ಪುಣೆ: ಟಾಸ್ ಗೆದ್ದು ಮುಂಬೈ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ತಂಡವು ಐದು ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 169 ರನ್ ಗಳಿಸಿತು.
The Hitman has done it for @mipaltan. An unbeaten 56 from @ImRo45 has handed #MI a crucial 8-wicket win. #CSKvMI #VIVOIPL
Details - https://t.co/BVGc5hwnsB pic.twitter.com/aBs9VmYXSD
— IndianPremierLeague (@IPL) April 28, 2018
ಚೆನ್ನೈ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸುರೇಶ ರೈನಾ ಕೇವಲ 47 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಆರು ಬೌಂಡರಿಗಳೊಂದಿಗೆ 75 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಅಂಬಟಿ ರಾಯ್ದು 46 ರನ್ ಗಳಿಸಿದರು. ಇದರೊಂದಿಗೆ ಚೆನ್ನೈ ತಂಡವು 169 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಮುಂಬೈ ತಂಡವು ಸಂಘಟನಾತ್ಮಕ ಪ್ರದರ್ಶನದೊಂದಿಗೆ 19.4 ಓವರ್ ಗಳಲ್ಲಿ 170 ರನ್ ಗಳಿಸಿತು.ಮುಂಬೈ ಪರ ನಾಯಕ ರೋಹಿತ್ ಶರ್ಮಾ(56) ಎವಿನ್ ಲೆವಿಸ್(47) ಸುರ್ಯಕುಮಾರ್ ಯಾದವ್ (44) ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.