IND vs NZ : Kanpur ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಖಚಿತ!

ಟೀಂ ಇಂಡಿಯಾ ಕ್ಯಾಪ್ಟನ್ ಅಜಿಂಕ್ಯ ರಹಾನೆ 234/7 ಸ್ಕೋರ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಆಗ ವೃದ್ಧಿಮಾನ್ ಸಹಾ ಔಟಾಗದೆ 61 ಹಾಗೂ ಅಕ್ಷರ್ ಪಟೇಲ್ 28 ರನ್ ಗಳಿಸಿದರು, ಹೀಗಾಗಿ ಕಿವೀಸ್ ತಂಡಕ್ಕೆ 284 ರನ್ ಗಳ ಗುರಿ ಸಿಕ್ಕಿತು.

Written by - Channabasava A Kashinakunti | Last Updated : Nov 28, 2021, 08:05 PM IST
  • ನ್ಯೂಜಿಲೆಂಡ್‌ಗೆ 284 ರನ್‌ಗಳ ಗುರಿ
  • ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ತುಂಬಾ ಕಷ್ಟ
  • ಟೀಂ ಇಂಡಿಯಾ ಈಗ 9 ವಿಕೆಟ್‌ ಹೊಂದಿದೆ
IND vs NZ : Kanpur ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಖಚಿತ! title=

ನವದೆಹಲಿ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ (India vs Australia) ನಾಲ್ಕನೇ ದಿನ 'ಅಜಿಂಕ್ಯ ರಹಾನೆ ಪಡೆ' ಕಿವೀಸ್ ತಂಡದ ಮೇಲೆ ಹಿಡಿತ ಸಾಧಿಸಿದೆ. ಇನ್ನು 5ನೇ ದಿನ ಒಂಟೆ ಯಾವ ಭಾಗದಲ್ಲಿ ಕೂರಲಿದೆ ಎಂಬುದು ನಿರ್ಧಾರವಾಗಲಿದೆ.

283ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ 

ಟೀಂ ಇಂಡಿಯಾ ಕ್ಯಾಪ್ಟನ್ ಅಜಿಂಕ್ಯ ರಹಾನೆ(Ajinkya Rahane) 234/7 ಸ್ಕೋರ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಆಗ ವೃದ್ಧಿಮಾನ್ ಸಹಾ ಔಟಾಗದೆ 61 ಹಾಗೂ ಅಕ್ಷರ್ ಪಟೇಲ್ 28 ರನ್ ಗಳಿಸಿದರು, ಹೀಗಾಗಿ ಕಿವೀಸ್ ತಂಡಕ್ಕೆ 284 ರನ್ ಗಳ ಗುರಿ ಸಿಕ್ಕಿತು.

ಇದನ್ನೂ ಓದಿ : India vs New Zealand 1st Test: ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ ಶ್ರೇಯಸ್ ಅಯ್ಯರ್

ನ್ಯೂಜಿಲೆಂಡ್‌ಗೆ ಈಗ 280 ರನ್‌ಗಳ ಅಗತ್ಯವಿದೆ

ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಕೇವಲ 3 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ರವಿಚಂದ್ರನ್ ಅಶ್ವಿನ್ ವೈಯಕ್ತಿಕ ಸ್ಕೋರ್ 2ರಲ್ಲಿ ವಿಲ್ ಯಂಗ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಸದ್ಯ ಕಿವೀಸ್ ತಂಡ 1 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿದೆ. ಟಾಮ್ ಲ್ಯಾಥಮ್ 2 ಮತ್ತು ವಿಲಿಯಂ ಸೊಮರ್ವಿಲ್ಲೆ ಶೂನ್ಯ ರನ್‌ಗಳಿಗೆ ಔಟಾಗದೆ ಉಳಿದರು.

ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕಷ್ಟ

ಕಾನ್ಪುರದ ಗ್ರೀನ್ ಪಾರ್ಕ್(Green Park Stadium) ಇತಿಹಾಸವನ್ನು ಗಮನಿಸಿದರೆ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗುರಿಯನ್ನು ಬೆನ್ನಟ್ಟುವುದು ತುಂಬಾ ಕಷ್ಟ. ಇಲ್ಲಿ ಮೊದಲ 3 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಸರಾಸರಿ 30 ರ ಸಮೀಪದಲ್ಲಿದೆ, ಆದರೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅದು 20 ರ ಆಸುಪಾಸಿನಲ್ಲಿ ಆಗುತ್ತದೆ.

ಗ್ರೀನ್ ಪಾರ್ಕ್‌ನಲ್ಲಿ ಭಾರತದ ಗೆಲುವು ಏಕೆ ಖಚಿತ?

ಗ್ರೀನ್ ಪಾರ್ಕ್‌ನಲ್ಲಿ ಇದುವರೆಗಿನ ಅತ್ಯಂತ ಯಶಸ್ವಿ ರನ್ ಚೇಸ್ 83 ಆಗಿದೆ. ಟೀಂ ಇಂಡಿಯಾ(Team India) 1999 ರಲ್ಲಿ ಕೊನೆಯ ಇನಿಂಗ್ಸ್ ಅನ್ನು 80.2 ಓವರ್‌ಗಳಲ್ಲಿ ಮುಗಿಸಿತು. ನಂತರ ಸಚಿನ್ ತೆಂಡೂಲ್ಕರ್ 44* ಮತ್ತು ದೇವಾಂಗ್ ಗಾಂಧಿ 31* ರನ್ ಗಳಿಸಿ 8 ವಿಕೆಟ್‌ಗಳಿಂದ ಗೆದ್ದರು. ಇದರ ಪ್ರಕಾರ ಸೋಮವಾರ 284 ರನ್‌ಗಳ ಗುರಿಯನ್ನು ಕಿವೀಸ್ ತಂಡ ಸಾಧಿಸುವುದು ಸುಲಭವಲ್ಲ.

ಇದನ್ನೂ ಓದಿ : IND vs NZ: ಮುಂದಿನ ಪಂದ್ಯದಿಂದ ಡ್ರಾಪ್ ಅಗಲಿದ್ದಾರೆ Ajinkya Rahane, ಈ ಆಟಗಾರ ಆಗಲಿದ್ದಾರೆ ಉಪ ನಾಯಕ

ಕಾನ್ಪುರದಲ್ಲಿ ಅತ್ಯಂತ ಯಶಸ್ವಿ ಟೆಸ್ಟ್ ರನ್ ಚೇಸ್

1. ನ್ಯೂಜಿಲೆಂಡ್ ವಿರುದ್ಧ ಭಾರತ 83/2 ಗಳಿಸಿತು (1999)
2. ಭಾರತದ ವಿರುದ್ಧ ಇಂಗ್ಲೆಂಡ್ 76/2 ಗಳಿಸಿತು (1952)
3. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 64/2 ಗಳಿಸಿತು (2008)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News