ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಐದು ವಿಕೆಟ್ ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೊಲ್ಕತ್ತಾ ತಂಡವು ಆರಂಭದಲ್ಲಿ ಬೀಗುವಿನ ಬೌಲಿಂಗ್ ದಾಳಿ ನಡೆಸಿ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ನಾಲ್ಕು ವಿಕೆಟ್ ಕಬಳಿಸುವ ಮೂಲಕ 20 ಓವರ್ ಗಳಲ್ಲಿ 161 ರನ್ ಗಳಿಗೆ ನಿಯಂತ್ರಿಸಿತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ ಐದು ಬೌಂಡರಿಗಳೊಂದಿಗೆ 52 ರನ್ ಗಳಿದರು.
ಇದನ್ನೂ ಓದಿ: "ದುಡ್ಡು ಹಾಳಾದ್ರೆ ಹೇಗೋ ಸಂಪಾದಿಸಬಹುದು, ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದಿಸೋದು?" ಅದಿತಿ ಹೀಗೆ ಹೇಳಿದ್ದೇಕೆ?
Match Report - @patcummins30 stunned everyone with his batting prowess by equalling the record of joint-fastest half-century in the IPL as #KKR chased down the target of 162 with four overs to spare - by @mihirlee_58
More here - https://t.co/2ZlEmA6Eai #TATAIPL #KKRvMI pic.twitter.com/3pS1gpOaTe
— IndianPremierLeague (@IPL) April 6, 2022
ಇದನ್ನೂ ಓದಿ: KKR vs MI, IPL 2022: ಕೆಕೆಆರ್ ಮತ್ತು ಮುಂಬೈ ಕದನದಲ್ಲಿ ಗೆಲುವು ಯಾರಿಗೆ..?
ಕೊನೆಯಲ್ಲಿ ತಿಲಕ್ ವರ್ಮಾ ಅವರು 27 ಎಸೆತಗಳಲ್ಲಿ 38 ರನ್ ಗಳಿಸಿದರೆ, ಪೋಲ್ಲಾರ್ಡ್ ಅವರು ಐದು ಎಸೆತಗಳಲ್ಲಿ ಮೂರು ಸಿಕ್ಸರ್ ಗಳ ನೆರವಿನಿಂದ 22 ರನ್ ಗಳಿಸಿದರು.ಆ ಮೂಲಕ 161 ರನ್ ಗಳ ಗಡಿಯನ್ನು ತಲುಪಲು ನೆರವಾದರು.ಕೋಲ್ಕತ್ತಾ ತಂಡದ ಪರವಾಗಿ ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಕಬಳಿಸಿದರೆ ಉಮೇಶ್ ಯಾದವ್ ಹಾಗೂ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ‘ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’
161 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ತಂಡವು 16 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿಯನ್ನು ತಲುಪಿತು.ಕೋಲ್ಕತ್ತಾ ತಂಡದ ಪರವಾಗಿ ವೆಂಕಟೇಶ್ ಅಯ್ಯರ್ 50, ಪ್ಯಾಟ್ ಕಮಿನ್ಸ್ 56 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.