ಐಪಿಎಲ್2018: ಮುಂಬೈ ಬೌಲಿಂಗ್ ದಾಳಿಗೆ ಕಂಗಾಲಾದ ಕೊಲ್ಕತ್ತಾ

    

Last Updated : May 10, 2018, 12:01 AM IST
ಐಪಿಎಲ್2018: ಮುಂಬೈ ಬೌಲಿಂಗ್ ದಾಳಿಗೆ ಕಂಗಾಲಾದ ಕೊಲ್ಕತ್ತಾ title=

ಕೊಲ್ಕತ್ತಾ : ಈಡನ್ ಗಾರ್ಡನ್ ನಲ್ಲಿ ಟಾಸ್ ಗೆದ್ದು  ಬೌಲಿಂಗ್ ಆಯ್ದುಕೊಂಡ ಕೊಲ್ಕತ್ತಾ ತಂಡವು ಮುಂಬೈ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ವಿಫಲವಾಯಿತು. 

ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡವು ಇಶಾನ್ ಕಿಶನ್ ರವರ ಭರ್ಜರಿ ಅರ್ಧಶತಕದ(62) ನೆರವಿನಿಂದ 20 ಓವರ್ ಗಳಲ್ಲಿ  6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. Iಇಶಾನ್ ಕೇವಲ  21 ಎಸೆತಗಳಲ್ಲಿ  6 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಮುಂಬೈ ಸುಸ್ಥಿತಿಗೆ ತಲುಪುವಂತೆ ಮಾಡಿದರು. ಮುಂಬೈ ಪರ ಸೂರ್ಯಕುಮಾರ್ ಯಾದವ್(36) ರೋಹಿತ್ ಶರ್ಮಾ(36) ನೆರವಿಂದ ಉತ್ತಮ ಮೊತ್ತಗಳಿಸುವಲ್ಲಿ ಯಶಸ್ವಿಯಾಯಿತು. 

211 ರನ್ ಗಳ ಗುರಿ ಬೆನ್ನತ್ತಿದ ಕೊಲ್ಕತ್ತಾ ತಂಡವು ತವರಿನ ಲಾಭ ಪಡೆಯುವಲ್ಲಿ ಸಂಪೂರ್ಣ ವಿಫಲವಾಯಿತು. ಕ್ರಿಸ್ ಲೈನ್ ( 21) ಹಾಗೂ ನಿತೀಶ್ ರಾಣಾ ( 21) ಅವರನ್ನು ಹೊರತು ಪಡಿಸಿದರೆ ಯಾರೂ ಕೂಡ 20ರ ಗಡಿಯನ್ನು ದಾಟಲಿಲ್ಲ. ಮುಂಬೈ ಪರ ಭರ್ಜರಿ ಬೌಲಿಂಗ್ ದಾಳಿ ಮಾಡಿದ ಪಾಂಡ್ಯ ಸಹೋದರರು ತಲಾ ಎರಡು ವಿಕೆಟಗಳನ್ನು ಪಡೆದು ಕೊಲ್ಕತ್ತಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

 

Trending News