ಶಮಿ ಪತ್ನಿಯ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಕೆಂಡಾಮಂಡಲವಾದ ಫ್ಯಾನ್ಸ್! ಏನಿದೆ ಆ ಪೋಸ್ಟ್ ನಲ್ಲಿ?

Hasin Jahan Post :ಶಮಿ ಅವರ ಪತ್ನಿ ಹಸಿನ್ ಜಹಾನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.  ಈ ಪೋಸ್ಟ್ ಬಗ್ಗೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. 

Written by - Ranjitha R K | Last Updated : Nov 1, 2023, 12:52 PM IST
  • ಫೋಟೋ ಹಂಚಿಕೊಂಡ ಹಸಿನ್ ಜಹಾನ್
  • ಎತ್ತು ಹಾಲು ಕೊಡಲು ಶುರು ಮಾಡಿದೆಯಾ?
  • ಶಮಿ ವಿರುದ್ಧ ಕೇಳಿ ಬಂದಿತ್ತು ಈ ಆರೋಪ
ಶಮಿ ಪತ್ನಿಯ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಕೆಂಡಾಮಂಡಲವಾದ  ಫ್ಯಾನ್ಸ್! ಏನಿದೆ ಆ ಪೋಸ್ಟ್ ನಲ್ಲಿ?  title=

Hasin Jahan Post : ಭಾರತ ತಂಡ ಪ್ರಸ್ತುತ ODI ವಿಶ್ವಕಪ್-2023 ರಲ್ಲಿ ಪ್ರಬಲ ಪ್ರದರ್ಶನ ನೀಡುತ್ತಿದೆ. ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕೂಡಾ ತಮ್ಮ ಬೌಲಿಂಗ್ ಮೂಲಕ ಎದುರಾಳಿ ತಂಡದ ಬೆವರಿಳಿಸುತ್ತಿದ್ದಾರೆ. ಈ ಮಧ್ಯೆ, ಶಮಿ ಅವರ ಪತ್ನಿ ಹಸಿನ್ ಜಹಾನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.  ಈ ಪೋಸ್ಟ್ ಬಗ್ಗೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.   

ಫೋಟೋ ಹಂಚಿಕೊಂಡ ಹಸಿನ್ ಜಹಾನ್ :
ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಎತ್ತಿನೊಂದಿಗೆ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಈ ಪೋಸ್ಟ್ ನಲ್ಲಿ ಅವರು ಬರೆದಿರುವ ಸಾಲುಗಳೇ ವಿವಾದಕ್ಕೆ ಕಾರಣವಾಗಿರುವುದು. 'ನಾನು ಮತ್ತು ಅಮ್ರೋಹಾದ ಎಮ್ಮೆ. ಇದೀಗ ನಾನು ಅದರ ಹಾಲನ್ನು ತೆಗೆದುಕೊಳ್ಳುತ್ತಿದ್ದೇನೆ. ಕೆಲವು ದಿನಗಳ ನಂತರ ಅದರ ಮಾಂಸವನ್ನು ತಿನ್ನುತ್ತೇನೆ ಎಂದು ಹಸಿನ್ ಜಹಾನ್  ಬರೆದಿದ್ದಾರೆ. ಅವರು 2 ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಅವರು ನಗುವ ಎಮೋಜಿಯನ್ನು ಕೂಡಾ ಸೇರಿಸಿದ್ದಾರೆ. ಶಮಿ ಕೂಡಾ ಉತ್ತರ ಪ್ರದೇಶದ ಅಮ್ರೋಹಾ ನಿವಾಸಿ. ಹಸೀನ್ ಅವರ ಈ ಪೋಸ್ಟ್‌ನಿಂದ ಅನೇಕ ಅಭಿಮಾನಿಗಳು ಕೋಪಗೊಂಡಿದ್ದಾರೆ.

ಇದನ್ನೂ ಓದಿ : ಯಾವುದೇ ಕಾರಣಕ್ಕೂ ಈ ಆಟಗಾರನನ್ನು ತಂಡದಿಂದ ಹೊರಗಿಡುವುದಿಲ್ಲ ರೋಹಿತ್ ! ನಾಳೆಯ ಪಂದ್ಯದ Playing 11 ಚಿತ್ರಣ ಸ್ಪಷ್ಟ !

ಎತ್ತು ಹಾಲು ಕೊಡಲು ಶುರು ಮಾಡಿದೆಯಾ?'
ಹಸೀನ್ ಅವರ ಈ ಪೋಸ್ಟ್‌ಗೆ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಎತ್ತು ಯಾವಾಗಿಂದ ಹಾಲು ಕೊಡಲು ಆರಂಭಿಸಿತು ಎಂದು ಪ್ರಶ್ನಿಸಿದ್ದಾರೆ.  ನೀವು ಶಮಿಗೆ ಅರ್ಹರಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ನೀವು ಶಮಿ ಭಾಯಿಗೆ ಬಹಳ ಕಷ್ಟ ಕೊಟ್ಟಿದ್ದೀರಿ. ಈಗ ಅವರು ದೇಶಕ್ಕೆ ಕೀರ್ತಿ ತರುತ್ತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ. ಅಂದ ಹಾಗೆ ವಿಶ್ವಕಪ್‌ನಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಹಾಗೂ ಇಂಗ್ಲೆಂಡ್ ವಿರುದ್ಧ 4 ವಿಕೆಟ್  ಕಬಳಿಸಿದ್ದಾರೆ. 

 

ಇದನ್ನೂ ಓದಿ : ICC Cricket World Cup 2023: ಬಾಂಗ್ಲಾ ವಿರುದ್ಧ ಪಾಕ್ ಗೆ ಏಳು ವಿಕೆಟ್ ಗಳ ಸುಲಭ ಜಯ

ಶಮಿ ವಿರುದ್ಧ ಆರೋಪ  : 
ಪಶ್ಚಿಮ ಬಂಗಾಳದ ಅಲಿಪೋರ್ ನ್ಯಾಯಾಲಯವು ಸೆಪ್ಟೆಂಬರ್‌ನಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿಗೆ 2,000 ರೂಪಾಯಿಗಳ ಜಾಮೀನು ಬಾಂಡ್‌ ಆಧಾರದ ಮೇಲೆ ಜಾಮೀನು ನೀಡಿತ್ತು. ಶಮಿ ಅಲಿಪುರ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು. 2018 ರಲ್ಲಿ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಹಸೀನ್ ಜಹಾನ್ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಮೊಹಮ್ಮದ್ ಶಮಿ ಮತ್ತು ಅವರ ಕೆಲವು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಶಮಿ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News