ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಲೇಡಿ ಗಾಗಾ ಬರುವುದು ಕನಸಷ್ಟೇ!

ಈ ವರ್ಷದ ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಲೇಡಿ ಗಾಗಾ, ಕೈಟೀ ಪ್ಯಾರಿ ಮತ್ತು ಬ್ರಿಯಾನ್ ಆಡಮ್ಸ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಕೆಲವು ಸಮಸ್ಯೆಗಳಿಂದಾಗಿ ಸಾಧ್ಯವಾಗಿಲ್ಲ.

Last Updated : Apr 2, 2018, 06:48 PM IST
  • ಏಪ್ರಿಲ್ 7ರಂದು ಮುಂಬೈನಲ್ಲಿ ಐಪಿಎಲ್ ಉದ್ಘಾಟನಾ ಕಾರ್ಯಕ್ರಮ
  • ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್, ಪ್ರಭುದೇವ ಮತ್ತು ಪರಿಣೀತಿ ಚೋಪ್ರಾ ಅವರಿಂದ ಪ್ರದರ್ಶನ
  • ಬಜೆಟ್ ಅಭಾವದಿಂದ ಲೇಡಿ ಗಾಗಾ ಆಹ್ವಾನಿಸುತ್ತಿಲ್ಲ.
ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಲೇಡಿ ಗಾಗಾ ಬರುವುದು ಕನಸಷ್ಟೇ!

ನವದೆಹಲಿ: ಈ ವರ್ಷದ ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಲೇಡಿ ಗಾಗಾ, ಕೈಟೀ ಪ್ಯಾರಿ ಮತ್ತು ಬ್ರಿಯಾನ್ ಆಡಮ್ಸ್ ಅವರನ್ನು ಆಹ್ವಾನಿಸಲು ಯೋಜಿಸಲಾಗಿತ್ತು. ಆದರೆ ಬಜೆಟ್ ಅಭಾವದಿಂದಾಗಿ ಐಪಿಎಲ್'ನ ಎಲ್ಲಾ ಪ್ಲಾನ್ ಫ್ಲಾಪ್ ಆಗಿದೆ. ಇದೀಗ ಇವರಿಗೆ ಬದಲಾಗಿ ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್, ಪ್ರಭುದೇವ ಮತ್ತು ಪರಿಣೀತಿ ಚೋಪ್ರಾ ಅವರು ಏಪ್ರಿಲ್ 7ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.

ಐಪಿಎಲ್ ಆಡಳಿತ ಮಂಡಳಿಯು ಈ ವರ್ಷದ ಉದ್ಘಾಟನಾ ಸಮಾರಂಭವನ್ನು ಏಪ್ರಿಲ್ 6 ರಂದು ಪಂದ್ಯಾವಳಿಯ ಪ್ರಾರಂಭಕ್ಕೆ ಒಂದು ದಿನದ ಮುಂಚಿತವಾಗಿ ಭವ್ಯವಾದ ಕಾರ್ಯಕ್ರಮ ಏರ್ಪಡಿಸಿ ಆಯೋಜಿಸಲು ನಿರ್ಧರಿಸಿತ್ತು. ಇದಕಾಗಿ 50 ಕೋಟಿ ರೂಪಾಯಿಗಳ ಬಜೆಟ್ ಕೂಡ ಸಿದ್ದಪಡಿಸಿತ್ತು. ಆದರೆ ನಿರ್ವಾಹಕರ ಸಮಿತಿ (COA) ಅದನ್ನು 30 ಕೋಟಿ ರೂ.ಗಳಿಗೆ ಸೀಮಿತಗೊಳಿಸಿದೆ. ಹಾಗಾಗಿ ಆಡಳಿತ ಮಂಡಳಿಯು ಇದೀಗ 18 ಕೋಟಿ ರೂ.ಗಳಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ. 

"COA ನಿರ್ದೇಶನದಂತೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯದ ದಿನದಂದೇ ಅಂದರೆ ಏ.7 ರಂದು ಮುಂಬೈನಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗುವುದು. ಬಾಲಿವುಡ್ ನಟರು ಈ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಗಿರುತ್ತಾರೆ. ಬಜೆಟ್ ಕೊರತೆಯಿಂದಾಗಿ ನಾವು ವಿದೇಶಿ ನಟರನ್ನು ಆಹ್ವಾನಿಸದಿರಲು ನಿರ್ಧರಿಸಿದ್ದೇವೆ. ಆದರೆ ಬಾಲಿವುಡ್ ನಟರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ" ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.

ಈ ಮೊದಲು ರಣವೀರ್ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರ ಭುಜಕ್ಕೆ ಗಾಯವಾಗಿದೆ. ಹಾಗಾಗಿ ಅವರಿಗೆ ಬದಲಾಗಿ ಹೃತಿಕ್ ರೋಶನ್ ಮತ್ತು ಪ್ರಭುದೇವ ಆಗಮಿಸಲಿದ್ದಾರೆ. ಇವರೊಂದಿಗೆ ಜಾಕ್ವಿಲಿನ್ ಫರ್ನಾಂಡೀಸ್, ಪರಿಣೀತಿ ಚೋಪ್ರಾ ಮತ್ತು ವರುಣ್ ಧವನ್ ಕೂಡಾ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. 

More Stories

Trending News