ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ.. ಪಂದ್ಯದ ವೇಳೆ ಗಾಯಗೊಂಡು ಬೂಮ್ರಾ ನರಳಾಟ!! ತಂಡದಲ್ಲಿ ಮುಂದುವರೆಯುವುದು ಡೌಟ್‌?!

Jasprit Bumrah: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡದ ನಡುವಿನ ಪಿಂಕ್‌ ಬಾಲ್‌ ಟೆಸ್ಟ್‌ ಈಗಾಗಲೆ ಶುರುವಾಗಿದೆ, ಆಸಿಸ್‌ ಕಲಿಗಳ ವಿರುದ್ಧ ಭಾರತ ತಂಡದ ಆಟಗಾರರು ಬಿರುಸಿನ ಆಟವಾಡುತ್ತಿದ್ದಾರೆ. ಅದರಲ್ಲೂ ವೇಗಿ ಬೂಮ್ರಾ ಅವರು ತಮ್ಮ ಬೌಲಿಂಗ್‌ ಮೂಲಕ ಎದುರಾಳಿಗಳ ಬೆವರಿಳಿಸುತ್ತಿದ್ದು, ಇದೀಗ ಗಾಯಗೊಂಡಿದ್ದಾರೆ.  

Written by - Zee Kannada News Desk | Last Updated : Dec 8, 2024, 07:44 AM IST
  • ಆಸಿಸ್‌ ಕಲಿಗಳ ವಿರುದ್ಧ ಭಾರತ ತಂಡದ ಆಟಗಾರರು ಬಿರುಸಿನ ಆಟವಾಡುತ್ತಿದ್ದಾರೆ.
  • ಬೂಮ್ರಾ ಅವರು ತಮ್ಮ ಬೌಲಿಂಗ್‌ ಮೂಲಕ ಎದುರಾಳಿಗಳ ಬೆವರಿಳಿಸುತ್ತಿದ್ದು, ಇದೀಗ ಗಾಯಗೊಂಡಿದ್ದಾರೆ.
  • ಬೂಮ್ರಾ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್‌ ಟೆಸ್ಟ್‌ ಪಂದ್ಯದ ವೇಲೆ ನಿನ್ನೆ ಗಾಯಗೊಂಡಿದ್ದಾರೆ.
ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ.. ಪಂದ್ಯದ ವೇಳೆ ಗಾಯಗೊಂಡು ಬೂಮ್ರಾ ನರಳಾಟ!! ತಂಡದಲ್ಲಿ ಮುಂದುವರೆಯುವುದು ಡೌಟ್‌?!  title=

Jasprit Bumrah: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡದ ನಡುವಿನ ಪಿಂಕ್‌ ಬಾಲ್‌ ಟೆಸ್ಟ್‌ ಈಗಾಗಲೆ ಶುರುವಾಗಿದೆ, ಆಸಿಸ್‌ ಕಲಿಗಳ ವಿರುದ್ಧ ಭಾರತ ತಂಡದ ಆಟಗಾರರು ಬಿರುಸಿನ ಆಟವಾಡುತ್ತಿದ್ದಾರೆ. ಅದರಲ್ಲೂ ವೇಗಿ ಬೂಮ್ರಾ ಅವರು ತಮ್ಮ ಬೌಲಿಂಗ್‌ ಮೂಲಕ ಎದುರಾಳಿಗಳ ಬೆವರಿಳಿಸುತ್ತಿದ್ದು, ಇದೀಗ ಗಾಯಗೊಂಡಿದ್ದಾರೆ.

