Team India: ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಈ ಮಾರಕ ಬೌಲರ್: ಸಿಗುತ್ತಾ ಚಾನ್ಸ್?

India A vs Bangladesh A: ಈ ಬೌಲರ್ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ಟೀಂ ಇಂಡಿಯಾದ ವೇಗದ ಬೌಲರ್ ನವದೀಪ್ ಸೈನಿಗೆ ಕಳೆದ ಹಲವು ಬಾರಿ ಸೀನಿಯರ್ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅವರು ಡೆತ್ ಓವರ್‌ಗಳಲ್ಲಿ ತುಂಬಾ ಅಪಾಯಕಾರಿ ಬೌಲಿಂಗ್ ಮಾಡುತ್ತಾರೆ ಮತ್ತು ತುಂಬಾ ಮಿತವ್ಯಯಕಾರಿ ಎಂದು ಸಾಬೀತುಪಡಿಸುತ್ತಾರೆ. ಆದರೆ ಅವರನ್ನು ದೀರ್ಘಕಾಲದವರೆಗೆ ಟೀಮ್ ಇಂಡಿಯಾದಲ್ಲಿ ಸೇರಿಸಲಾಗುತ್ತಿಲ್ಲ.

Written by - Bhavishya Shetty | Last Updated : Dec 10, 2022, 09:20 AM IST
    • ಭಾರತ ಎ ಮತ್ತು ಬಾಂಗ್ಲಾದೇಶ ಎ ನಡುವೆ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು ನಡೆದಿವೆ
    • ಅನಧಿಕೃತ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಆಟಗಾರನೊಬ್ಬ ಎಲ್ಲರ ಗಮನ ಸೆಳೆದಿದ್ದಾರೆ
    • ನವದೀಪ್ ಸೈನಿಗೆ ಕಳೆದ ಹಲವು ಬಾರಿ ಸೀನಿಯರ್ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ
Team India: ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಈ ಮಾರಕ ಬೌಲರ್: ಸಿಗುತ್ತಾ ಚಾನ್ಸ್? title=
Navdeep Saini

India A vs Bangladesh A: ಭಾರತದ ಹಿರಿಯರ ತಂಡ ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಸದ್ಯ ಉಭಯ ತಂಡಗಳ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ಬಳಿಕ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ಮತ್ತೊಂದೆಡೆ, ಭಾರತ ಎ ಮತ್ತು ಬಾಂಗ್ಲಾದೇಶ ಎ ನಡುವೆ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು ನಡೆದಿವೆ. ಉಭಯ ತಂಡಗಳ ನಡುವೆ ನಡೆದ ಎರಡನೇ ಅನಧಿಕೃತ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಆಟಗಾರನೊಬ್ಬ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: FIFAದಿಂದ ಅರ್ಜೆಂಟಿನಾ ಹೊರಬೀಳುವುದು ಜಸ್ಟ್ ಮಿಸ್: ಎದ್ದು ನಿಂತ ಮೆಸ್ಸಿ ಪಡೆ ಸೆಮೀಸ್ ಪ್ರವೇಶ

ಬೌಲರ್ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ಟೀಂ ಇಂಡಿಯಾದ ವೇಗದ ಬೌಲರ್ ನವದೀಪ್ ಸೈನಿಗೆ ಕಳೆದ ಹಲವು ಬಾರಿ ಸೀನಿಯರ್ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅವರು ಡೆತ್ ಓವರ್‌ಗಳಲ್ಲಿ ತುಂಬಾ ಅಪಾಯಕಾರಿ ಬೌಲಿಂಗ್ ಮಾಡುತ್ತಾರೆ ಮತ್ತು ತುಂಬಾ ಮಿತವ್ಯಯಕಾರಿ ಎಂದು ಸಾಬೀತುಪಡಿಸುತ್ತಾರೆ. ಆದರೆ ಅವರನ್ನು ದೀರ್ಘಕಾಲದವರೆಗೆ ಟೀಮ್ ಇಂಡಿಯಾದಲ್ಲಿ ಸೇರಿಸಲಾಗುತ್ತಿಲ್ಲ.

ನವದೀಪ್ ಸೈನಿ ನಿರಂತರವಾಗಿ 140 ಕಿಲೋಮೀಟರ್‌ಗೂ ಹೆಚ್ಚು ವೇಗದ ಚೆಂಡನ್ನು ಎಸೆಯುವ ಪ್ರತಿಭೆಯನ್ನು ಹೊಂದಿದ್ದಾರೆ. ಬಾಂಗ್ಲಾದೇಶ ಎ ವಿರುದ್ಧ ನಡೆದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ನವದೀಪ್ ಸೈನಿ ಆಲ್ ರೌಂಡರ್ ಆಗಿ ಗಮನ ಸೆಳೆದಿದ್ದಾರೆ. ಪಂದ್ಯದಲ್ಲಿ, ಅವರು ಮೊದಲ ಇನ್ನಿಂಗ್ಸ್‌ನಲ್ಲಿ 68 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 50 ರನ್ ಗಳಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ 15ನೇ ಓವರ್ಗಳಲ್ಲಿ ಬೌಲಿಂಗ್ ಮಾಡುವಾಗ 54 ರನ್ ವ್ಯಯಿಸಿ 2 ವಿಕೆಟ್‌ಗಳನ್ನು ಪಡೆದರು. ಪಂದ್ಯವನ್ನು ಟೀಂ ಇಂಡಿಯಾ 123 ರನ್‌ಗಳಿಂದ ಗೆದ್ದಿದೆ.

ಇದನ್ನೂ ಓದಿ: IND W vs AUS W: 170 ರನ್ ಗಳ ಹೀನಾಯ ಸೋಲುಂಡ ಭಾರತ ಮಹಿಳಾ ಪಡೆ: ಕಾಂಗಾರು ಸೇನೆಗೆ ಭರ್ಜರಿ ಗೆಲುವು

ನವದೀಪ್ ಸೈನಿ 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದ್ದರು. ಐಪಿಎಲ್‌ನಲ್ಲಿ ಈ ಆಟಗಾರ ತನ್ನ ಅಪಾಯಕಾರಿ ಬೌಲಿಂಗ್ ಕೌಶಲ್ಯವನ್ನು ತೋರಿಸಿದ್ದಾನೆ. ಆದರೆ 2021 ರಿಂದ ಟೀಮ್ ಇಂಡಿಯಾದಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ನವದೀಪ್ ಭಾರತ ತಂಡದ ಪರ 2 ಟೆಸ್ಟ್ ಪಂದ್ಯಗಳಲ್ಲಿ 4 ವಿಕೆಟ್, 8 ಏಕದಿನ ಪಂದ್ಯಗಳಲ್ಲಿ 6 ವಿಕೆಟ್ ಹಾಗೂ 11 ಟಿ20 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News