ಐಪಿಎಲ್ 2018: ಮುಂಬೈಗೆ ಕೋಲ್ಕತ್ತಾ ವಿರುದ್ದ 13 ರನ್ ಗಳ ಗೆಲುವು

    

Last Updated : May 6, 2018, 08:41 PM IST
 ಐಪಿಎಲ್ 2018: ಮುಂಬೈಗೆ ಕೋಲ್ಕತ್ತಾ ವಿರುದ್ದ 13 ರನ್ ಗಳ ಗೆಲುವು

ಮುಂಬೈ: ಕೊಲ್ಕತ್ತಾ ತಂಡವು ಮುಂಬೈ ವಿರುದ್ದ  ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮುಂಬೈ ನ ಸೂರ್ಯ ಕುಮಾರ್ ಯಾದವ್ ಅವರ ಭರ್ಜರಿ( 59) ಅರ್ಧ ಶತಕದ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು. ಇವರಿಗೆ ಹಾರ್ದಿಕ ಪಾಂಡ್ಯ(35) ಎವಿನ್ ಲೆವಿಸ್ (43) ನೆರವು ನೀಡಿದರು. 

ಮುಂಬೈ ನೀಡಿದ 182 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 168 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಕೋಲ್ಕತ್ತಾ ಪರ ರಾಬಿನ್ ಉತ್ತಪ್ಪ ಅರ್ಧಶತಕ(54)ದ ಮೂಲಕ ಉತ್ತಮ ಆರಂಭ ಹಾಕಿಕೊಟ್ಟರು. ನಂತರ ನಿತೀಶ್ ರಾಣಾ( 31 ) ಮತ್ತು ದಿನೇಶ್ ಕಾರ್ತಿಕ್ (36) ಗೆಲುವಿಗೆ ಪ್ರಯಾಸ ಪಟ್ಟರು ಸಹಿತ  ಕೊಲ್ಕತಾ ತಂಡವು ಗೆಲುವು ಸಾಧಿಸಲು 13 ರನ್ ಗಳ ಕೊರತೆಯುಂಟಾಯಿತು.

ಮುಂಬೈ ತಂಡದ ಪರ ಹಾರ್ಧಿಕ್ ಪಾಂಡ್ಯ ನಾಲ್ಕು ಓವರ್ ಗಳಲ್ಲಿ  ಕೇವಲ 19 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಆ ಮೂಲಕಕೋಲ್ಕತ್ತಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

More Stories

Trending News