ನವೆಂಬರ್ 22 ಕ್ಕೆ ಬಾಂಗ್ಲಾ ವಿರುದ್ಧ ಮೊದಲು ಹೊನಲು ಬೆಳಕಿನ ಟೆಸ್ಟ್...!

ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆಸಬೇಕೆಂಬ ಬಹುದಿನದ ಕನಸು ಈಗ ನನಸಾಗಲಿದೆ. ಆ ಮೂಲಕ ಈಗ ಕ್ರಿಕೆಟ್ ಅಭಿಮಾನಿಗಳು ಇನ್ನು ಮುಂದೆ ರಾತ್ರಿ ವೇಳೆ ಸಹಿತ ಟೆಸ್ಟ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

Last Updated : Oct 29, 2019, 07:27 PM IST
ನವೆಂಬರ್ 22 ಕ್ಕೆ ಬಾಂಗ್ಲಾ ವಿರುದ್ಧ ಮೊದಲು ಹೊನಲು ಬೆಳಕಿನ ಟೆಸ್ಟ್...!    title=
file photo

ನವದೆಹಲಿ: ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆಸಬೇಕೆಂಬ ಬಹುದಿನದ ಕನಸು ಈಗ ನನಸಾಗಲಿದೆ. ಆ ಮೂಲಕ ಈಗ ಕ್ರಿಕೆಟ್ ಅಭಿಮಾನಿಗಳು ಇನ್ನು ಮುಂದೆ ರಾತ್ರಿ ವೇಳೆ ಸಹಿತ ಟೆಸ್ಟ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನವೆಂಬರ್ 22 ರಿಂದ ಪ್ರಾರಂಭವಾಗುವ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ಭಾರತದ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತದೆ ಎಂದು ಪಿಟಿಐಗೆ ತಿಳಿಸಿದ್ದಾರೆ.

ಹಗಲು-ರಾತ್ರಿ ಟೆಸ್ಟ್ ಪಂದ್ಯದ ಬಿಸಿಸಿಐ ಪ್ರಸ್ತಾಪಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಂಗಳವಾರ ಅನುಮೋದನೆ ನೀಡಿದೆ. ದೀಪಗಳ ಅಡಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಸಾಧ್ಯತೆಯ ಬಗ್ಗೆ ಹಿರಿಯ ಆಟಗಾರರೊಂದಿಗೆ ಸಭೆ ನಡೆಸಿದ ನಂತರ ಬಿಸಿಬಿ ತಮ್ಮ ನಿರ್ಧಾರವನ್ನು ಪ್ರಕಟಿಸಿತು. ಹೊನಲು-ಬೆಳಕಿನ ಟೆಸ್ಟ್ ತನ್ನ ಕಾರ್ಯಸೂಚಿಯ ಒಂದು ದೊಡ್ಡ ಭಾಗವಾಗಿದೆ ಎಂದು ಸೌರವ್ ಗಂಗೂಲಿ ಸ್ಪಷ್ಟಪಡಿಸಿದರು ಮತ್ತು ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

'ಇದು ಉತ್ತಮ ಬೆಳವಣಿಗೆಯಾಗಿದೆ. ಟೆಸ್ಟ್ ಕ್ರಿಕೆಟ್‌ಗೆ ಈ ಪುಶ್ ಅಗತ್ಯವಿದೆ. ನಾನು ಮತ್ತು ನನ್ನ ತಂಡವು ಇದಕ್ಕೆ ಬೆಂಬಲ ನೀಡಿದೆ, ವಿರಾಟ್ ಗೆ ಧನ್ಯವಾದಗಳು, ಅವರು ಒಪ್ಪಿಕೊಂಡಿದ್ದಾರೆ' ಎಂದು ಗಂಗೂಲಿ ಪಿಟಿಐಗೆ ತಿಳಿಸಿದರು. ಇನ್ನೊಂದೆಡೆಗೆ ದೇಶದ ಒಲಿಂಪಿಕ್ಸ್ ವೀರರನ್ನು ಸನ್ಮಾನಿಸಲು ಬಿಸಿಸಿಐ ಕೂಡ ಈ ಸಂದರ್ಭವನ್ನು ಬಳಸಿಕೊಳ್ಳಲು ಬಯಸಿದೆ ಎಂದು ಗಂಗೂಲಿ ಹೇಳಿದ್ದಾರೆ.

ನವೆಂಬರ್ 2015 ರಲ್ಲಿ ಅಡಿಲೇಡ್ ನ ಓವಲ್‌ನಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಆಡಲಾಯಿತು.

Trending News