ಹೌದು, ಬೂಮ್ರಾ ಅವರು ಟೀಂ ಇಂಡಿಯಾ ತಂಡಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹೀಗಿರುವಾಗ ಬೂಮ್ರಾ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್‌ ಟೆಸ್ಟ್‌ ಪಂದ್ಯದ ವೇಲೆ ನಿನ್ನೆ (ಡಿ.7) ಗಾಯಗೊಂಡಿದ್ದಾರೆ. ವಿಷಯ ತಿಳಿದು ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಇದೀಗ  ಬೂಮ್ರಾ ಅವರ ಸ್ಥಿತಿಯ ಕುರಿತು ಬೌಲಿಂಗ್‌ ಕೋಚ್‌ ಟೀಂ ಇಂಡಿಯಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾಗವಾಗಿ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡುವಾಗ ಜಸ್ಪ್ರೀತ್ ಬುಮ್ರಾ ತೀವ್ರವಾಗಿ ಗಾಯಗೊಂಡಿದ್ದರು. ಮೊದಲ ಇನಿಂಗ್ಸ್‌ನ 81ನೇ ಓವರ್‌ನಲ್ಲಿ ಬೂಮ್ರಾ ಅವರು ಬೌಲಿಂಗ್‌ ಮಾಡುವ ವೇಳೆ ಗಾಯಕ್ಕೆ ತುತ್ತಾದರು. ಬೌಲಿಂಗ್‌ ಮಾಡುವ ವೇಲೆ ಬೂಮ್ರಾ ಕೆಳಗೆ ಬಿದ್ದಿದ್ದರು, ಇದನ್ನು ನೋಡುತ್ತಿದ್ದಂತೆ, ಕಾಮೆಂಟರಿ ಮಾಡುತ್ತಿದ್ದ ರವಿ ಶಾಸ್ತ್ರಿ ಅರು ಬೂಮ್ರಾ ಅವರ ಸ್ನಾಯುಗಳಿಗೆ ಗಾಯವಾಗಿದೆ ಎಂದು ಜೋರಾಗಿ ಕಿರುಚಿಕೊಂಡರು, ನಂತರ ಸ್ವಲ್ಪ ಹೊತ್ತಿನಲ್ಲೆ ಎದ್ದು ನಿಂತು ಚೇತರಿಸಿಕೊಂಡ ಬೂಮ್ರಾ ಅವರು ಅದರ ನಂತರ ಮೂರು ಓವರ್‌ ಬೌಲಿಂಗ್‌ ಮಾಡಿ, ಎರಡು ವಿಕೆಟ್‌ ಪಡೆದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. 

ಎರಡನೇ ದಿನದಾಟದ ಬಳಿಕ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಮಾಧ್ಯಮಗಳೊಂದಿಗೆ ಮಾತನಾಡಿ ಬೂಮ್ರಾ ಅವರ ಸ್ಥಿತಿಯ ಕುರಿತು ಅಪ್ಡೇಟ್‌ ನೀಡಿದ್ದಾರೆ. ಬುಮ್ರಾ ಗಾಯಗೊಂಡಿಲ್ಲ, ಅವರಿಗೆ ಸೆಳೆತವಿದೆ  ಎಂದು ಸ್ಪಷ್ಟ ಪಡಿಸಿದರು. ಇದೀಗ ಬೂಮ್ರಾ ಅವರ ಸ್ಥಿತಿಯ ಕುರಿತು ಕ್ಲಾರಿಟಿ ಸಿಕ್ಕ ನಂತರ ಟೀಂ ಇಂಡಿಯಾ ಅಭಿಮಾನಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಬೂಮ್ರಾ ಅವರು ಫೀಲ್ಡ್‌ನಲ್ಲಿ ಬಿದ್ದು ನರಳಾಡಿದ್ದನ್ನು ನೋಡಿ ಟೀಂ ಇಂಡಿಯಾ ಅಭಿಮಾನಿಗಳು, ಬೂಮ್ರಾ ಅವರು ಎಲ್ಲಿ ಈ ಟೆಸ್ಟ್‌ ಪಂದ್ಯದಿಂದ ಹೊರಗೆ ಉಳಿತ್ತಾರೋ ಎಂದು ಭಾವಿಸಿದ್ದರು. ಆದರೆ, ಇದೀಗ ಬೂಮ್ರಾ ಅವರ ಸ್ಥಿತಿಯ ಕುರಿತು ಕ್ಲಾರಿಟಿ ಸಿಕ್ಕ ಮೇಲೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News