ಶ್ರೀಲಂಕಾ ವಿರುದ್ಧದ ಟಿ20 ಗೆ ಹಾರ್ದಿಕ್ ಪಾಂಡ್ಯ, ಏಕದಿನ ಸರಣಿಗೆ ರೋಹಿತ್ ಸಾರಥ್ಯ

 

Written by - Zee Kannada News Desk | Last Updated : Dec 28, 2022, 12:22 AM IST
  • ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಟಿ20 ತಂಡದ ಭಾಗವಾಗಿರುವುದಿಲ್ಲ
  • ಆದರೆ ರೋಹಿತ್ ಶರ್ಮಾ ಏಕದಿನ ತಂಡದ ಸಾರಥ್ಯವನ್ನುವಹಿಸಲಿದ್ದಾರೆ.
  • ಹಾರ್ದಿಕ್ ಪಾಂಡ್ಯ ಏಕಪಂದ್ಯದಲ್ಲಿ ಉಪನಾಯಕನ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ
ಶ್ರೀಲಂಕಾ ವಿರುದ್ಧದ ಟಿ20 ಗೆ ಹಾರ್ದಿಕ್ ಪಾಂಡ್ಯ, ಏಕದಿನ ಸರಣಿಗೆ ರೋಹಿತ್ ಸಾರಥ್ಯ title=
file photo

ನವದೆಹಲಿ: ಜನವರಿ 3 ರಂದು ಮುಂಬೈನಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಲ್ಲಿ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಮಂಗಳವಾರ ತಡರಾತ್ರಿ ಹೇಳಿಕೆಯಲ್ಲಿ ಪ್ರಕಟಿಸಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಟಿ20 ತಂಡದ ಭಾಗವಾಗಿರುವುದಿಲ್ಲ ಆದರೆ ರೋಹಿತ್ ಶರ್ಮಾ ಏಕದಿನ ತಂಡದ ಸಾರಥ್ಯವನ್ನುವಹಿಸಲಿದ್ದಾರೆ.ಸೂರ್ಯ ಕುಮಾರ ಯಾದವ್ ಟಿ.20 ಸರಣಿಯಲ್ಲಿ ತಂಡದ ಉಪನಾಯಕನ ಸ್ಥಾನವನ್ನು ವಹಿಸಿದರೆ, ಹಾರ್ದಿಕ್ ಪಾಂಡ್ಯ ಏಕಪಂದ್ಯದಲ್ಲಿ ಉಪನಾಯಕನ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ

ರೋಹಿತ್ ಹೆಬ್ಬೆರಳಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಾಗ, ಪಾಂಡ್ಯ ಅವರ ನೇಮಕವು ಶಾಶ್ವತ ಬದಲಾವಣೆಯೇ ಅಥವಾ ಕೇವಲ ಒಂದು ಸರಣಿಗೆ ಮಾತ್ರವೇ ಎಂಬುದರ ಕುರಿತಾಗಿ ಬಿಸಿಸಿಐ ಇನ್ನೂ ಏನು ಹೇಳಿಲ್ಲ.

ಇದನ್ನೂ ಓದಿ : ಅಶಾಂತಿ ಮೂಡಿಸಲು ಬಿಜೆಪಿ ಆಡುತ್ತಿರುವ ನಾಟಕ: ಡಿ ಕೆ ಶಿವಕುಮಾರ್

ಬಾಂಗ್ಲಾದೇಶದ ವಿರುದ್ಧ ಭಾರತದ ಇತ್ತೀಚಿನ ಟೆಸ್ಟ್ ಸರಣಿಯ ಗೆಲುವಿನ ಭಾಗವಾಗಿದ್ದ ರಿಷಭ್ ಪಂತ್ ಎರಡೂ ತಂಡಗಳಿಗೆ ಗೈರುಹಾಜರಾಗಿದ್ದರು. ವಿಕೆಟ್‌ಕೀಪರ್-ಬ್ಯಾಟ್ಸಮನ್ ಇಶಾನ್ ಕಿಶನ್ ಅವರನ್ನು ಏಕದಿನ ಮತ್ತು ಟಿ 20 ಐ ತಂಡಗಳಲ್ಲಿ ಸೇರಿಸಲಾಗಿದೆ. ಟಿ20 ತಂಡದ ಭಾಗವಾಗಿಲ್ಲದ ರಾಹುಲ್, ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಮೀಸಲಿರಿಸಲಾಗಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್ ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಶ್ದೀಪ್ ಪಟೇಲ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್ ), ಇಶಾನ್ ಕಿಶನ್ (ವಿಕೆಟ್ ಕೀಪರ್ ), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News