ್ ಏನು? :
ವರ್ಕ್ ಲೋಡ್ ಮ್ಯಾನೇಜ್ಮೆಂಟ್ ಹಿನ್ನೆಲೆಯಲ್ಲಿ ಬೌಲರ್ ಜಸ್ಪ್ರೀತ್ ಬುಮ್ರಾಗೆ ನಾಲ್ಕನೇ ಟೆಸ್ಟ್ನಲ್ಲಿ ವಿಶ್ರಾಂತಿ ನೀಡಲಾಗಿತ್ತು. ಬುಮ್ರಾ ಬದಲಿಗೆ ಆಟವಾಡಿದ ಫಾಸ್ಟ್ ಬೌಲರ್ ಆಕಾಶ್ ದೀಪ್ ಅದ್ಭುತ ಪ್ರದರ್ಶನ ನೀಡಿದ್ದರು. ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಕೊನೆಯ ಟೆಸ್ಟ್ನಲ್ಲಿ ತಂಡಕ್ಕೆ ಮರಳುವುದು ಖಚಿತ.ಕೊನೆಯ ಟೆಸ್ಟ್ನಲ್ಲಿ ಕೆಲವು ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳಿಗೆ ವಿಶ್ರಾಂತಿ ನೀಡಬಹುದು.
ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ :
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಿಕೊಳ್ಳಲಾಗಿತ್ತು.ಆದರೆ,ವೈಯಕ್ತಿಕ ಕಾರಣಗಳಿಂದ ಅವರು ವಿರಾಮ ತೆಗೆದುಕೊಂಡಿದ್ದರು. ನಂತರ ಅವರು ತಮ್ಮ ಹೆಸರನ್ನು ಸರಣಿಯಿಂದ ಹಿಂತೆಗೆದುಕೊಂಡರು.ಇದೀಗ ಎರಡನೇ ಬಾರಿಗೆ ತಂದೆಯಾಗಿರುವ ಕೊಹ್ಲಿ ತಂಡಕ್ಕೆ ಮರಳಲು ಎಷ್ಟು ದಿನ ಬೇಕು ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : Virat Kohli: ಅಕಾಯ್ ಜನನದ ನಂತರ ಸೋಷಿಯಲ್ ಮಿಡಿಯಾದಲ್ಲಿ ಕೊಹ್ಲಿ ರೆಕಾರ್ಡ್! ಏನದು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.