Neeraj Chopra: ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್ ಥ್ರೋ ಆಟಗಾರ, ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಸ್ವಿಜರ್ಲ್ಯಾಂಡ್ನ ಜ್ಯೂರಿಚ್ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಜ್ಯೂರಿಚ್ನಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ : Team India : ಈ ಆಟಗಾರನ ಅನುಪಸ್ಥಿತಿಯಿಂದ ಟೀಂ ಇಂಡಿಯಾಗೆ ಈ ಪರಸ್ಥಿತಿ!
ನಿನ್ನೆ ರಾತ್ರಿ ಫೌಲ್ ಥ್ರೋನೊಂದಿಗೆ ಆಟ ಪ್ರಾರಂಭಿಸಿದ ನೀರಜ್ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ಎಸೆದರು. ನೀರಜ್, ನಂತರದ ಪ್ರಯತ್ನದಲ್ಲಿ ಕ್ರಮವಾಗಿ 88.0 ಮೀ., 86.11 ಮೀ, 87.00 ಮೀಟರ್, 83.60 ಮೀ. ಎಸೆಯುವ ಮೂಲಕ ಪದಕಕ್ಕೆ ಮುತ್ತಿಕ್ಕಿದರು. ಅಲ್ಲದೇ, ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವವನ್ನು ಪಡೆದುಕೊಂಡರು.
Golden boy brings home Diamond.
1st Indian to win a Diamond League Trophy.#NeerajChopra #ZurichDL #DLFinal #DiamondLeagueFinal pic.twitter.com/QwhjcwErbT— Jinit Shirke (@MrShirke_411) September 9, 2022
ಇನ್ನೂ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 86.94 ಮೀಟರ್ ಎಸೆದು ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್ ಅವರು 83.73 ಮೀಟರ್ಗಳ ಅತ್ಯುತ್ತಮ ಎಸೆತದೊಂದಿಗೆ ತೃತಿಯ ಸ್ಥಾನಕ್ಕೆ ತೃಪ್ತಿಪಟ್ಟರು.
ಗೋಲ್ಡನ್ ಬಾಯ್ ಈಸ್ ಅನ್ಸ್ಟಾಪಬಲ್! #ZurichDL ನಲ್ಲಿ 88.4 ಮೀಟರ್ಗಳಷ್ಟು ಬೃಹತ್ ಎಸೆತದೊಂದಿಗೆ ಡೈಮಂಡ್ಲೀಗ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾದ ನೀರಜ್ ಚೋಪ್ರಾಗೆ ಅಭಿನಂದನೆಗಳು. ನಾವು ತುಂಬಾ ಹೆಮ್ಮೆಪಡುತ್ತೇವೆ! ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : ಸಾವಿರ ದಿನಗಳ ಕಾಯವಿಕೆ ಅಂತ್ಯ, ಶತಕ‘ವೀರ’ನಿಗೆ ಪ್ರಶಂಸೆಗಳ ಮಹಾಪೂರ
ನೀರಜ್ ಚೋಪ್ರಾ ಈ ಹಿಂದೆ ಎರಡು ಡೈಮಂಡ್ ಲೀಗ್ನಲ್ಲಿ ಭಾಗವಹಿಸಿದ್ದರು. 2017ರಲ್ಲಿ 7ನೇ ಸ್ಥಾನ, 2018ರಲ್ಲಿ 4ನೇ ಸ್ಥಾನ ಪಡೆದಿದ್ದರು. ಜುಲೈ 24 ರಂದು ಯುಎಸ್ಎಯ ಯುಜೀನ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಆದರೆ ಗಾಯಗೊಂಡ ಹಿನ್ನೆಲೆ ನೀರಜ್ ಚೋಪ್ರಾ ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾಲ್ಗೊಂಡಿರಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.