ಡೆಲ್ಲಿ vs ಕೊಲ್ಕತ್ತಾ ಪಂದ್ಯ ಟೈನಲ್ಲಿ ಅಂತ್ಯ, ಸೂಪರ್ ಓವರ್ ನಲ್ಲಿ ಡೆಲ್ಲಿಗೆ ಜಯ

ಇಲ್ಲಿನ ಫಿರೋಜ್ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡವು ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡಿತು.ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ತಂಡವು 8 ವಿಕೆಟ್ ಗಳ ನಷ್ಟಕ್ಕೆ 20 ಓವರ್ ಗಳಲ್ಲಿ 185 ರನ್ ಗಳಿಸಿತು.

Last Updated : Mar 31, 2019, 11:06 AM IST
ಡೆಲ್ಲಿ vs ಕೊಲ್ಕತ್ತಾ ಪಂದ್ಯ ಟೈನಲ್ಲಿ ಅಂತ್ಯ, ಸೂಪರ್ ಓವರ್ ನಲ್ಲಿ ಡೆಲ್ಲಿಗೆ ಜಯ  title=
Photo courtesy: Twitter

ನವದೆಹಲಿ: ಇಲ್ಲಿನ ಫಿರೋಜ್ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡವು ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡಿತು.ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ತಂಡವು 8 ವಿಕೆಟ್ ಗಳ ನಷ್ಟಕ್ಕೆ 20 ಓವರ್ ಗಳಲ್ಲಿ 185 ರನ್ ಗಳಿಸಿತು.

ಕೊಲ್ಕತ್ತಾ ಪರ  ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ದಿನೇಶ್ ಕಾರ್ತಿಕ್ 50 ಹಾಗೂ ಆಂಡ್ರೆ ರಸೆಲ್ 62 ರನ್ ಗಳನ್ನು ಗಳಿಸುವ ಮೂಲಕ ತಂಡದ ಉತ್ತಮ ಮೊತ್ತಕ್ಕೆ ಕಾರಣವಾದರು.ರಸೆಲ್ ಅಂತು ಕೇವಲ 28 ಎಸೆತಗಳಲ್ಲಿ ಆರು ಭರ್ಜರಿ 6 ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರು.

ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡವು ಪೃಥ್ವಿ ಷಾ ಅವರ ಭರ್ಜರಿ ಬ್ಯಾಟಿಂಗ್ ತಂಡಕ್ಕೆ ಆಸರೆಯಾಯಿತು.ಷಾ ಕೇವಲ 55 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 99 ರನ್ ಗಳಿಸಿದರು.ಇನ್ನೊಂದೆಡೆಗೆ ಶ್ರೇಯಸ್ ಅಯ್ಯರ್ 43 ರನ್ ಗಳಿಸಿ ತಂಡಕ್ಕೆ ನೆರವಾದರು. ಡೆಲ್ಲಿ ತಂಡವು ಕೂಡ 185 ರನ್ ಗಳಿಸುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಈ ಹಿನ್ನಲೆಯಲ್ಲಿ ನಂತರ ಸೂಪರ್ ಓವರ್ ಮೂಲಕ ಪಂದ್ಯವನ್ನು ಡೆಲ್ಲಿ ತಂಡವು ಗೆದ್ದಿತು.

Trending News